ಕೇವಲ 5 ಗಂಟೆಯಲ್ಲಿ ಆಕ್ಸ್‌ಫರ್ಡ್ ನಲ್ಲಿ ವ್ಯಾಸಂಗ ಮಾಡಲು ಕ್ರೌಡ್‌ಫಂಡಿಂಗ್ ಮೂಲಕ 37 ಲಕ್ಷ ಸಂಗ್ರಹಿಸಿದ ದಲಿತ ವಿದ್ಯಾರ್ಥಿ

ಒರಿಸ್ಸಾ ಮೂಲದ ದಲಿತ ರಾಪ್ ಹಾಡುಗಾರ ಸುಮಿತ್ ಲಂಡನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಎಂಎಸ್‌ಸಿ ವ್ಯಾಸಂಗ ಮಾಡಲು ಕ್ರೌಡ್‌ಫಂಡಿಂಗ್ ಮೂಲಕ 37 ಲಕ್ಷ ರೂ. ಸಂಗ್ರಹಿಸಿದ್ದಾರೆ.

ಸುಮಿತ್ ದೆಹಲಿಯ ಪ್ರತಿಷ್ಠಿತ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆ.ಎನ್.ಯು) ಬಿ ಎ ಮತ್ತು ಎಂ ಎ ವ್ಯಾಸಂಗ ಮಾಡಿದ್ದಾರೆ.

ಸುಮಿತ್ ರವರು ನವೆಂಬರ್ 2020 ರಲ್ಲಿ ಆಕ್ಸ್‌ಫರ್ಡ್‌ನ ಸಂತ ಅಂಥೋನಿ ಕಾಲೇಜಿನಲ್ಲಿ ಮಾಡರ್ನ್ ಸೌತ್ ಏಷ್ಯನ್ ಸ್ಟಡೀಸ್‌ನಲ್ಲಿ ಎಂಎಸ್‌ಸಿಗಾಗಿ ಅರ್ಜಿ ಸಲ್ಲಿಸಿದ್ದರು ಮತ್ತು ಈ ವರ್ಷದ ಜನವರಿಯಲ್ಲಿ ಕೋರ್ಸ್‌ಗೆ ಆಯ್ಕೆಯಾದರು.

ಒಂದು ವರ್ಷದ ಕೋರ್ಸ್ ಶುಲ್ಕ 25 ಲಕ್ಷ ರೂ, ಮತ್ತು ವಸತಿ ಖರ್ಚು 15 ಲಕ್ಷ ರೂ., ಒಟ್ಟು 40 ಲಕ್ಷ ಬೇಕಿತ್ತು, ಆದರೆ ಶಾಲಾ ಶಿಕ್ಷಕರಾಗಿರುವ ಸುಮಿತ್ ತಂದೆಗೆ ೩-೪ ಲಕ್ಷ ಹಣವನ್ನು ನೀಡಲು ಸಾಧ್ಯವಾಗಿತ್ತು. ಇದರಿಂದಾಗಿ ಕ್ರೌಡ್‌ಫಂಡಿಂಗ್ ಮೊರೆ ಹೋದ ಸುಮಿತ್ ಕೇವಲ 5 ಗಂಟೆಯಲ್ಲಿ 37 ಲಕ್ಷ ಹಣವನ್ನು ಸಂಗ್ರಹಿಸಿದರು.

ತನ್ನ ಭಾರತ ಮತ್ತು ಪಾಕಿಸ್ತಾನದಲ್ಲಿರುವ ತನ್ನ ಸ್ನೇಹಿತರ ಸಲಹೆಯ ಮೇಲೆ ನಾನು ಕ್ರೌಡ್‌ಫಂಡಿಂಗ್ ವೆಬ್ಸೈಟ್ ಮಿಲಾಪ್ ಮೂಲಕ ಹಣ ಸಂಗ್ರಹಿಸಲು ಮುಂದಾದೆ ಎಂದು ಸುಮಿತ್ ಹೇಳಿಕೊಂಡಿದ್ದಾರೆ.

ಸುಮಿತ್ ಒಬ್ಬ ಸಾಮಾಜಿಕ ಕಾರ್ಯಕರ್ತ ಕೂಡ ಆಗಿದ್ದಾರೆ. ದಲಿತರ ಮೇಲೆ ನಡೆಯುವ ದೌರ್ಜನ್ಯಗಳನ್ನು ರಾಪ್ ಹಾಡುಗಳ ಮೂಲಕ ಜಾಗೃತಿ ಮಾಡುವ ಕಾರ್ಯವನ್ನು ಬಹಳ ವರ್ಷಗಳಿಂದ ಸುಮಿತ್ ಮಾಡುತ್ತಿದ್ದಾರೆ.

Latest Indian news

Popular Stories