ಇವಿಎಮ್-ವಿವಿಪ್ಯಾಟ್ ಪ್ರಕರಣ: ಎಲ್ಲ ಅರ್ಜಿ ವಜಾಗೊಳಿಸಿ ಸುಪ್ರೀಂ ಆದೇಶ

ನವದೆಹಲಿದಿ: ಇವಿಎಂಗಳಲ್ಲಿ ಬೀಳುವ ಮತ ಮತ್ತು ವಿವಿಪ್ಯಾಟ್‌ ಸ್ಲಿಪ್‌ಗಳನ್ನೂ ಶೇ 100ರಷ್ಟು ಎಣಿಕೆ ಮಾಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಇಂದು ವಜಾಗೊಳಿಸಿ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರ ದ್ವಿಸದಸ್ಯ ಪೀಠವು ಏಕಕಾಲದಲ್ಲಿ ಆದರೆ ಪ್ರತ್ಯೇಕ ತೀರ್ಪು ಪ್ರಕಟಿಸಿದೆ.

“ಸಮತೋಲಿತ ದೃಷ್ಟಿಕೋನವು ಮುಖ್ಯವಾಗಿದ್ದರೂ, ವ್ಯವಸ್ಥೆಯನ್ನು ಕುರುಡಾಗಿ ಸಂದೇಹಿಸುವುದು ಸಂದೇಹವನ್ನು ಹುಟ್ಟುಹಾಕುತ್ತದೆ ಮತ್ತು ಅರ್ಥಪೂರ್ಣ ಟೀಕೆಗಳ ಅಗತ್ಯವಿದೆ. ನ್ಯಾಯಾಂಗ, ಶಾಸಕಾಂಗ ಇತ್ಯಾದಿ, ಪ್ರಜಾಪ್ರಭುತ್ವವು ಎಲ್ಲಾ ಆಧಾರ ಸ್ತಂಭಗಳ ನಡುವೆ ಸಾಮರಸ್ಯ ಮತ್ತು ನಂಬಿಕೆಯನ್ನು ಕಾಪಾಡಿಕೊಳ್ಳುವುದು. ನಂಬಿಕೆಯ ಸಂಸ್ಕೃತಿಯನ್ನು ಪೋಷಿಸುವ ಮೂಲಕ ಸಹಯೋಗ ನೀಡಿ ನಾವು ನಮ್ಮ ಪ್ರಜಾಪ್ರಭುತ್ವದ ಧ್ವನಿಯನ್ನು ಬಲಪಡಿಸಬಹುದು ”ಎಂದು ನ್ಯಾಯಮೂರ್ತಿ ದತ್ತಾ ತೀರ್ಪಿನಲ್ಲಿ ಹೇಳಿದರು.

Latest Indian news

Popular Stories