ಅಂಧ ಸರಕಾರ: ಮತ್ತೆ ಏರಿಕೆಯಾದ ಇಂಧನ ಬೆಲೆ – ಗ್ರಾಹಕ ಕಂಗಾಲು!

ಹೊಸದಿಲ್ಲಿ: ಪೆಟ್ರೋಲ್‌, ಡೀಸೆಲ್‌ ದರ ಕಂಡು ಜನ ಸಾಮಾನ್ಯರು ನಿಗಿ ನಿಗಿ ಕೆಂಡವಾಗುತ್ತಿರುವಾಗಲೇ ದೇಶದಲ್ಲಿ ಮತ್ತೆ ಇಂಧನ ದರ ಏರಿಕೆಯಾಗಿದೆ. ದಿನ ನಿತ್ಯ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಕಾಣುತ್ತಿದ್ದು, ಇಂದು ಮತ್ತೆ ಈ ದರದಲ್ಲಿ ಏರಿಕೆ ಕಂಡಿದೆ. ಅಕ್ಟೋಬರ್‌ 15ನೆಯ ದಿನವಾದ ಇಂದು (ಶುಕ್ರವಾರ) ಕೂಡ ತೈಲ ದರ ಏರಿಕೆಯಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಗ್ಗಿನ ವೇಳೆಗೆ ಪ್ರತೀ ಒಂದು ಲೀಟರ್ ಪೆಟ್ರೋಲ್‌ಗೆ 36 ಪೈಸೆ ಏರಿದರೆ, ಪ್ರತೀ ಒಂದು ಲೀಟರ್‌ ಡೀಸೆಲ್‌ ದರದಲ್ಲಿ 37 ಪೈಸೆ ಏರಿಕೆ ಕಂಡಿದೆ.

ಇಂದು ಕೂಡ ಏರಿಕೆಯಾಗುವ ಮೂಲಕ ಕಳೆದ ಅನೇಕ ಸಮಯದಿಂದ ಪ್ರತಿ ನಿತ್ಯ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಕಂಡಂತೆ ಆಗಿದೆ. ಇನ್ನು ಜನರ ಅತ್ಯವಶ್ಯಕ ವಸ್ತುವಾಗಿರುವ ಇಂಧನದ ದರ ಏರಿಕೆಯಿಂದ ಜನ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇನ್ನೊಂದೆಡೆ ರಾಜ್ಯ ಹಾಗೂ ಕೇಂದ್ರಗಳು ಪೆಟ್ರೋಲ್‌, ಡೀಸೆಲ್‌ ಮೇಲೆ ವಿಧಿಸಿರುವ ಸುಂಕವನ್ನು ಕಡಿತಗೊಳಿಸುವಂತೆ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಆದರೆ ಸುಂಕ ಕಡಿತಗೊಳಿಸುವುದಿಲ್ಲ ಎಂದು ಈಗಾಗಲೇ ಕೇಂದ್ರ ಸ್ಪಷ್ಟನೆ ನೀಡಿದೆ.

ಇನ್ನು ಈಗಾಗಲೇ ಪೆಟ್ರೋಲ್ ದರ ಶತಕದ ಗಡಿ ದಾಟಿದ್ದು, ಡೀಸೆಲ್ ಬೆಲೆ ಶತಕದ ಸನಿಹ ತಲುಪಿದೆ. ಇದರ ಪರಿಣಾಮ ವಾಹನ ಸವಾರರು ಅಂತೂ ಅತ್ತ ಉಗಿಯಲೂ ಆಗದೆ ಇತ್ತ ನುಂಗಲೂ ಆಗದಂತಹ ಪರಿಸ್ಥಿತಿಯಲ್ಲಿದ್ದಾರೆ.

Latest Indian news

Popular Stories