ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಧಾರ್ಮಿಕ ವಿದ್ವಾಂಸರ ಪತ್ರಿಕಾಗೋಷ್ಟಿ

ಉಡುಪಿ: ಹೈಕೋರ್ಟ್ ಉಚ್ಚ ನ್ಯಾಯಾಲಯದ ಹಿಜಾಬ್ ಕುರಿತಾದ ತೀರ್ಪಿನ ಹಿನ್ನಲೆಯಲ್ಲಿ ಇಂದು ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಧಾರ್ಮಿಕ ವಿದ್ವಾಂಸರ ಪತ್ರಿಕಾಗೋಷ್ಟಿ ಹಮ್ಮಿಕೊಳ್ಳಲಾಗಿತ್ತು.

ಮಾನ್ಯ ಉಚ್ಚ ನ್ಯಾಯಾಲಯ ತೀರ್ಪಿನಲ್ಲಿ ಹಿಜಾಬ್ ಇಸ್ಲಾಮಿನ ಮೂಲಭೂತ ಭಾಗವಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿರುವುದು ವಿದ್ಯಾರ್ಥಿನಿಯರಲ್ಲಿ ಆತಂಕ ಸೃಷ್ಟಿಸಿದೆ ಎಂದು ಧಾರ್ಮಿಕ ವಿದ್ವಾಂಸರು ಅಭಿಪ್ರಾಯಪಟ್ಟರು. ಈ ತೀರ್ಪು ಮೂಲಭೂತ ಹಕ್ಕು ಮತ್ತು ಸಂವಿಧಾನದ ಮೌಲ್ಯಕ್ಕೆ ತಕ್ಕುದಲ್ಲ. ಯಾವುದು ಧರ್ಮದ ಭಾಗ ಯಾವುದೂ ಅಲ್ಲ ಎಂದು ನ್ಯಾಯಾಲಯ ತೀರ್ಮಾನಿಸಲು ಹೋಗಿರುವುದು ಆಘಾತಕಾರಿಯಾಗಿದೆ. ಹಿಜಾಬ್ ಇಸ್ಲಾಮಿನ ಅತ್ಯಗತ್ಯ ಭಾಗ ಎಂಬುವುದರಲ್ಲಿ ಎಲ್ಲರೂ ಒಮ್ಮತಾಭಿಪ್ರಾಯ ಹೊಂದಿದ್ದಾರೆ ಎಂದು ಹೇಳಿದರು.

ಈ ತೀರ್ಪು ಅಂತಿಮಲ್ಲ. ಸರ್ವೋಚ್ಚ ನ್ಯಾಯಲಯದಲ್ಲಿ ಪ್ರಶ್ನಿಸಲಾಗಿದೆ. ಮಾನ್ಯ ಸರ್ವೋಚ್ಚ ನ್ಯಾಯಾಲಯವು ಧಾರ್ಮಿಕ ಮತ್ತು ಶಿಕ್ಷಣದ ಹಕ್ಕನ್ನು ಎತ್ತಿ ಹಿಡಿಯಲಿದೆ ಎಂಬ ವಿಶ್ವಾಸವಿದೆ ಎಂದರು.

ಈ ಸಂದರ್ಭದಲ್ಲಿ ಧಾರ್ಮಿಕ ವಿದ್ವಾಂಸರಾದ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಇಬ್ರಾಹೀಮ್ ಕೋಟ, ಮೌ.ಅಬ್ದುಲ್ ಲತೀಫ್ ಮದನಿ, ಮೌ.ಇಮ್ರಾನುಲ್ಲಾ ಖಾನ್ ಮನ್ಸೂರಿ, ಹೈದರಲಿ ಆಹ್ವಾನಿ ಮುಸ್ಲಿಯಾರ್, ಹಾಜಿ ಎಮ್.ಎ ಬಾವು, ಮೌಲನ ಜಾವೀದ್ ಕಾಸ್ಮಿ, ಮೌಲನ ಝಮೀರ್ ಅಹ್ಮದ್ ರಶಾದಿ, ಮೌಲನ ರಶೀದ್ ಅಹ್ಮದ್ ಉಮರಿ, ಮೌಲನ ಮಸೀವುಲ್ಲಾ ಖಾನ್ ಕಾಸ್ಮಿ, ಶೌಕತ್ ಅಲಿ ರಝ್ವಿ ಉಪಸ್ಥಿತರಿದ್ದರು.

Latest Indian news

Popular Stories