ಉಡುಪಿ: ಸುಬ್ರಹ್ಮಣ್ಯ ನಗರದಲ್ಲಿ ಒಂಟಿ ವೃದ್ಧೆೆಯನ್ನು ಬರ್ಬರವಾಗಿ ಕೊಲೆ ಮಾಡಿದ ದಂಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಉಡುಪಿ, ಜು.7: ನಾಲ್ಕು ವರ್ಷದ ಹಿಂದೆ ಉಡುಪಿ ತಾಲೂಕಿನ ಪುತ್ತೂರು ಸುಬ್ರಹ್ಮಣ್ಯ ನಗರದಲ್ಲಿ ಒಂಟಿ ವೃದ್ಧೆೆಯನ್ನು ಬರ್ಬರವಾಗಿ ಕೊಲೆ ಮಾಡಿದ ದಂಪತಿಗೆ ಗುರುವಾರ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್‌ಸ್‌ ನ್ಯಾಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಧಾರವಾಡ ತಾಲ್ಲೂಕಿನ ನವಲಗುಂದ ನಿವಾಸಿಗಳಾದ ಅಂಬಣ್ಣ ಅಲಿಯಾಸ್ ಅಂಬರೀಶ್ ಹಾಗೂ ಆತನ ಪತ್ನಿಿ ರಶೀದಾ ಅಲಿಯಾಸ್ ಜ್ಯೋೋತಿ ಶಿಕ್ಷೆಗೆ ಗುರಿಯಾದವರು. 80 ವರ್ಷ ಪ್ರಾಾಯದ ರತ್ನಾಾವತಿ ಶೇಡ್ತಿಿ ಕೊಲೆಯಾದವರು. ದಂಪತಿಗೆ ಜೀವಾವಧಿ ಶಿಕ್ಷೆಯ ಜತೆಗೆ ತಲಾ 50,000 ರೂ.ದಂಡ ವಿಧಿಸಲಾಗಿದೆ.


ಪ್ರಕರಣದ ವಿವರ:


ರತ್ನಾಾವತಿ ಶೇಡ್ತಿಿ ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಿಯರಿದ್ದು ಪುತ್ತೂರಿನ ಸುಬ್ರಹ್ಮಣ್ಯ ನಗರದಲ್ಲಿ ಒಂಟಿಯಾಗಿ ವಾಸವಾಗಿದ್ದರು. ಮೂರು ಕೊಠಡಿಗಳನ್ನು ಬಾಡಿಗೆ ಕೊಟ್ಟು ಜೀವನ ನಿರ್ವಹಣೆ ಮಾಡುತ್ತಿಿದ್ದರು. ಮಕ್ಕಳು ಆಗಾಗ ಬಂದು ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿಿದ್ದರು. ಜು.5, 2019ರಂದು ಪುತ್ರಿಿ ಸುಪ್ರಭಾ ತಾಯಿಗೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ಕೂಡಲೇ ಸಹೋದರಿಗೆ ಕರೆ ಮಾಡಿ ವಿಚಾರಿಸಿದಾಗಲೂ ತಾಯಿಯ ಬಗ್ಗೆೆ ಮಾಹಿತಿ ಸಿಗುವುದಿಲ್ಲ. ಅದೇ ದಿನ ಸಂಜೆ ಅಮ್ಮನ ಮನೆಗೆ ಬಂದಾಗ ಬೆಡ್‌ರೂಮ್‌ನಲ್ಲಿ ತಾಯಿಯ ಶವ ಕೊಳೆತ ಸ್ಥಿಿತಿಯಲ್ಲಿ ಪತ್ತೆೆಯಾಗಿತ್ತು. ತತ್‌ಕ್ಷಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.


ಆರೋಪಿಗಳು ಬಿಟ್ಟಿಿದ್ದ ಸುಳಿವಿನ ಜಾಡು ಹಿಡಿದ ಪೊಲೀಸರು ಜು.10ರಂದು ಆರೋಪಿ ದಂಪತಿಯನ್ನು ಬಂಧಿಸಿದ್ದರು. ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಜು.2ರಂದು ಮಧ್ಯಾಾಹ್ನ ರತ್ನಾಾವತಿ ಶೇಡ್ತಿಿ ಮನೆಗೆ ನುಗ್ಗಿಿ ಆಭರಣಕ್ಕೆೆ ಬೇಡಿಕೆ ಇಡಲಾಗಿತ್ತು. ಕೊಡಲು ನಿರಾಕರಿಸಿದಾಗ ಕತ್ತಿಿಯಿಂದ ಕೊಲೆ ಮಾಡಿ ಮೈಮೇಲಿದ್ದ ಆಭರಣ, ಮನೆಯಲ್ಲಿದ್ದ ಚಿನ್ನಾಾಭರಣ, ಮೊಬೈಲ್ ಹಾಗೂ 5,000 ರೂ.ನಗದು ದೋಚಿ ಪರಾರಿಯಾಗಿರುವುದಾಗಿ ಆರೋಪಿಗಳು ಒಪ್ಪಿಿಕೊಂಡಿದ್ದರು.


ಅಂದಿನ ಉಡುಪಿ ಇನ್‌ಸ್ಪೆೆಕ್ಟರ್ ಮಂಜುನಾಥ್ ತನಿಖೆ ನಡೆಸಿ ನ್ಯಾಾಯಾಲಯಕ್ಕೆೆ ದೋಷಾರೋಪಣ ಪಟ್ಟಿಿ ಸಲ್ಲಿಸಿದ್ದರು. ಪ್ರಧಾನ ಜಿಲ್ಲಾ ಮತ್ತು ಸೆಷನ್‌ಸ್‌ ನ್ಯಾಾಯಾಲಯದಲ್ಲಿ ಪ್ರಕರಣ ಸಂಬಂಧ 21 ಸಾಕ್ಷಿಗಳ ವಿಚಾರಣೆ ನಡೆದಿತ್ತು. ಪ್ಯಾಾಸಿಕ್ಯೂಷನ್ ಪರವಾಗಿ 53 ದಾಖಲಾತಿ ಹಾಗೂ 6 ಇತರ ವಸ್ತುಗಳನ್ನು ಗುರುತಿಸಲಾಗಿತ್ತು. ಸಾಕ್ಷಿದಾರರ ವಿಚಾರಣೆಯನ್ನು ಪ್ರಧಾನ ಜಿಲ್ಲಾ ಸೆಷನ್‌ಸ್‌ ನ್ಯಾಾಯಾಲಯದ ಸರಕಾರಿ ಅಭಿಯೋಜಕರಾದ ಶಾಂತಿಬಾಯಿ ನಡೆಸಿದ್ದರು.


ಪ್ರಕರಣ 2022ರ ಫೆಬ್ರವರಿಯಲ್ಲಿ 2ನೇ ಹೆಚ್ಚುವರಿ ಜಿಲ್ಲಾ ನ್ಯಾಾಯಾಲಯಕ್ಕೆೆ ವರ್ಗಾವಣೆಯಾಯಿತು. ನ್ಯಾಾಯಾಧೀಶರಾದ ದಿನೇಶ್ ಹೆಗಡೆ ವಾದ- ವಿವಾದಗಳನ್ನು ಆಲಿಸಿ ಆರೋಪಿಗಳ ವಿರುದ್ಧದ ಆರೋಪಗಳು ರುಜುವಾತಾಗಿದೆ ಎಂದು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಜಯರಾಮ ಶೆಟ್ಟಿಿ ವಾದ ಮಂಡಿಸಿದರು.


ಶಿಕ್ಷೆಯ ವಿವರ
ಆರೋಪಿಗಳ ವಿರುದ್ದ ಜೀವಾವಧಿ ಶಿಕ್ಷೆ, 7 ವರ್ಷ ಕಠಿನ ಸಜೆ, 7 ವರ್ಷ ಸಾದಾ ಸಜೆ ಹಾಗೂ 6 ತಿಂಗಳು ಶಿಕ್ಷೆ ವಿಧಿಸಲಾಗಿದ್ದು, ಏಕಕಾಲದಲ್ಲಿ ಅನುಭವಿಸುವಂತೆ ಆದೇಶಿಸಲಾಗಿದೆ.

Latest Indian news

Popular Stories