ಉಡುಪಿ: ಸುಲಿಗೆ, ಮನೆ ಕಳವು ಹಾಗೂ ವಾಹನ ಕಳವು ಪ್ರಕರಣಗಳ ಆರೋಪಿಗಳ ಬಂಧನ – ಮೂರು ಲಕ್ಷ ಮೌಲ್ಯದ ಸೊತ್ತುಗಳು ವಶಕ್ಕೆ!

ಉಡುಪಿ : ಕಾಪು ವೃತ್ತ ಸರಹದ್ದಿನ ನಂದಿಕೂರು ಯು.ಪಿ.ಸಿ.ಎಲ್. ಬಳಿಯ ಮನೆಯಲ್ಲಿದ್ದ ವೃದ್ದೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ, ಉಚ್ಚಿಲ ಪಣಿಯೂರು ಹೋಗುವ ದಾರಿಯಲ್ಲಿರುವ ಮನೆಯೊಂದರಿಂದ ರೂಪಾಯಿ 2,52,000/- ಹಣ ಕಳವು, ಪಡುಬಿದ್ರಿ, ಉಚ್ಚಿಲ, ಕಟಪಾಡಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪಡುಬಿದ್ರಿ ಮತ್ತು ಕಾಪು ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿತ್ತು. ಸುಲಿಗೆ, ಮನೆ ಕಳವು ಹಾಗೂ ವಾಹನ ಕಳವು ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Screenshot 2022 0806 183653 Featured Story, Crime, Udupi

ಪೊಲೀಸ್ ಉಪಾಧೀಕ್ಷಕರು ಕಾರ್ಕಳ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರ ನೇತೃತ್ವದ ತಂಡ ಯಶಸ್ವೀ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಮಹಮ್ಮದ್ ಆರೀಫ್‌ ಅಲಿಯಾಸ್ ಮುನ್ನ, ಮಹಮ್ಮದ್ ಮುನೀರ್ ಮತ್ತು ಅಕ್ಬರ್‌ ಎಂಬವರನ್ನು ದಸ್ತಗಿರಿ ಮಾಡಿದ್ದಾರೆ.

ಆರೋಪಿಗಳಿಂದ ಪ್ರಕರಣಗಳಿಗೆ ಸಂಬಂಧಿಸಿ 2 ½ ಪವನ್ ತೂಕದ ಚಿನ್ನದ ಸರ, ಮೊಬೈಲ್ ಪೋನ್-1, ನಗದು ರೂಪಾಯಿ 61,000/-, ಕಳವು ಮಾಡಿದ 3 ದ್ವಿಚಕ್ರ ವಾಹನ ಹಾಗೂ ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾ-1, ಮೋಟಾರು ಸೈಕಲ್ -1 ಹಾಗೂ ಇತರ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ದಸ್ತಗಿರಿ ಮಾಡಲಾದ ಆರೋಪಿಗಳನ್ನು ಮಹಮ್ಮದ್ ಆರೀಫ್‌ (37),ಮಹಮ್ಮದ್ ಮುನೀರ್(24 ವರ್ಷ), ಅಕ್ಬರ್‌ (36) ಎಂದು ಗುರುತಿಸಲಾಗಿದೆ.

ಮಹಮ್ಮದ್ ಆರೀಫ್‌ ಅಲಿಯಾಸ್ ಮುನ್ನ ಈತನ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆ, ಮುಲ್ಕಿ ಪೊಲೀಸ್ ಠಾಣೆ, ಬಜ್ಪೆ ಪೊಲೀಸ್ ಠಾಣೆ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಹಾಸನ ಸಿಟಿ ಪೊಲೀಸ್ ಠಾಣೆಯ 05 ಪ್ರಕರಣಗಳಲ್ಲಿ ತಲೆ ಮರೆಸಿ ಕೊಂಡಿದ್ದು ಒಟ್ಟು ಈತನ ಮೇಲೆ ಒಟ್ಟು 18 ಪ್ರಕರಣಗಳು ದಾಖಲಾಗಿರುತ್ತದೆ.

ಮಹಮ್ಮದ್ ಮುನೀರ್ ಈತನ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆ, ಹಾಗೂ ಹಾಸನ ಸಿಟಿ ಪೊಲೀಸ್ ಠಾಣೆಯ 02 ಪ್ರಕರಣಗಳಲ್ಲಿ ತಲೆ ಮರೆಸಿ ಕೊಂಡಿದ್ದು ಈತನ ಮೇಲೆ ಒಟ್ಟು 08 ಪ್ರಕರಣಗಳು ದಾಖಲಾಗಿರುತ್ತದೆ.

ಅಕ್ಬರ್ ಈತನ ಮೇಲೆ ಒಟ್ಟು 02 ಪ್ರಕರಣಗಳು ದಾಖಲಾಗಿರುತ್ತದೆ.

20 ಗ್ರಾಂ ತೂಕದ ಸಣ್ಣ ಗುಂಡುಗಳಿರುವ ಎರಡು ಎಳೆಯ ಚಿನ್ನದ ಸರ-1. ಇದರ ಅಂದಾಜು ಮೌಲ್ಯ ರೂ: 90,000/-
SAMSUNG DUOS ಎಂದು ಬರೆದಿರುವ ನೀಲಿ ಬಣ್ಣದ ಕೀ ಪ್ಯಾಡ್‌ನ ಮೊಬೈಲ್‌ ಪೋನ್‌-1, ಅಂದಾಜು ಮೌಲ್ಯ ರೂ: 500/,ನಗದು ರೂ, 61,000/-,ಕೆಎ-20-ಇಜಿ-4203 ನಂಬ್ರದ ದ್ವಿಚಕ್ರ ವಾಹನ ಅಂದಾಜು ಮೌಲ್ಯ ರೂ, 30,000/- ,ಕೆಎ-20-ಎಲ್-2452 ನಂಬ್ರದ ದ್ವಿಚಕ್ರ ವಾಹನ ಅಂದಾಜು ಮೌಲ್ಯ ರೂ, 10,000/-,ಕೆಎ-20-ಇಜಿ-0881 ನಂಬ್ರದ ದ್ವಿಚಕ್ರ ವಾಹನ ಅಂದಾಜು ಮೌಲ್ಯ ರೂ, 25,000/,KA-19-AA-5053 ನಂಬ್ರದ ಬಜಾಜ್‌ ಕಂಪೆನಿಯ ಆಟೋ ರಿಕ್ಷಾ -1 , ಇದರ ಅಂದಾಜು ಮೌಲ್ಯ ರೂ: 50,000,KA-19-Q-8860 ನಂಬ್ರದ ಕಪ್ಪು ಬಣ್ಣದ ಹೀರೋ ಹೋಂಡಾ ಸ್ಪ್ಲೆಂಡರ್‌ ಮೋಟಾರ್‌ ಸೈಕಲ್‌ -1, ಅಂದಾಜು ಮೌಲ್ಯ ರೂ,15,000/,ಮೊಬೈಲ್‌ ಫೋನ್‌ಗಳು-03 ಅಂದಾಜು ಮೌಲ್ಯ ರೂ,17,000/-, ನಗದು ಹಣ ರೂ: 690/- , ಸ್ಕ್ರೂಡ್ರೈ ವರ್‌-1, ಕಬ್ಬಿಣದ ರಾಡ್‌ -1, ಕಟ್ಟಿಂಗ್‌ ಪ್ಲೇಯರ್‌ -1,ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ 2,99,190/- ಆಗಬಹುದು.

ಈ ಕಾರ್ಯಾಚರಣೆಯನ್ನು ಶ್ರೀ ಎನ್‌. ವಿಷ್ಣುವರ್ಧನ, ಐ.ಪಿ.ಎಸ್., ಪೊಲೀಸ್‌‌‌‌‌ ಅಧೀಕ್ಷಕರು ಉಡುಪಿ ಮತ್ತು ಶ್ರೀ ಎಸ್‌.ಟಿ. ಸಿದ್ದಲಿಂಗಪ್ಪ, ಹೆಚ್ಚುವರಿ ಪೊಲೀಸ್‌‌‌‌ ಅಧೀಕ್ಷಕರು ಉಡುಪಿ ರವರ ನಿರ್ದೇಶನದಂತೆ, ಶ್ರೀ ಎಸ್.ವಿಜಯ ಪ್ರಸಾದ್‌, ಪೊಲೀಸ್ ಉಪಾಧೀಕ್ಷಕರು, ಕಾರ್ಕಳ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಕೆ.ಸಿ. ಪೂವಯ್ಯ, ವೃತ್ತ ನಿರೀಕ್ಷಕರು ಕಾಪುರವರ ನೇತೃತ್ವದಲ್ಲಿ ನಡೆಸಿದ್ದು, ಪ್ರಕಾಶ್ ಸಾಲ್ಯಾನ್ ಪಿ.ಎಸ್.ಐ(ತನಿಖೆ), ಪಡುಬಿದ್ರಿ ಠಾಣೆ , ಅಪರಾಧ ಪತ್ತೆ ತಂಡದ ಪ್ರವೀಣ ಕುಮಾರ್, ರಾಜೇಶ್‌, ಹೇಮರಾಜ್‌, ಸಂದೇಶ, ಸುಕುಮಾರ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Latest Indian news

Popular Stories