ಉತ್ತರ ಪ್ರದೇಶ: ಇಂದು ಕೊನೆಯ ಹಂತದ ಮತದಾನ

ಲಕ್ನೊ: ಉತ್ತರ ಪ್ರದೇಶ ವಿಧಾನಸಭೆಗೆ ಕೊನೆಯ 7ನೇ ಹಂತದ ಮತದಾನ ಇಂದು ಸೋಮವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ. 54 ಕ್ಷೇತ್ರಗಳಿಗೆ 613 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಾರಣಾಸಿ ಕ್ಷೇತ್ರಕ್ಕೆ ಸಹ ಮತದಾನ ನಡೆಯುತ್ತಿದೆ.

ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ ಮತ್ತು ಹಲವು ರಾಜ್ಯ ಸಚಿವರ ಭವಿಷ್ಯ ಈ ಸುತ್ತಿನಲ್ಲಿ ನಿರ್ಧಾರವಾಗಲಿದೆ, ಇಂದು 2.06 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ.

ಚಾಕಿಯಾ (ಚಂದೌಲಿ), ರಾಬರ್ಟ್ಸ್‌ಗಂಜ್ ಮತ್ತು ದುದ್ಧಿ (ಸೋನ್‌ಭದ್ರ) ಸ್ಥಾನಗಳಲ್ಲಿ ಬೆಳಿಗ್ಗೆ 7 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದ್ದು, ಉಳಿದ ಕ್ಷೇತ್ರಗಳಲ್ಲಿ ಇದು ಸಂಜೆ 6 ರವರೆಗೆ ಮುಂದುವರಿಯುತ್ತದೆ.

ಚುನಾವಣಾ ಫಲಿತಾಂಶ ಮಾರ್ಚ್ 10 ರಂದು ಹೊರ ಬೀಳಲಿದೆ.

Latest Indian news

Popular Stories