ಏಕದಿನ ಸರಣಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

ಲಕ್ನೊ: ಲಕ್ನೋ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಲಕ್‌ ಒಲಿದಿದೆ. ರೋಚಕವಾಗಿ ಸಾಗಿದ ಮೊದಲ ಮುಖಾಮುಖಿಯನ್ನು 9 ರನ್ನುಗಳಿಂದ ಗೆದ್ದು ಮುನ್ನಡೆ ಸಾಧಿಸಿದೆ. ಮಳೆಯಿಂದಾಗಿ ಈ ಪಂದ್ಯವನ್ನು 40 ಓವರ್‌ಗಳಿಗೆ ಇಳಿಸಲಾಗಿತ್ತು. ದಕ್ಷಿಣ ಆಫ್ರಿಕಾ 4 ವಿಕೆಟ್‌ ನಷ್ಟಕ್ಕೆ 249 ರನ್‌ ಗಳಿಸಿ ಸವಾಲೊಡ್ಡಿದರೆ, ಸಂಜು ಸ್ಯಾಮ್ಸನ್‌ ಸಾಹಸದ ಹೊರತಾಗಿಯೂ ಭಾರತ 8 ವಿಕೆಟಿಗೆ 240 ರನ್‌ ಬಾರಿಸಿ ಶರಣಾಯಿತು.

ಆರಂಭಿಕ ಕುಸಿತಕ್ಕೆ ಸಿಲುಕಿದ ಭಾರತ, ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್‌ ಸಾಹಸದಿಂದ ಚೇತರಿಕೆ ಕಂಡಿತು. ಅಯ್ಯರ್‌ 37 ಎಸೆತಗಳಿಂದ 50 ರನ್‌ ಹೊಡೆದರು (8 ಬೌಂಡರಿ). ಬಳಿಕ ಸ್ಯಾಮ್ಸನ್‌ ಸಿಡಿದು ನಿಂತರು. ಕೊನೆಯ ವರೆಗೂ ಕ್ರೀಸ್‌ ಆಕ್ರಮಿಸಿಕೊಂಡ ಅವರು ಗೆಲುವಿಗೆ ಗರಿಷ್ಠ ಪ್ರಯತ್ನಪಟ್ಟರು. ಸಂಜು ಗಳಿಕೆ 63 ಎಸೆತಗಳಿಂದ ಅಜೇಯ 86 ರನ್‌ (9 ಬೌಂಡರಿ, 3 ಸಿಕ್ಸರ್‌). ಇದು ಅವರ ಎರಡನೇ ಅರ್ಧ ಶತಕ.

ಸ್ಕೋರ್ ಪಟ್ಟಿ

ದಕ್ಷಿಣ ಆಫ್ರಿಕಾ
ಜಾನೆಮನ್‌ ಮಲಾನ್‌ ಸಿ ಅಯ್ಯರ್‌ ಬಿ ಠಾಕೂರ್‌ 22
ಕ್ವಿಂಟನ್‌ ಡಿ ಕಾಕ್‌ ಎಲ್‌ಬಿಡಬ್ಲ್ಯು ಬಿಷ್ಣೋಯಿ 48
ಟೆಂಬ ಬವುಮ ಬಿ ಠಾಕೂರ್‌ 8
ಐಡನ್‌ ಮಾರ್ಕ್‌ರಮ್‌ ಬಿ ಕುಲದೀಪ್‌ 0
ಹೆನ್ರಿಚ್‌ ಕ್ಲಾಸೆನ್‌ ಔಟಾಗದೆ 74
ಡೇವಿಡ್‌ ಮಿಲ್ಲರ್‌ ಔಟಾಗದೆ 75
ಇತರ 22
ಒಟ್ಟು (40 ಓವರ್‌ಗಳಲ್ಲಿ 4 ವಿಕೆಟಿಗೆ) 249
ವಿಕೆಟ್‌ ಪತನ: 1-49, 2-70, 3-71, 4-110.
ಬೌಲಿಂಗ್‌:
ಮೊಹಮ್ಮದ್‌ ಸಿರಾಜ್‌ 8-0-49-0
ಆವೇಶ್‌ ಖಾನ್‌ 8-0-51-0
ಶಾದೂìಲ್‌ ಠಾಕೂರ್‌ 8-1-35-2
ರವಿ ಬಿಷ್ಣೋಯಿ 8-0-69-1
ಕುಲದೀಪ್‌ ಯಾದವ್‌ 8-0-39-1

ಭಾರತ
ಶಿಖರ್‌ ಧವನ್‌ ಬಿ ಪಾರ್ನೆಲ್‌ 4
ಶುಭಮನ್‌ ಗಿಲ್‌ ಬಿ ರಬಾಡ 3
ಋತುರಾಜ್‌ ಗಾಯಕ್ವಾಡ್‌ ಸ್ಟಂಪ್ಡ್ ಡಿ ಕಾಕ್‌ ಬಿ ಶಮಿÕ 19
ಇಶಾನ್‌ ಕಿಶನ್‌ ಸಿ ಮಲಾನ್‌ ಬಿ ಮಹಾರಾಜ್‌ 20
ಶ್ರೇಯಸ್‌ ಅಯ್ಯರ್‌ ಸಿ ರಬಾಡ ಬಿ ಎನ್‌ಗಿಡಿ 50
ಸಂಜು ಸ್ಯಾಮ್ಸನ್‌ ಔಟಾಗದೆ 86
ಶಾರ್ದೂಲ್‌ ಠಾಕೂರ್‌ ಸಿ ಮಹಾರಾಜ್‌ ಬಿ ಎನ್‌ಗಿಡಿ 33
ಕುಲದೀಪ್‌ ಯಾದವ್‌ ಸಿ ಬವುಮ ಬಿ ಎನ್‌ಗಿಡಿ 0
ಆವೇಶ್‌ ಖಾನ್‌ ಸಿ ಬವುಮ ಬಿ ರಬಾಡ 3
ರವಿ ಬಿಷ್ಣೋಯಿ ಔಟಾಗದೆ 4
ಇತರ 18
ಒಟ್ಟು (40 ಓವರ್‌ಗಳಲ್ಲಿ 8 ವಿಕೆಟಿಗೆ) 240
ವಿಕೆಟ್‌ ಪತನ: 1-8, 2-8, 3-48, 4-51, 5-118, 6-211, 7-211, 8-215.
ಬೌಲಿಂಗ್‌:
ಕಾಗಿಸೊ ರಬಾಡ 8-2-36-2
ವೇನ್‌ ಪಾರ್ನೆಲ್‌ 8-1-38-1
ಕೇಶವ್‌ ಮಹಾರಾಜ್‌ 8-1-23-1
ಲುಂಗಿ ಎನ್‌ಗಿಡಿ 8-0-52-3
ತಬ್ರೇಜ್‌ ಶಮಿÕ 8-0-89-1

Latest Indian news

Popular Stories