ಕರಾವಳಿಯಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕರಿಂದ “ಪಿ.ಎಫ್.ಐ” ಮಂತ್ರ!

ಕರ್ನಾಟಕ ವಿಧಾನ ಸಭಾ ಚುನಾವಣೆಯ ಕಾವು ಮೀತಿ ಮೀರಿದೆ. ಸುಡುವಬಿಸಿಲಿನ ಬೇಗೆಯಲ್ಲೂ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಪ್ರತಿ ಕ್ಷೇತ್ರಕ್ಕೂ ರಾಷ್ಟ್ರೀಯ ಪಕ್ಷಗಳ ಸ್ಟಾರ್ ಪ್ರಚಾರಕರು ಆಗಮಿಸುತ್ತಿದ್ದಾರೆ. ರೋಡೊ ಶೋ, ಸಮಾವೇಶದ ಭರಾಟೆ ಜೋರಾಗಿದೆ. ಸಹಜವಾಗಿ ಜನ ಪ್ರೊಟೊ ಕಾಲ್ ಬೇಗೆಯೊಂದಿಗೆ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ದೊಡ್ಡ ಮಟ್ಟದಲ್ಲಿ ಎದುರಿಸುತ್ತಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮತ್ತೆ ಅಧಿಕಾರ ಹಿಂಪಡೆಯಲು ಶತಾಯಗತಯ ಪ್ರಯತ್ನಿಸುತ್ತಿದೆ. ಸದ್ಯದ ಟ್ರೆಂಡ್ ನಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು ಬಿಜೆಪಿಗೆ ಆಡಳಿತ ವಿರೋಧಿ ಅಲೆ ತಟ್ಟಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕಳೆದ ಬಾರಿ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಕೇವಲ ಒಂದು ಕ್ಷೇತ್ರ ಬಿಟ್ಟು ಎಲ್ಲದರಲ್ಲೂ ಗೆದ್ದು ಬೀಗಿದ್ದ ಬಿಜೆಪಿಗೆ ಈ ಬಾರಿ ಕಾಂಗ್ರೆಸ್ ಚೆಕ್ ಮೇಟ್ ಕೊಡಲು ಅಬ್ಬರದ ಪ್ರಚಾರ ನಡೆಸುತ್ತಿದೆ. ಜನರನ್ನು ಗ್ಯಾರಂಟಿ ಯೋಜನೆಗಳ ಮುಖಾಂತರ ಸೆಳೆಯಲು ಮಾಸ್ಟರ್ ಪ್ಲ್ಯಾನ್ ರಚಿಸುತ್ತಿದೆ. ಈತನ್ಮಧ್ಯೆ ಸ್ಟಾರ್ ಪ್ರಚಾರಕರನ್ನು ಬಿಜೆಪಿ ಕರಾವಳಿಗೆ ಕರೆ ತರುತ್ತಿದ್ದು ಈ ಬಾರಿ “ಪಿ.ಎಫ್.ಐ” ನಿಷೇಧ ವಿಚಾರ ಮುಂದಿಟ್ಟು ಜನರ ಮುಂದೆ ಮತ ಕೇಳುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್‌ಶಾ,ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಎಲ್ಲರೂ ಕೂಡ ತಮ್ಮ ಸರಕಾರ ಪಿ.ಎಫ್.ಐ ಸಂಘಟನೆಯನ್ನು ಹೆಡೆಮುರಿ ಕಟ್ಟಿದೆಯೆಂದು ಹೇಳಿ ಕರಾವಳಿಗರ ಮತ ಸೆಳೆಯಲು ಯತ್ನಿಸುತ್ತಿದ್ದಾರೆ.

ಕರಾವಳಿಯಲ್ಲಿ ಸಾಮಾಗ್ರಿಗಳ ದುಬಾರಿ ವೆಚ್ಚ, ತೈಲೋತ್ಪನ್ನಗಳ ಬೆಲೆ ಏರಿಕೆ,ಟೋಲ್ ದರ, ಡಿಸೇಲ್ ಸಬ್ಸಿಡಿ ವಿಳಂಬ, ಕೊಚ್ಚಲಕ್ಕಿ ಆಶ್ವಾಸನೆ ಕೇವಲ ಆಶ್ವಾಸನೆಯಾಗಿ ಉಳಿದಿರುವುದು, ಹಲವು ಕಡೆ ರಸ್ತೆ ಹದೆಗೆಟ್ಟಿರುವುದು,ನಿರುದ್ಯೋಗ ಸೇರಿದಂತೆ ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಪ್ರದೇಶದಲ್ಲಿ ಪಿ.ಎಫ್.ಐ ನಿಷೇಧ, ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಉಲ್ಲೇಖಿಸಿ ಮತ ಸೇಳೆಯಲು ಪ್ರಯತ್ನಿಸುತ್ತಿದೆ. ಆದರೆ ಗ್ರೌಂಡ್ ನೋಡಿದರೆ ಭಿನ್ನವಾಗಿ ಗೋಚರಿಸುತ್ತಿದೆ. ಜನ ಬೆಸೆತ್ತಿರುವುದು ಮತ್ತು ತಮ್ಮ ಸಹಜ ಸಮಸ್ಯೆಗಳಿಗೆ ಸ್ಪಂದಿಸುವವರನ್ನು ಆರಿಸುವ ಕುರಿತು ಚಿಂತಿಸುತ್ತಿರುವ ಕುರಿತು ಅರಿವಾಗುತ್ತದೆ. ಒಟ್ಟಿನಲ್ಲಿ ಬಿಜೆಪಿ ಈ ಬಾರಿ ದೊಡ್ಡ ಮಟ್ಟದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವುದು ಮಾತ್ರ ಸುಳ್ಳಲ್ಲ. ಈ ಎಲ್ಲ ಸಮಸ್ಯೆಗಳ ಮಧ್ಯೆ ಬಿಜೆಪಿಯ “ಪಿ.ಎಫ್.ಐ” ಜಪಕ್ಕೆ ಮತದಾರ ಒಲಿಯಬಹುದೇ? ಎಂಬುವುದನ್ನು ಕಾದು ನೋಡಬೇಕಾಗಿದೆ.

Latest Indian news

Popular Stories