ಕಾರ್ಕಳ ಉತ್ಸವದಲ್ಲಿ ನಡೆದ ಯಕ್ಷಗಾನದಲ್ಲಿ ಹಿಜಾಬ್-ಕೇಸರಿ ಶಾಲು ಉಲ್ಲೇಖ

ಉಡುಪಿ: ಹಿಜಾಬ್ ವಿವಾದ ಹೈಕೋರ್ಟ್ ತೀರ್ಪಿನ ನಂತರ ಬಹಳಷ್ಟು ಚರ್ಚಿಸಲ್ಪಡುತ್ತಿದೆ. ಮುಸ್ಲಿಂ ಸಂಘಟನೆಗಳು ಗುರುವಾರ ಬಂದ್’ಗೆ ಕರೆ ನೀಡಿ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟಿಸಿದ್ದರು.

ಇದೀಗ ಕರಾವಳಿಯ ಗಂಡು ಕಲೆ ಎಂದೇ ಹೆಸರುವಾಸಿಯಾಗಿದ್ದ ಯಕ್ಷಗಾನದಲ್ಲೂ ರಾಜಕೀಯ ಮೇಳೈಸುತ್ತಿದೆ. ಕಾರ್ಕಳ ಉತ್ಸವದಲ್ಲಿ ಯಕ್ಷಗಾನದಲ್ಲಿ ನಡೆದ ಹಿಜಾಬ್ ವಿವಾದ ಕುರಿತು ಉಲ್ಲೇಖಿಸಲಾಗಿದ್ದು, ಶಿರವಸ್ತ್ರ ಹಾಕಿಕೊಂಡ ಕುರಿತು ಮತ್ತು ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ರಾದ್ದಾಂತ ಸೃಷ್ಟಿಸಿದ ಕುರಿತು ಉಲ್ಲೇಖಿಸಲಾಗಿದೆ. ಸಂಭಾಷಣೆಯ ಸಂದರ್ಭದಲ್ಲಿ ಕೇಸರಿ ಶಾಲು ಹಾಕಿ ಬಂದ ಕಾರಣಕ್ಕೆ ನೀವು ಆ ತೀರ್ಪು ನೀಡಿದ್ದು ಇಲ್ಲದಿದ್ದರೆ ಈ ಪ್ರಕರಣ ಇಷ್ಟು ದೊಡ್ಡದು ಆಗುತ್ತಿರಲಿಲ್ಲ ಎಂದು ಹೇಳಲಾಗಿದೆ.

ಜಾತಿ-ಧರ್ಮದ ಭೇದವಿಲ್ಲದೆ ನೋಡುತ್ತಿದ್ದ ಕರಾವಳಿಯ ಗಂಡು‌ಕಲೆಯಲ್ಲಿ ಇತ್ತೀಚ್ಚಿಗೆ ರಾಜಕೀಯ ಸೇರಿಕೊಂಡಿದೆ ಎಂಬ ಆಕ್ಷೇಪಗಳ ನಡುವೆ ಈ ಬೆಳವಣಿಗೆ ವರದಿಯಾಗಿದೆ.

Latest Indian news

Popular Stories