ಕ್ರಿಕೆಟ್: ಮೂರನೇ ಏಕದಿನ ಪಂದ್ಯದಲ್ಲೂ ಸೋತ ದ.ಆಫ್ರಿಕಾದ ಎದುರು ಸೋತ ಭಾರತ

ಕೇಪ್ ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಗೆಲುವಿನ ಹೊಸ್ತಿಲಲ್ಲಿದ್ದ ಭಾರತ ತಂಡ ಕೊನೆಯ ಹಂತದಲ್ಲಿ ಎಡವಿದ್ದು, ಪರಿಣಾಮ ಮೂರನೇ ಏಕದಿನ ಪಂದ್ಯದಲ್ಲೂ ಸೋಲು ಕಂಡಿದೆ.

ಕೇಪ್ ಟೌನ್ ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ 288ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಟೀಂ ಇಂಡಿಯಾ 49.2 ಓವರ್ ನಲ್ಲಿ 283 ರನ್ ಗಳಿಗೆ ಆಲೌಟ್ ಆಗಿ ಕೇವಲ 4 ರನ್ ಗಳ ಅಂತರದಲ್ಲಿ ಸೋಲುಕಂಡಿತು. ಆ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ 3-0 ಅಂತರದಲ್ಲಿ ವೈಟ್ ವಾಶ್ ಸೋಲು ಕಂಡಿದೆ.

ಅಂತಿಮ ಹಂತದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿ ಅರ್ಧಶತಕ ಗಳಿಸಿ ಗೆಲುವಿನ ಆಸೆ ಚಿಗುರಿಸಿದ್ದ ದೀಪಕ್ ಚಹರ್ ಅಂತಿಮ ಹಂತದಲ್ಲಿ ಗ್ಲಾಮರ್ ಶಾಟ್ ಗೆ ಮುಂದಾಗಿ ವಿಕೆಟ್ ಒಪ್ಪಿಸಿದ್ದು ಇಡೀ ಪಂದ್ಯದ ಗತಿಯನ್ನೇ ಬದಲಿಸಿತು. ಅನಗತ್ಯ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದ ದೀಪಕ್ ಚಹರ್ ಪೆವಿಲಿಯನ್ ನಲ್ಲಿ ಪಶ್ಚಾತಾಪ ಪಡುವಂತಾಗಿತ್ತು. ಚಹರ್ ಬೆನ್ನಲ್ಲೇ ಬುಮ್ರಾ ಕೂಡ ವಿಕೆಟ್ ಒಪ್ಪಿಸಿದ್ದು ಭಾರತದ ಗೆಲುವಿಗೆ ಮುಳುವಾಯಿತು.

ಅಂತಿಮವಾಗಿ ಟೀಂ ಇಂಡಿಯಾ 49.2 ಓವರ್ ನಲ್ಲಿ 283 ರನ್ ಗಳಿಗೆ ಆಲೌಟ್ ಆಗಿ ಕೇವಲ 4 ರನ್ ಗಳ ಅಂತರದಲ್ಲಿ ಸೋಲುಕಂಡಿತು.

ಭಾರತದ ಪರ ಶಿಖರ್ ಧವನ್ 61 ರನ್, ಕೊಹ್ಲಿ 65 ರನ್ ಗಳಿಸಿದರೆ, ದೀಪಕ್ ಚಹರ್ 54, ಸೂರ್ಯ ಕುಮಾರ್ ಯಾದವ್ 39 ರನ್ ಗಳಿಸಿದರು. ಆಫ್ರಿಕಾ ಪರ ಲುಂಗಿ ಎನ್ಗಿಡಿ ಮತ್ತು ಪೆಹ್ಲುಕ್ವಾಯೋ ತಲಾ 3 ವಿಕೆಟ್ ಕಂಬಳಿಸಿದರೆ, ಪ್ರಿಟೋರಿಯಸ್ 2 ಮತ್ತು ಸಿಸಂಡ ಮಗಲ, ಕೇಶವ್ ಮಹಾರಾಜ್ ತಲಾ 1 ವಿಕೆಟ್ ಪಡೆದರು.

Latest Indian news

Popular Stories