ಚುನಾವಣೆ ಫಲಿತಾಂಶ ಬೆನ್ನಲ್ಲೇ ತೈಲ ಬೆಲೆ ಏರಿಕೆ ಸಾಧ್ಯತೆ!

ಬೆಂಗಳೂರು: ಉತ್ತರ ಪ್ರದೇಶ ಸೇರಿ ಪಂಚ ರಾಜ್ಯಗಳ ಚುನಾವಣೆ ಬೆನ್ನಲ್ಲೇ ಪೆಟ್ರೋಲ್‌ ಮತ್ತು ಡಿಸೇಲ್‌ ದರ ಗಗನ ಮುಟ್ಟುವ ಸಾಧ್ಯತೆ ಇದೆ. ಕಚ್ಚಾ ತೈಲ ಬೆಲೆ 13 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಪ್ರತಿ ಬ್ಯಾರೆಲ್‌ಗೆ 140 ಡಾಲರ್‌ ಆಗಿದೆ. ಪಂಚರಾಜ್ಯ ಚುನಾವಣೆ ಹಿನ್ನೆಲೆ ಕಳೆದ 4 ತಿಂಗಳಿಂದ ಪೆಟ್ರೋಲ್‌, ಡಿಸೇಲ್‌ ದರವನ್ನು ಸ್ಥಿರವಾಗಿಟ್ಟಿದ್ದ ತೈಲ ಕಂಪನಿಗಳು ದರ ಹೆಚ್ಚಿಸಲು ಮುಂದಾಗಿದೆ.

ಇಂದು ಮಾರ್ಚ್‌ 8 ಮಂಗಳವಾರ ದೇಶದ ಪ್ರಮುಖ ನಗರಗಳಲ್ಲಿನ ತೈಲ ಬೆಲೆಯ ಬಗ್ಗೆ ನೋಡೋದಾದ್ರೆ, ಸದ್ಯಕ್ಕೆ ರಾಜ್ಯ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ತೈಲ ಬೆಲೆ ವ್ಯತ್ಯಯವಾಗಿಲ್ಲ. ಬೆಂಗಳೂರಿನಲ್ಲಿ ನಿನ್ನೆ ಬೆಳಗ್ಗೆ ಇದ್ದ ದರವೇ ಇಂದು ತಟಸ್ಥವಾಗಿದೆ. ಡೀಸೆಲ್‌ ದರ ಕೂಡ ನಿನ್ನೆ ಬೆಳಗ್ಗೆಯ ದರವೇ ಇಂದೂ ಮುಂದುವರಿದಿದೆ.

ದೇಶದಲ್ಲಿ ನಿರಂತರವಾಗಿ ಹೆಚ್ಚಳ ಕಾಣುತ್ತಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸದ್ಯ ಕೆಲವು ನಗರಗಳಲ್ಲಿ ತಟಸ್ಥವಾಗಿದ್ದರೆ, ಕೆಲವು ನಗರಗಳಲ್ಲಿ ಏರಿಳಿಕೆಯಾಗಿದೆ. ಪೂರೈಕೆ ಹಾಗೂ ಬೇಡಿಕೆಗೆ ಸಂಬಂಧಿಸಿದ ಸಮಸ್ಯೆಗಳ ವಿಚಾರದಲ್ಲಿ ವಿವಿಧ ತೈಲ ರಫ್ತು ದೇಶಗಳೊಂದಿಗೆ ಭಾರತ ಸರ್ಕಾರ ಮಾತುಕತೆ ನಡೆಸುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರಗಳು ರಾಜ್ಯಗಳ ಸುಂಕ ಹಾಗೂ ತೆರಿಗೆಗಳ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ಪ್ರದೇಶದಿಂದ ಪ್ರದೇಶಕ್ಕೆ ತೈಲ ದರದಲ್ಲಿ ಬದಲಾವಣೆ ಇರುತ್ತದೆ.

Latest Indian news

Popular Stories