ಜಾತ್ ಸಮುದಾಯದ ನಾಯಕರೊಂದಿಗೆ ಸಭೆ ನಡೆಸಿದ ಅಮಿತ್ ಶಾ – “ರಾಜ್ಯ ಸರಕಾರದೊಂದಿಗೆ ಸಮಸ್ಯೆಯಿದ್ದರೂ ಕೇಂದ್ರ ಸರಕಾರ ನಿಮ್ಮೊಂದಿಗಿದೆ” !

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮೊದಲು ಜಾಟ್ ನಾಯಕರನ್ನು ಭೇಟಿ ಮಾಡಿದರು.ರಾಜ್ಯ ಸರ್ಕಾರದೊಂದಿಗೆ “ಸಮಸ್ಯೆಗಳನ್ನು” ಹೊಂದಿದ್ದರೂ ಸಹ ಕೇಂದ್ರವು ಯಾವಾಗಲೂ ಅವರೊಂದಿಗೆ ಇರಲಿದೆ ಎಂದು ಹೇಳಿದರು.

ಫೆಬ್ರವರಿ 10 ರಂದು ಚುನಾವಣೆ ನಡೆಯುವ ಸ್ಥಾನಗಳಲ್ಲಿ ಜಾಟ್‌ ಸಮುದಾಯ ಗಣನೀಯ ಪಾಲನ್ನು ಹೊಂದಿದ್ದಾರೆ. ಈ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಹೊರಡುವ ಒಂದು ದಿನ ಮುಂಚಿತವಾಗಿ ಜಾಟ್ ನಾಯಕರೊಂದಿಗೆ ಶಾ ಮತ್ತು ಇತರ ಬಿಜೆಪಿ ನಾಯಕರು ಮುಚ್ಚಿದ ಬಾಗಿಲಿನ ಸಭೆಯನ್ನು ನಡೆಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಜಾಟ್ ನಾಯಕ ಮತ್ತು ಪಶ್ಚಿಮ ಯುಪಿಯ ಮುಜಫರ್‌ನಗರದ ಬಿಜೆಪಿ ಸಂಸದ ಸಂಜೀವ್ ಬಲ್ಯಾನ್ ಅವರು ಮಾತನಾಡಿ, “ನಿಮಗೆ ರಾಜ್ಯ ಸರ್ಕಾರದೊಂದಿಗೆ ಸಮಸ್ಯೆಗಳಿದ್ದರೂ ಸಹ ಕೇಂದ್ರ ಸರ್ಕಾರ ನಿಮ್ಮೊಂದಿಗಿದೆ ಎಂದು ನಾನು ನಾಯಕರಿಗೆ ಹೇಳಿದ್ದೇನೆ. ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ನಮ್ಮ ಮಾತನ್ನು ಆಲಿಸುತ್ತಾರೆ.

ಸಭೆಯಲ್ಲಿ ಉಪಸ್ಥಿತರಿದ್ದ ಬಿಜೆಪಿ ನಾಯಕರು ಷಾ ಸಭೆಯಲ್ಲಿ ಮಾತನಾಡುತ್ತ, “ನನ್ನೊಂದಿಗೆ ನಿಮ್ಮ ಹತಾಶೆಯನ್ನು ಹೊರಹಾಕಲು ನೀವು ಸ್ವತಂತ್ರರು. ನೀವು ಬೇರೊಬ್ಬರನ್ನು ನೋಡಬೇಕೇ? ಎಂದು ಒಲೈಸುವ ಪ್ರಯತ್ನ ನಡೆಸಿದ್ದಾರೆ.

ಒಟ್ಟಿನಲ್ಲಿ ಬಿಜೆಪಿಗೆ ಈ ಬಾರಿ ಕೃಷಿ ಕಾಯಿದೆ ಪಶ್ಚಿಮ ಉತ್ತರ ಪ್ರದೇಶದಲ್ಲಿ ಬಹಳಷ್ಟು ಸಮಸ್ಯೆ ಸೃಷ್ಟಿಸಿದ್ದು ರಾಜ್ಯ ಸರಕಾರದ ಬೇಜಾಬ್ದಾರಿಯುತ ನಡೆ ಕೂಡ ತಲೆ ನೋವಾಗಿ ಪರಿಣಮಿಸಿದೆ. ಪ್ರತಿಭಟನೆಯಲ್ಲಿ ಮಣಿದ 700 ಕುಟುಂಬವನ್ನು ಎದುರು ಹಾಕಿಕೊಳ್ಳಬೇಕಾಗಿದ್ದು ಅದರೊಂದಿಗೆ ಕಳೆದ ಬಾರಿ ದಕ್ಕಿದ ಮುಝಫರ್ ನಗರ ಕ್ಷೇತ್ರದ ಸೀಟುಗಳು ಈ ಬಾರಿ ಸಿಗುವುದು ಕಷ್ಟಕರವಾಗಿ ಗೋಚರಿಸಿದೆ. ಅದರಲ್ಲೂ ಮುಖ್ಯವಾಗಿ 40% ದಷ್ಟಿರುವ ಮುಸ್ಲಿಮರ ಮತ ಸೆಳೆಯುವುದು ಈ ಬಾರಿ ಸುಲಭವಾಗಿ ಉಳಿದಿಲ್ಲ.

Latest Indian news

Popular Stories