ಜಿಗ್ನೇಶ್ ಮೇವಾನಿ ಜಾಮೀನು ನಿರಾಕರಣೆ; ಮೂರು ದಿನ ಪೊಲೀಸ್ ಕಸ್ಟಡಿಗೆ

ಅಸ್ಸಾಮ್: ಟ್ವೀಟ್ ಸಂಬಂಧಿಸಿದಂತೆ ಬಂಧಿತರಾಗಿರುವ ಜಿಗ್ನೇಶ್ ಮೆವಾನಿಯವರ ಜಾಮೀನನ್ನು ಅಸ್ಸಾಮಿನ ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿದೆ. ಅವರನ್ನು ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ನಾಥೂರಾಂ ಗೋಡ್ಸೆ ಅವರ ಕುರಿತಾದ ಎರಡು ಟ್ವೀಟ್‌ಗಳು ವೈರಲ್ ಆಗಿದ್ದು, “ಶಾಂತತೆಗೆ ಭಂಗ ತರುವ ಬೆದರಿಕೆ” ಎಂದು ಆರೋಪಿಸಿ ಮೇವಾನಿ ಅವರನ್ನು ಗುಜರಾತ್‌ನಿಂದ ಅಸ್ಸಾಂ ಪೊಲೀಸರು ಏಪ್ರಿಲ್ 20 ಬುಧವಾರ ತಡರಾತ್ರಿ ಬಂಧಿಸಿದ್ದಾರೆ.

ಕಾನೂನಿನ ಬೇಡಿಕೆಗೆ ಪ್ರತಿಕ್ರಿಯೆಯಾಗಿ ಟ್ವಿಟರ್ ಪ್ರಶ್ನೆಯಲ್ಲಿರುವ ಎರಡು ಟ್ವೀಟ್‌ಗಳನ್ನು ತಡೆಹಿಡಿದಿದೆ. ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್‌ನ ಸಂಚಾಲಕ ಮೇವಾನಿ ಅವರನ್ನು ನಂತರ ಅಸ್ಸಾಂಗೆ ಕರೆದುಕೊಂಡು ಹೋಗಲಾಗಿದೆ.

Latest Indian news

Popular Stories