ನಾನು ನಿಜವಾದ ಜಾತ್ಯತೀತ: ಆರ್ಯನ್ ಖಾನ್ ಪ್ರಕರಣದಲ್ಲಿ 25 ಕೋಟಿ ಸುಲಿಗೆ ಆರೋಪಕ್ಕೆ ಸಮೀರ್ ವಾಂಖೆಡೆ ಪ್ರತಿಕ್ರಿಯೆ

ಮುಂಬೈ: ಆರ್ಯನ್ ಖಾನ್ ಡ್ರಗ್ ಪ್ರಕರಣದ ತನಿಖೆ ನಡೆಸುತ್ತಿರುವ ನಾರ್ಕೋಟಿಕ್ಸ್ ಬ್ಯೂರೋ ಅಧಿಕಾರಿ ಸಮೀರ್ ವಾಂಖೆಡೆ ಪ್ರತಿಕ್ರಿಯಿಸಿ, ಎನ್‌ಸಿಪಿ ಸಚಿವ ನವಾಬ್ ಮಲಿಕ್ ಅಪಪ್ರಚಾರ ನಡೆಸುತ್ತಿದ್ದಾರೆ. ವೈಯಕ್ತಿಕ ದಾಖಲೆಗಳನ್ನು ಸಾರ್ವಜನಿಕ ರಂಗದಲ್ಲಿ ತರಲಾಗಿದೆ. ಅದು ಮಾನಹಾನಿಕರವಾಗಿದೆ, “ನಾನು ನಿಜವಾದ ಜಾತ್ಯತೀತ” ಎಂದು ಹೇಳಿದ್ದಾರೆ.

ವಾಂಖೆಡೆ ಅವರ ವಿರುದ್ಧ ಮಾಧ್ಯಮಗಳ ವಿಚಾರಣೆ ನಡೆಯುತ್ತಿದ್ದು, ಅದನ್ನು ನಿಲ್ಲಿಸಬೇಕು ಎಂದು ಹೇಳಿದ್ದು, ಅವರ ಕುಟುಂಬ ಸದಸ್ಯರನ್ನು ಗುರಿಯಾಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ವಾಂಖೆಡೆ ಸ್ಪಷ್ಟನೆ ನೀಡಿ, “ಗೌರವಾನ್ವಿತ ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವರಾದ ಶ್ರೀ ನವಾಬ್ ಮಲಿಕ್, ಮಹಾರಾಷ್ಟ್ರ ಸರ್ಕಾರವು ನನಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಪ್ರಕಟಿಸಿದೆ. ‘ಸಮೀರ್ ದಾವೂದ್ ವಾಂಖೆಡೆ’ ಕಾ ಯಹನ್ಸೆ ಶುರು ಹುವಾ ಫರ್ಜಿವಾದ” ಎಂದು ಬರೆದುಕೊಂಡಿದ್ದಾರೆ.

” ನನ್ನ ತಂದೆ ಶ್. ಜ್ಞಾನದೇವ್ ಕಚ್ರುಗಿ ವಾಖೆಂಡೆ ಅವರು 30.06.2007 ರಂದು ಪುಣೆಯ ರಾಜ್ಯ ಅಬಕಾರಿ ಇಲಾಖೆಯ ಹಿರಿಯ ಪೊಲೀಸ್ ನಿರೀಕ್ಷಕರಾಗಿ ನಿವೃತ್ತರಾಗಿದ್ದಾರೆ ಎಂದು ನಾನು ವ್ಯಕ್ತಪಡಿಸಲು ಬಯಸುತ್ತೇನೆ. ನನ್ನ ತಂದೆ ಹಿಂದೂ ಮತ್ತು ನನ್ನ ತಾಯಿ ದಿವಂಗತ ಶ್ರೀಮತಿ ಜಹೀದಾ ಮುಸ್ಲಿಂ. ನಾನು ನಿಜವಾದ ಭಾರತೀಯ ಸಂಪ್ರದಾಯದಲ್ಲಿ ಸಂಯೋಜಿತ ಬಹು ಧಾರ್ಮಿಕ ಮತ್ತು ಜಾತ್ಯತೀತ ಕುಟುಂಬಕ್ಕೆ ಸೇರಿದ್ದೇನೆ. ನನ್ನ ಪರಂಪರೆಯ ಬಗ್ಗೆ ನನಗೆ ಹೆಮ್ಮೆ ಇದೆ. ಇದಲ್ಲದೆ ನಾನು 2006 ರಲ್ಲಿ ವಿಶೇಷ ವಿವಾಹ ಕಾಯಿದೆ 1954 ರ ಅಡಿಯಲ್ಲಿ ನಾಗರಿಕ ವಿವಾಹ ಸಮಾರಂಭದಲ್ಲಿ ಡಾ. ಶಬಾನಾ ಖುರೇಷಿಯನ್ನು ವಿವಾಹವಾದೆ. ನಮ್ಮಲ್ಲಿ 2016 ರಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ಸಿವಿಲ್ ನ್ಯಾಯಾಲಯದ ಮೂಲಕ ಪರಸ್ಪರ ವಿಚ್ಛೇದನ ಪಡೆದು ನಂತರ 2017 ರಲ್ಲಿ ನಾನು ಶ್ರೀಮತಿ ಕ್ರಾಂತಿ ದಿನನಾಥ್ ರೆಡ್ಕರ್ ಅವರನ್ನು ವಿವಾಹವಾದೆ ಎಂದು ತಿಳಿಸಿದ್ದಾರೆ.

ಟ್ವಿಟರ್‌ನಲ್ಲಿ ಅವರ ವೈಯಕ್ತಿಕ ದಾಖಲೆಗಳನ್ನು ಪ್ರಕಟಿಸುವುದು ಮಾನಹಾನಿಕರ. ನನ್ನ ಕುಟುಂಬದ ಗೌಪ್ಯ ವಿಚಾರಗಳಮ್ನು ಉಲ್ಲೇಖಿಸುವುದು ಅನಗತ್ಯ ಎಂದು ಸಮೀರ್ ಹೇಳಿದ್ದಾರೆ.

“ಇದು ನನ್ನನ್ನು, ನನ್ನ ಕುಟುಂಬವನ್ನು, ನನ್ನ ತಂದೆ ಮತ್ತು ನನ್ನ ದಿವಂಗತ ತಾಯಿಯನ್ನು ಅವಮಾನಿಸುವ ಉದ್ದೇಶವನ್ನು ಹೊಂದಿದೆ. ಕಳೆದ ಕೆಲವು ದಿನಗಳಿಂದ ಗೌರವಾನ್ವಿತ ಸಚಿವರ ನಡೆ ನನ್ನನ್ನು ಮತ್ತು ನನ್ನ ಕುಟುಂಬವನ್ನು ಮಾನಸಿಕ ಮತ್ತು ಭಾವನಾತ್ಮಕ ಒತ್ತಡಕ್ಕೆ ಸಿಲುಕಿಸಿದೆ. ಯಾವುದೇ ಮಾನದಂಡವಿಲ್ಲದೆ ಗೌರವಾನ್ವಿತ ಸಚಿವರು ವೈಯಕ್ತಿಕ ಮಾನಹಾನಿಕರ ಮತ್ತು ಅವಹೇಳನಕಾರಿ ವಿಚಾರಗಳನ್ನು ಉಲ್ಲೇಖಿಸುತ್ತಿದ್ದಾರೆ “ಎಂದು ಹೇಳಿದರು.

ನವಾಬ್ ಮಲಿಕ್ ಟ್ವಿಟ್ಟರ್ ನಲ್ಲಿ ಸಮೀರ್ ವಾಂಖೆಡೆ ಮುಸ್ಲಿಂ ಎಂದು ಹೇಳಿಕೊಂಡಿದ್ದು, ಅವರ ನಿಜವಾದ ಹೆಸರು ಸಮೀರ್ ದಾವೂದ್ ವಾಂಖೆಡೆ ಎಂದಿದ್ದಾರೆ. ಅವರು ಜನನ ಪ್ರಮಾಣಪತ್ರ ಅಂಶಗಳನ್ನು ಹಂಚಿಕೊಂಡಿದ್ದಾರೆ.”ಸಮೀರ್ ದಾವೂದ್ ವಾಂಖೆಡೆ ಅವರ ವಂಚನೆ ಇಲ್ಲಿಂದ ಆರಂಭವಾಯಿತು” ಎಂದು ಬರೆದಿದ್ದಾರೆ.

ವಾಂಖೆಡೆ ಅವರ ಇನ್ನೊಂದು ಫೋಟೋದಲ್ಲಿ ಅವರ ಮದುವೆಯ ವಿಚಾರ ಉಲ್ಲೇಖಿಸಿರುವ ಎನ್‌ಸಿಪಿಯ ಮಲಿಕ್ ವ್ಯಂಗ್ಯವಾಡಿ “ಪೆಹ್ಚಾನ್ ಕೌನ್? (ನೀವು ಈ ವ್ಯಕ್ತಿಯನ್ನು ಗುರುತಿಸಬಹುದೇ?)” ಎಂದು ಪ್ರಶ್ನಿಸಿದ್ದಾರೆ.

ಏತನ್ಮಧ್ಯೆ, ಕ್ರೂಸ್ ಡ್ರಗ್ಸ್ ಪ್ರಕರಣದ ಸ್ವತಂತ್ರ ಸಾಕ್ಷಿಯಾದ ಪ್ರಭಾಕರ್ ಸೈಲ್ ಸೋಮವಾರ ಬಾಂಬ್ ಸಿಡಿಸಿದ್ದಾರೆ. ಆರ್ಯನ್ ಖಾನ್ ಬಂಧನ ಪ್ರಕರಣದಲ್ಲಿ ಪಿಕೆ ಗೋಸಾವಿ ಮತ್ತು ಸಮೀರ್ ವಾಂಖೆಡೆ ನಡುವೆ ಹಣದ ವಿನಿಮಯ ನಡೆದಿದೆ ಎಂದು ಆರೋಪಿಸಿದ್ದಾರೆ.

Latest Indian news

Popular Stories