ಫೇಕ್ ವೀಡಿಯೋ ಹಂಚಿ ಬಂಧನಕ್ಕೊಳಗಾಗಿದ್ದ ಯೂಟ್ಯೂಬರ್ ಬಿಜೆಪಿಗೆ ಸೇರ್ಪಡೆ

ನವದೆಹಲಿ: ಫೇಕ್ ವೀಡಿಯೋವನ್ನು ಎಲ್ಲೆಡೆ ಹಂಚಿದ್ದ ಪರಿಣಾಮ ಬಂಧನಕ್ಕೊಳಗಾಗಿದ್ದ ಬಿಹಾರದ ಯೂಟ್ಯೂಬರ್ ಮನೀಷ್ ಕಶ್ಯಪ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಕಳೆದ ವರ್ಷ ತಮಿಳುನಾಡಿನಲ್ಲಿ ಬಿಹಾರ ವಲಸಿಗ ಕಾರ್ಮಿಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಯೂಟ್ಯೂಬರ್ ಮನೀಷ್ ಕಶ್ಯಪ್ ನಕಲಿ ವಿಡಿಯೋವನ್ನು ಎಲ್ಲೆಡೆ ಹಂಚಿಕೊಂಡಿದ್ದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಶ್ಯಪ್ ಈಗ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಮಾಧ್ಯಮ ವಿಭಾಗದ ಉಸ್ತುವಾರಿ ಅನಿಲ್ ಬಲುನಿ ನೇತೃತ್ವದಲ್ಲಿ ಕಶ್ಯಪ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಶ್ಯಪ್ ಅವರ ತಾಯಿ ಸಹ ಭಾಗಿಯಾಗಿದ್ದರು.

‘ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೆಲಸ ಮಾಡಲು ಬಿಜೆಪಿ ಸೇರಿದ್ದೇನೆ, 9 ತಿಂಗಳು ಜೈಲಿನಲ್ಲಿದ್ದಾಗ ನನಗಾಗಿ ಹೋರಾಡಿದ ನನ್ನ ತಾಯಿ ಬಿಜೆಪಿ ಸೇರುವಂತೆ ಕೇಳಿಕೊಂಡರು’ ಎಂದು ಕಶ್ಯಪ್ ಸುದ್ದಿಗಾರರಿಗೆ ತಿಳಿಸಿದರು.

ಈಶಾನ್ಯ ದೆಹಲಿ ಕ್ಷೇತ್ರದಿಂದ ಲೋಕಸಭೆಯಲ್ಲಿ ಸತತ ಮೂರನೇ ಬಾರಿಗೆ ಸ್ಪರ್ಧಿಸುತ್ತಿ ತಿವಾರಿ, ಕಶ್ಯಪ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಕ್ಕಾಗಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ ಮತ್ತು “ಕೆಲವರು” ಅವರನ್ನು ಮೌನಗೊಳಿಸಲು ಬಯಸಿದ್ದರಿಂದ ಅವರನ್ನು ಬಂಧಿಸಲಾಗಿತ್ತು ಎಂದು ತಿವಾರಿ ಆರೋಪಿಸಿದರು.

“ಮನೀಷ್ ಕಶ್ಯಪ್ ಜನರ ಸಮಸ್ಯೆಯನ್ನು ಪ್ರಸ್ತಾಪಿಸಿದರು ಮತ್ತು ಯಾವಾಗಲೂ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಮಾತನಾಡುತ್ತಾರೆ. ಆದರೆ, ಈ ದೇಶದಲ್ಲಿ, ಕೆಲವು ಬಿಜೆಪಿಯೇತರ ಸರ್ಕಾರಗಳು ಅವರಿಗೆ ಸಾಕಷ್ಟು ತೊಂದರೆ ನೀಡಿವೆ” ಎಂದು ತಿವಾರಿ ಹೇಳಿದರು. ಕಶ್ಯಪ್ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಬಿಜೆಪಿ ಅವರಿಗೆ “ಭವಿಷ್ಯದಲ್ಲಿ” ಸರಿಯಾದ ಗೌರವವನ್ನು ನೀಡುತ್ತದೆ ಎಂದು ಅವರು ಭರವಸೆ ನೀಡಿದರು.

Latest Indian news

Popular Stories