ಮಥುರಾ ಉ.ಪ್ರ ಚುನಾವಣೆಯ ಕೇಂದ್ರ ಬಿಂದು – ವರದಿ

ಮಥುರಾ: ಉತ್ತರ ಪ್ರದೇಶ ಚುನಾವಣಾ ಕಣ ಗರಿಗೆದರಿದೆ. ಈಗಾಗಲೇ ಎಲ್ಲ ಪಕ್ಷದ ವರಿಷ್ಠರು ಉತ್ತರ ಪ್ರದೇಶದತ್ತ ಮುಖ ಮಾಡಿದ್ದಾರೆ. ಇದೀಗ ಬಿಜೆಪಿಯ ಪಾಲಿಗೆ ಅಯೋಧ್ಯೆಯ ನಂತರ ಮಥುರಾವೇ ರಾಜಕೀಯದ ಕೇಂದ್ರ ಬಿಂದು. ಗೃಹ ಸಚಿವ ಅಮಿತ್ ಶಾ ಬನ್ಕೆ ಬಿಹಾರಿ ವೃಂದನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಇದೀಗ ಬಿಜೆಪಿಯ ಸ್ಟ್ರಾಂಗ್ ಹೋಲ್ಡ್ ಮಥುರಾ ಕೈ ಬಿಟ್ಟು ಹೋಗದಂತೆ ಶತಾಯಗತಾಯ ಪ್ರಯತ್ನದಲ್ಲಿದ್ದಾರೆ.

ಅಯೋಧ್ಯೆಯ ನಂತರ ಮಥುರಾ ಶ್ರೀಕೃಷ್ಣನ ಜನ್ಮ ಸ್ಥಳವೆಂದು ಹೇಳಲಾಗುತ್ತಿದೆ. ಇಲ್ಲಿಯೂ ಕೂಡ ಮಸೀದಿ ವಿವಾದವಿದ್ದು ಬಿಜೆಪಿ ಇದರ ಪ್ರಯೋಜನ ಪಡೆಯಲು ಹವಣಿಸುತ್ತಿದೆ. ಈಗಾಗಲೇ ಯೋಗಿ ಆದಿತ್ಯನಾಥ್ ಈ ಪ್ರದೇಶಕ್ಕೆ ಹದಿನೆಂಟು ಬಾರಿ ಭೇಟಿ ನೀಡಿದ್ದಾರೆ.

ಈ ಪ್ರದೇಶದಲ್ಲಿ ಬಿಜೆಪಿ ಅಭಿವೃದ್ಧಿ ಕೆಲಸಗಳನ್ನು ನಡೆಸಿಲ್ಲ ಎಂಬ ಕೊರಗು ಜನರಲ್ಲಿ ಇದೆ. ಆದರೆ ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ಶ್ರೀಕಾಂತ್ ಶರ್ಮಾ ಪ್ರಕಾರ ಬಿಜೆಪಿಗೆ ಅಭಿವೃದ್ಧಿ ಪ್ರಮುಖ ವಿಚಾರ. ಅದರೊಂದಿಗೆ ದೇವಸ್ಥಾನದ ಕಡೆಗೂ ಗಮನ ಹರಿಸುವುದು ನಾವು ಮಾತ್ರ ಎಂದು ಹೇಳಿಕೆ ನೀಡಿದ್ದಾರೆ.

ಈ ಪ್ರದೇಶದಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದ ಕಾಂಗ್ರೆಸ್ ನ ಪ್ರದೀಪ್ ಮಥುರಾ ಪ್ರಬಲ ಪ್ರತಿಸ್ಪರ್ಧಿ‌‌. ಇವರ ಪ್ರಕಾರ ಮಥುರಾದಲ್ಲಿ ಗಂಗಾ ಸ್ವಚ್ಚತೆ, ವಿದ್ಯುತ್ಚ್ಚಕ್ತಿ ದರ ಏರಿಕೆಯಿಂದ ಜನ ಕಂಗಲಾಗಿದ್ದಾರೆ. ಜನ ಬಿಜೆಪಿಯಿಂದ ಬೆಸೆತ್ತಿದ್ದಾರೆ. ಈ ಬಾರಿ ಜನಸೇವೆ ಮಾಡುವರಿಗೆ ಜನ ಆದ್ಯತೆ ನೀಡಲಿದ್ದಾರೆ ಎಂದು ಹೇಳಿದರು.

ಒಟ್ಟಿನಲ್ಲಿ ಜನಾಭಿಪ್ರಾಯ ಕೂಡ ಭಿನ್ನವಾಗಿದ್ದು ಕೆಲವರು ಬಿಜೆಪಿಯ ಅಭಿವೃದ್ಧಿ ಕೆಲಸದಲ್ಲಿ ಸರಿಯಾಗಿ ಮಾಡಿಲ್ಲ ಆದರೂ ನಾವು ಮತ್ತೊಮ್ಮೆ ಬಿಜೆಪಿ ತರಲು ಬಯಸುತ್ತೇವೆ ಎಂದು ಹೇಳಿದರೆ ಕೆಲವರು ಬಿಜೆಪಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಇನ್ನು ಈ ಭಾಗದಲ್ಲಿ 15-17% ಮುಸ್ಲಿಮರಿದ್ದು ಅವರು ಈ ಬಾರಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಮಸೀದಿ-ಮಂದಿರದಿಂದ ಜನರಿಗೇನು ಆಗುವುದಿಲ್ಲ. ಅಭಿವೃದ್ಧಿ ಕೆಲಸ ಮಾಡುವವರಿಗೆ ನಮ್ಮ ಮತ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಬಿಜೆಪ ಧಾರ್ಮಿಕ ಕೇಂದ್ರಗಳತ್ತ ಗಮನ ಸರಿಸಿ ಜನಮತ ಎಳೆಯುವ ತಂತ್ರದಲ್ಲಿ ತೊಡಗಿಕೊಂಡರೆ ಅಭಿವೃದ್ಧಿ ಮಾಡುವ ಆಶ್ವಾಸನೆಯೊಂದಿಗೆ ಇತರ ಪಕ್ಷಗಳು ಕಣದಲ್ಲಿವೆ. ಈ ಪ್ರದೇಶದಲ್ಲಿ ಒಟ್ಟು ಐದು ವಿಧಾನಸಭಾ ಕ್ಷೇತ್ರವಿದ್ದು ಅದರಲ್ಲಿ ಒಂದು ಪರಿಶಿಷ್ಟ ಜಾತಿ/ಪಂಗಡಕ್ಕೆ ಮೀಸಲಾಗಿದೆ. 2017 ರಲ್ಲಿ ನಾಲ್ಕು ಸ್ಥಾನ ಬಿಜೆಪಿ ಒಂದು ಬಿಎಸ್ಪಿ ಗೆದ್ದುಕೊಂಡಿತ್ತು.

Latest Indian news

Popular Stories