ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ 700 ಗ್ರಾಮ್ ಗಾಂಜಾ ವಶಕ್ಕೆ

ಉಡುಪಿ, ಮಾ.20: ಮಲ್ಪೆ ಮೀನುಗಾರಿಕಾ ಬಂದರಿನ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 700 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ.

ಕಾರ್ಯಾಚರಣೆ ವೇಳೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ವಾಹನ ಮತ್ತು 700 ಗ್ರಾಂ ಗಾಂಜಾ ಹೊಂದಿರುವ ಪ್ಲಾಸ್ಟಿಕ್ ಚೀಲವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ವಾಹನ ಚಾಲಕ ಹಾಗೂ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಅಬಕಾರಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಮಂಗಳೂರು ವಿಭಾಗದ ಜಂಟಿ ಅಬಕಾರಿ ಆಯುಕ್ತೆ ಶೈಲಜಾ ಕೋಟೆ ಹಾಗೂ ಉಡುಪಿಯ ಉಪ ಅಬಕಾರಿ ಆಯುಕ್ತೆ ರೂಪ ಎಂ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಅಧೀಕ್ಷಕ ಗುರುಮೂರ್ತಿ ಡಿ ಪಾಲೇಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಅಬಕಾರಿ ನಿರೀಕ್ಷಕಿ ಜ್ಯೋತಿ, ಸಹಾಯಕ ನಿರೀಕ್ಷಕರಾದ ರೂಬಿಯಾ ನದಾಫ್, ದಿವಾಕರ್, ಕಾನ್‌ಸ್ಟೆಬಲ್ ಕೃಷ್ಣ ಆಚಾರ್ಯ, ನಂಜುಂಡಸ್ವಾಮಿ ತಂಡದಲ್ಲಿದ್ದರು.

Latest Indian news

Popular Stories