ಮುಂಬೈಗೆ 5 ವಿಕೆಟ್ ಜಯ

ಮುಂಬೈ: ಶನಿವಾರ ಮುಂಬೈ ನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನದ ವಿರುದ್ಧ 5 ವಿಕೆಟ್ ಗೆಲುವು ಸಾಧಿಸುವ ಮೂಲಕ ಮುಂಬೈ ತಂಡ ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು.

ಮೊದಲಿಗೆ ಫೀಲ್ಡಿಂಗ್ ಆಯ್ದುಕೊಂಡ ಮುಂಬೈ ತಂಡ 20 ಓವರ್ ಗಳಲ್ಲಿ ಆರ್ ಆರ್ ತಂಡವನ್ನು 6 ವಿಕೆಟ್ ಗಳ ನಷ್ಟಕ್ಕೆ 158 ರನ್ ಗಳಿಗೆ ಕಟ್ಟಿ ಹಾಕಿತ್ತು. ಆರ್ ಆರ್ ತಂಡದ ಸವಾಲನ್ನು ಬೆನ್ನಟ್ಟಿದ ಎಂಐ, 19.2 ಓವರ್ ಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 161 ರನ್ ಗಳಿಸಿ ಗೆಲುವನ್ನು ತನ್ನದಾಗಿಸಿಕೊಂಡಿತು.

ಆರ್ ಆರ್ ಪರ ಜೋಸ್ ಬಟ್ಲರ್ 52 ಎಸೆತಗಳಲ್ಲಿ 67 ರನ್ ಗಳಿಸಿ ಮಿಂಚಿದರು. ಮುಂಬೈ ತಂಡದ ಪರ ಸೂರ್ಯಕುಮಾರ್ ಯಾದವ್ (39 ಎಸೆತಗಳಲ್ಲಿ 51 ರನ್ ಗಳನ್ನು ಗಳಿಸಿದರು. ಯಾದವ್ ಜೊತೆಗೆ ತಿಲಕ್ ವರ್ಮಾ ಜೊತೆಗೂಡಿ 81 ರನ್ ಗಳ ಜೊತೆಯಾಟ ನೀಡಿದರು.

ಮುಂಬೈ ಇಂಡಿಯನ್ಸ್ ಬೌಲಿಂಗ್ ವಿಭಾಗದಲ್ಲಿ ರಿಲೀ ಮೆರೆಡಿತ್ 24 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಆರ್ ಆರ್ ವಿಭಾಗದಲ್ಲಿ ಆರ್ ಅಶ್ವಿನ್ 21 ರನ್ ನೀಡಿ 1 ವಿಕೆಟ್ ಗಳಿಸಿದರು.

Latest Indian news

Popular Stories