ಮುಸ್ಲಿಮರನ್ನು ಆರ್ಥಿಕವಾಗಿ ಬಹಿಷ್ಕರಿಸುವ ಹಿಂದೂ ಗುಂಪುಗಳ ಪ್ರತಿಜ್ಞೆ – ತನಿಖೆಗೆ ಆದೇಶ

ಮುಸ್ಲಿಂ ಸಮುದಾಯವನ್ನು ಆರ್ಥಿಕವಾಗಿ ಬಹಿಷ್ಕರಿಸಲು ಹಿಂದೂ ಗುಂಪುಗಳು ಪ್ರತಿಜ್ಞೆ ಮಾಡುವುದನ್ನು ತೋರಿಸುವ ವೀಡಿಯೊ ಕ್ಲಿಪ್‌ನ ಕುರಿತು ಛತ್ತೀಸ್‌ಗಢ ಪೊಲೀಸರು ಶುಕ್ರವಾರ ತನಿಖೆಗೆ ಆದೇಶಿಸಿದ್ದಾರೆ.

ಬಲಪಂಥೀಯ ಗುಂಪುಗಳ ನೂರಾರು ಜನರು ಮುಸ್ಲಿಮರನ್ನು ಆರ್ಥಿಕವಾಗಿ ಬಹಿಷ್ಕರಿಸುವ ಕುರಿತಾದ ಪ್ರತಿಜ್ಞೆ ಮಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ವೀಡಿಯೋ ಸುರ್ಗುಜಾ ಜಿಲ್ಲೆಯ ಗ್ರಾಮವೊಂದರದ್ದು, ಅಲ್ಲಿ ಭಾಷಣಕಾರನೊಬ್ಬ ಪ್ರಮಾಣ ವಚನ ಬೋಧಿಸಿದರು.
ಜನರು ಅದನ್ನು ಪುನರಾವರ್ತಿಸಿದ್ದಾರೆ. “ಇಂದಿನಿಂದ, ನಾವು ಯಾವುದೇ ಮುಸ್ಲಿಂ ಅಂಗಡಿಯವರಿಂದ ಸರಕುಗಳನ್ನು ಖರೀದಿಸುವುದಿಲ್ಲ ಎಂದು ನಾವು ಹಿಂದೂಗಳು ಪ್ರತಿಜ್ಞೆ ಮಾಡುತ್ತೇವೆ.” ಎಂದು ಹೇಳಿದ್ದಾರೆ.

“ನಾವು ಹಿಂದೂಗಳು ನಮ್ಮ ಭೂಮಿಯನ್ನು ಯಾವುದೇ ಮುಸಲ್ಮಾನರಿಗೆ ಮಾರಾಟ ಮಾಡುವುದಿಲ್ಲ ಅಥವಾ ಬಾಡಿಗೆಗೆ ನೀಡುವುದಿಲ್ಲ. ಮತ್ತು ನಾವು ಯಾವುದೇ ಭೂಮಿಯನ್ನು ಮುಸ್ಲಿಮರಿಗೆ ಬಾಡಿಗೆಗೆ ನೀಡಿದ್ದರೆ, ನಾವು ಅದನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇವೆ. ನಾವು ಹಿಂದೂಗಳು ಮುಸ್ಲಿಮರೊಂದಿಗೆ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ವರದಿಯಂತೆ ಮುಸ್ಲಿಂ ವಿರೋಧಿ ಪ್ರತಿಜ್ಞೆ ಮಾಡಲು ಗ್ರಾಮಕ್ಕೆ ಹೋಗಿ ನಿವಾಸಿಗಳನ್ನು ಒಟ್ಟುಗೂಡಿಸಿದ ಜನರನ್ನು ಹುಡುಕುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಚ್‌ಟಿಯೊಂದಿಗೆ ಮಾತನಾಡಿದ ಸರ್ಗುಜಾ ಕಲೆಕ್ಟರ್ ಸಂಜೀವ್ ಝಾ, ಈ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಕೋಮು ಘರ್ಷಣೆಯ ನಂತರ ಈ ವೀಡಿಯೊ ಕಾಣಿಸಿಕೊಂಡಿದೆ.

ಕೆಲವರು ಘಟನೆಯ ಲಾಭ ಪಡೆದುಕೊಂಡು ಕುಂಡಿ ಕಾಲಾದಲ್ಲಿ ಮುಸ್ಲಿಮರ ವಿರುದ್ಧ ಪ್ರತಿಜ್ಞೆ ಮಾಡಲು ಗ್ರಾಮಸ್ಥರನ್ನು ಪ್ರಚೋದಿಸಿದರು ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಶುಕ್ಲಾ ಪಿಟಿಐಗೆ ತಿಳಿಸಿದ್ದಾರೆ.

ಸಭೆಗೆ ಪ್ರಮಾಣ ವಚನ ಬೋಧಿಸಿದವರನ್ನು ಗುರುತಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

Latest Indian news

Popular Stories