ಸಂವಿಧಾನ ಇಲ್ಲದಿದ್ದರೆ ಈಗಿನ ಸ್ಥಾನಮಾನ ಏರಿಗೂ ಸಿಗುತ್ತಿರಲಿಲ್ಲ – ಪ್ರೊ.ಫಣಿರಾಜ್

ಎಲ್ಲರ ಸಮಾನತೆಗಾಗಿ ಅಂಬೇಡ್ಕರ್ ಹೋರಾಟ ನಡೆಸಿದರು.ಅವರ ಹೋರಾಟದ ಫಲವಾಗಿ ಭಾರತದ ಮಹಿಳೆಯರು ಶಿಕ್ಷಣ ಪಡೆಯುವಂತಾಯಿತು ಎಂದು ಪ್ರೊ.ಫಣಿರಾಜ್ ಹೇಳಿದರು.

ಅಂಬೇಡ್ಕರ್ ಪರಿ ನಿಬ್ಬಾಣ ದಿನಾಚರಣೆಯ ಹಿನ್ನಲೆಯಲ್ಲಿ ದಲಿತ ಸಂಘರ್ಷ ಸಮಿತಿ(ರಿ) ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ವತಿಯಿಂದ ಹುತಾತ್ಮ ಸ್ಮಾರಕ ಬಳಿ ಹಮ್ಮಿಕೊಂಡ ಮೇಣದ ಬತ್ತಿ ಜಾಥ ಮತ್ತು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸಂವಿಧಾನ ಇಲ್ಲದಿದ್ದರೆ ಈಗಿನ ಸ್ಥಾನಮಾನ ಏರಿಗೂ ಸಿಗುತ್ತಿರಲಿಲ್ಲ.ಮೀಸಲಾತಿಯನ್ನು ಹಿಂಬಾಗಿಲಿನಿಂದ ತೆಗೆಯುವ ಪ್ರಯತ್ನಗಳು ನಡೆಯುತ್ತಿವೆ. ಅದರೊಂದಿಗೆ ದಲಿತರನ್ನು ಶಿಕ್ಷಣ ವಂಚಿತನ್ನಾಗಿಸುವ ಪ್ರಯತ್ನ ಸಾಗುತ್ತಿದೆ. ಈ ಸಂದರ್ಭದಲ್ಲಿ ಅಂಬೇಡ್ಕರ್ ವಿಚಾರಧಾರೆಗಳನ್ನು ಹಿಡಿದು ನಾವು ಸಮತೆಯೊಂದಿಗೆ ಹೊಸ ನಾಯಕತ್ವ ಹುಟ್ಟು ಹಾಕಬೇಕು ಎಂದು ಕರೆ ನೀಡಿದರು.

ಎಲ್ಲ ಪಕ್ಷಗಳಿಗೆ ಶಾಂತಿಯ, ಸಮಾನತೆಯ ಪಾಠ ಹೇಳಿಕೊಡಬೇಕಾಗಿದೆ.ದಲಿತರ ಹಕ್ಕುಗಳನ್ನೊಳಗೊಂಡ ಪ್ರಣಾಳಿಕೆ ಸಿದ್ಧಪಡಿಸಿ ಎಲ್ಲ ಪಕ್ಷಗಳು ಒಪ್ಪುವಂತೆ ಮಾಡಬೇಕು. ತನ್ನ ಸರ್ವಾಧಿಕಾರದಿಂದ ಈ ದೇಶದವನ್ನು ನಾಶ ಮಾಡಲು ಸರಕಾರ ಪ್ರಯತ್ನ ಮಾಡುತ್ತಿದೆ. ನಾವು ಅಂಬೇಡ್ಕರ್ ವಿಚಾಧಾರೆಯನ್ನು ಉಳಿಸಿಕೊಳ್ಳಬೇಕು. ಅದರೊಂದಿಗೆ ನಮ್ಮನ್ನು, ದೇಶವನ್ನು ಉಳಿಸುವ ಪ್ರಯತ್ನ ಮಾಡಬೇಕೆಂದು ಹೇಳಿದರು.

ದಲಿತ ಮುಖಂಡ ಸುಂದರ್ ಮಾಸ್ತರ್ ಮಾತನಾಡಿ,ಬ್ರಾಹ್ಮಣ್ಯದ ಪೂಜಾ ವಿಧಾನ ಕಡಿಮೆ ಮಾಡಿ. ಅದರ ಹಣವನ್ನು ನಿಮ್ಮ ಶಿಕ್ಷಣಕ್ಕೆ ಬಳಸಿ. ನಿಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯಿರಿ. ನಾವು ಹಿಂದು ಧರ್ಮದಿಂದ ಹೊರ ಬನ್ನಿ ಎಂದು ಹೇಳುವುದಿಲ್ಲ. ಆದರೆ ಮೂಡನಂಬಿಕೆ, ವೈದಿಕಶಾಹಿ ಪೂಜಾ ವಿಧಾನದ ಹಿಂದೆ ಹೋಗದೆ ನಿಮ್ಮದೇ ಸಂಸ್ಕೃತಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ ಎಂದರು.

ಮುಂದುವರಿದು ಮಾತನಾಡಿದ ಅವರು, “ಅಂಬೇಡ್ಕರ್ ವಿಚಾರಧಾರೆಗಳನ್ನು ವ್ಯಾಪಾಕಗೊಳಿಸಿ ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕು. ಇಂದು ಮೇಲ್ಜಾತಿಯವರಿಗೆ ಮೀಸಲಾತಿ ನೀಡಿ ಅದರ ಪ್ರಾಮುಖ್ಯತೆಯನ್ನು ಕಡಿಮೆಗೊಳಿಸುವ ಹುನ್ನಾರ ನಡೆಯುತ್ತಿದೆ. ದೇಶದಲ್ಲಿ 3% ಇರುವ ಬ್ರಾಹ್ಮಣರಿಗೆ ಹತ್ತು ಶೇ ಮೀಸಲಾತಿ ನೀಡಲಾಗಿದೆ. ದಲಿತರಿಗೆ ಜನಸಂಖ್ಯೆಯ ಆಧಾರದಲ್ಲಿ ಕಡಿಮೆ ಮೀಸಲಾತಿ ನೀಡಲಾಗಿದೆ. ಇಂತಹ ಅನ್ಯಾಯದ ವಿರುದ್ಧ ಹೋರಾಟ ಮುಂದುವರಿಸಬೇಕೆಂದರು”.

ಸಾಮಾಜಿಕ ಕಾರ್ಯಕರ್ತ ಇದ್ರಿಸ್ ಹೂಡೆ ಮಾತನಾಡಿ, “ಅಂಬೇಡ್ಕರ್ ಅವರ ಚಿಂತನೆ, ಹೋರಾಟ ಈ ದೇಶದ ಎಲ್ಲ ಜನರಿಗೂ ಸ್ಪೂರ್ತಿದಾಯಕ ಮತ್ತು ಅದರಿಂದಲೇ ದೇಶದ ಉನ್ನತಿ ಸಾಧ್ಯ”.

ಅಂಬೇಡ್ಕರ್ ಸಂವಿಧಾನದಲ್ಲಿ ದಾಖಲಿಸಿದ ಮೌಲ್ಯವನ್ನು ಮಸುಕುಗೊಳಿಸುವ ಪ್ರಯತ್ನ ಸಾಗುತ್ತದೆ. ಜನಾಂಗ ಮೇಲ್ಮೈ ಸಾಧಿಸಲು ಯತ್ನಿಸುವ ಸಮುದಾಯಗಳು ಬೇರೆಯವರ ಮೌಲ್ಯ ಒಪ್ಪುತ್ತಿಲ್ಲ.ಅವರು ಮೋಸಗಾರಿಕೆಯ ಮೂಲಕ ಉನ್ನತ ಸ್ಥಾನ ಪಡೆಯಲು ಪ್ರಯತ್ನಿಸುತ್ತಾರೆ. ಆದರೆ ಅಂಬೇಡ್ಕರ್ ತನ್ನ ಬೌದ್ಧಿಕತೆಯ ಮೂಲಕ ಉನ್ನತ ಸ್ಥಾನ ಗಳಿಸಿದರು ಎಂದರು.

ಸರ್ವ ಜನರ ಸಮಾನತೆ, ಘನತೆ ಎತ್ತಿ ಹಿಡಿಯುವುದು ಮೀಸಲಾತಿಯ ಪ್ರಮುಖ ಉದ್ದೇಶ. ಆದರೆ ಇಂದು ಮೀಸಲಾತಿಯನ್ನು ಮೇಲ್ಜಾತಿಯವರಿಗೂ ನೀಡಿ ಮೀಸಲಾತಿ ಮುಗಿಸುವ ಹುನ್ನಾರ ನಡೆಯುತ್ತಿದೆ.

ನಾವು ಮುಂದಿಟ್ಟ ಹೆಜ್ಜೆಯನ್ನು ತಡೆಯುವ ಪ್ರಯತ್ನ ನಡೆಯುತ್ತಿದೆ. ಇದನ್ನೆಲ್ಲ ತಡೆಯಲು ನಮ್ಮಲ್ಲಿ ಸೈದ್ದಾಂತಿಕ ಸ್ಪಷ್ಟತೆ ಬರಬೇಕು. ಮುಂದಿನ ಪೀಳಿಗೆಗೆ ಅಂಬೇಡ್ಕರ್ ಸಿದ್ಧಾಂತ ಬೋಧಿಸಬೇಕು. ಅವರನ್ನು ಅದಕ್ಕಾಗಿ ತಯಾರಿಸಬೇಕು.

ಅಂಬೇಡ್ಕರ್ ಅವರ ಆದರ್ಶವನ್ನು ನಾವು ಎತ್ತಿ ಹಿಡಿಯಬೇಕು. ಜೀವನದಲ್ಲಿ ಅದನ್ನು ಪಾಲಿಸಿ ಸಂಸ್ಥಾಪಿಸುವ ಪ್ರಯತ್ನ ಮಾಡಬೇಕು ಎಂದರು. ನಾವು ಒಗ್ಗಟ್ಟಿನಲ್ಲಿ ಮುಂದುವರಿಯಬೇಕು. ಯಾವುದೇ ವ್ಯಂಗ್ಯಕ್ಕೂ ನಾವು ಜಗ್ಗದೇ ಮುಂದುವರಿಯಬೇಕಾದ ಅವಶ್ಯಕತೆ ಇದೆಯೆಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಭಾಕರ್ ಸಾಲಿಯಾನ್ ಮಾತನಾಡಿದರು. ಸಭೆಯ ಮುನ್ನ ಜೋಡುಕಟ್ಟೆಯಿಂದ ಡಯಾನ ಸರ್ಕಲ್ ಆಗಿ ಹುತಾತ್ಮ ಚೌಕದವರೆಗೆ ಮೇಣದ ಬತ್ತಿ ಮೆರವಣೆಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಶ್ಯಾಮರಾಜ್ ಬಿರ್ತಿ, ಎಸ್.ಎಸ್ ಪ್ರಸಾದ್, ಮಂಜುನಾಥ್ ಬಾಳ್ಕುದ್ರು, ಪರಮೇಶ್ವರ ಉಪ್ಪೂರು, ವರದರಾಜ್ ಬಿರ್ತಿ, ರಂಝಾನ್ ಕಾಪು, ಕುಸುಮ ಕಟ್ಕೆರೆ ಮಂಜುನಾಥ್,ವಸಂತಿ ಶಿವಾನಂದ್ ಪಡುಬಿದ್ರಿ ಉಪಸ್ಥಿತರಿದ್ದರು.

Latest Indian news

Popular Stories