“ಎಕ್ಸಿಟ್ ಪೋಲ್” ಪ್ರಸಾರ ಮಾಡದಂತೆ ನಿರ್ಬಂಧ ಹೇರಿದ ಚುನಾವಣಾ ಆಯೋಗ

ಲೋಕಸಭೆ ಚುನಾವಣೆ ಮತ್ತು ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಏಪ್ರಿಲ್ 19ರ ಬೆಳಗ್ಗೆ 7 ರಿಂದ ಜೂನ್ 1ರ ಸಂಜೆ 6.30ರವರೆಗೆ ಎಕ್ಸಿಟ್ ಪೋಲ್(Exit Poll)ನ ಫಲಿತಾಂಶಗಳನ್ನು ಪ್ರಕಟಿಸುವುದಕ್ಕೆ ಚುನಾವಣಾ ಆಯೋಗವು ನಿರ್ಬಂಧ ಹೇರಿದೆ.

ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಚುನಾವಣಾ ಆಯೋಗವು, “ಮತದಾನ ಪ್ರಕ್ರಿಯೆಯ ಬಳಿಕ ನಡೆಸಲಾಗುವ ಮತದಾನೋತ್ತರ ಸಮೀಕ್ಷೆಗಳನ್ನು ನಡೆಸದಂತೆ ಹಾಗೂ ಅವುಗಳ ಫಲಿತಾಂಶಗಳನ್ನು ಪ್ರಕಟಿಸಬಾರದು” ಎಂದು 1951 ರ ಜನತಾ ಪ್ರಾತಿನಿಧ್ಯ ಕಾಯಿದೆ (ಆರ್‌ಪಿಎಕ್ಟ್) ಅನ್ನು ಉಲ್ಲೇಖಿಸಿ ನಿರ್ಬಂಧ ವಿಧಿಸಿದೆ.

“ಸುದ್ದಿ ಬ್ಯೂರೋಗಳು, ಮಾಧ್ಯಮ ಸಂಸ್ಥೆಗಳು, ರೇಡಿಯೋ ಮತ್ತು ದೂರದರ್ಶನ ಚಾನೆಲ್‌ಗಳು ಮತದಾನದ ಬಳಿಕ ಸಂಗ್ರಹಿಸುವ ಯಾವುದೇ ಅಭಿಪ್ರಾಯ ಅಥವಾ ಸಮೀಕ್ಷೆಯ ಫಲಿತಾಂಶಗಳನ್ನು ಪ್ರಸಾರ ಮಾಡುವಂತಿಲ್ಲ” ಎಂದು ತಿಳಿಸಿದೆ.

Latest Indian news

Popular Stories