“ಚೊಂಬು” ಜಾಹೀರಾತಿನಿಂದ ಕಂಗಲಾದ ಬಿಜೆಪಿ ; ಚುನಾವಣಾ ಆಯೋಗಕ್ಕೆ ದೂರು

ಚೊಂಬು ಜಾಹೀರಾತು ನೀಡುವ ಮೂಲಕ ಕಾಂಗ್ರೆಸ್ ಪಕ್ಷವು ಅವಹೇಳನ ಮಾಡಿದೆ. ಈ ಬಗ್ಗೆ ಕ್ಷಮೆ ಕೋರುವಂತೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷ ನೀಡಿದ್ದ ಚೊಂಬು ಜಾಹೀರಾತು ನಂತರ ರಾಜ್ಯದಲ್ಲಿ ಜಾಹೀರಾತು ಸಮರಕ್ಕೆ ಕಾರಣವಾಗಿತ್ತು. ಕಾಂಗ್ರೆಸ್​​ನ ಚೊಂಬು ಜಾಹೀರಾತಿನಿಂದ ಕೆರಳಿದ್ದ ಬಿಜೆಪಿ ಕೂಡ ಹಲವು ಜಾಹೀರಾತುಗಳನ್ನು ನೀಡಿತ್ತು. ಆದರೆ ಕಾಂಗ್ರೆಸ್ ಚೊಂಬು ಜಾಹೀರಾತು ಮಾತ್ರ ದೇಶದಲ್ಲೇ ಗಮನ ಸೆಳೆದಿತ್ತು. ಪ್ರಧಾನಿ‌ ಮೋದಿಯ ಸಮೀಪ ದೇವೆಗೌಡರು ದಿನಪತ್ರಿಕೆ “ಚೊಂಬು” ಜಾಹೀರಾತು ಹಿಡಿದ ಫೋಟೋ ಕೂಡ ಭಾರೀ ವೈರಲಾಗಿತ್ತು.

‘ಇದು ಚೊಂಬು’ ಶೀರ್ಷಿಕೆಯೊಂದಿಗೆ ಕಾಂಗ್ರೆಸ್ ಪಕ್ಷವು ಪತ್ರಿಕೆಗಳಿಗೆ ಜಾಹೀರಾತು ನೀಡಿತ್ತು. ಅದರ ಫೋಟೋದೊಂದಿಗೆ ದೂರು ನೀಡಿರುವ ಬಿಜೆಪಿ, ‘ಚೊಂಬು’ ಪದವು ಕನ್ನಡದ ಆಡುಭಾಷೆಯಾಗಿದೆ ಮತ್ತು ಇದನ್ನು ‘ಮೋಸಗೊಳಿಸುವುದು ಅಥವಾ ಖಾಲಿ ಭರವಸೆಗಳನ್ನು’ ನೀಡುವುದನ್ನು ಸೂಚಿಸಲು ಬಳಸಲಾಗುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಿಗಿದೆ.

ಈ ಜಾಹೀರಾತಿನ ಉದ್ದೇಶವು ಕೇಂದ್ರ ಸರ್ಕಾರವು ರಾಜ್ಯಕ್ಕೆ ಮೋಸ ಮಾಡಿದೆ ಎಂಬುದನ್ನು ಬಿಂಬಿಸುವುದಾಗಿದೆ. ಆದರೆ, ಕಾಂಗ್ರೆಸ್​ ಈ ಆರೋಪ ಸಂಪೂರ್ಣ ಸುಳ್ಳು ಎಂದು ದೂರಿನಲ್ಲಿ ಬಿಜೆಪಿ ಉಲ್ಲೇಖಿಸಿದೆ.

Latest Indian news

Popular Stories