ಪ್ರತಿಷ್ಠಿತ ʼಎಮ್ಮಿ ಪ್ರಶಸ್ತಿʼ ಗೆದ್ದ‌ ಭಾರತದ ವೀರ್‌ ದಾಸ್

ಮುಂಬಯಿ: ಆಸ್ಕರ್‌ ಪ್ರಶಸ್ತಿಯಂತೆಯೇ ಜನಪ್ರಿಯತೆಯನ್ನು ಪಡೆದುಕೊಂಡಿರುವ,ಟಿವಿ ಶೋಗಳಿಗಾಗಿ ನೀಡಲಾಗುವ ಪ್ರತಿಷ್ಠಿತ ʼಎಮ್ಮಿ ಪ್ರಶಸ್ತಿʼಯನ್ನು ಭಾರತದ ಜನಪ್ರಿಯ ಕಮಿಡಿಯನ್ ಹಾಗೂ ನಟರೊಬ್ಬರು ಗೆದ್ದುಕೊಂಡಿದ್ದಾರೆ.

ಜಗತ್ತಿನ ಅತ್ಯುತ್ತಮ ಟಿವಿಶೋಗಳಿಗಾಗಿʼಎಮ್ಮಿʼ ಎನ್ನುವ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇದು ಆಸ್ಕರ್‌ನಂತೆ ಜನಪ್ರಿಯವಾಗಿದೆ. ಭಾರತದ ಶೋಗಳು ಅಥವಾ ಕಲಾವಿದರು ಈ ಪ್ರಶಸ್ತಿಯನ್ನು ಗೆದ್ದಿರುವುದು ಕಡಿಮೆ. ಈ ಬಾರಿ ಭಾರತದ ಖ್ಯಾತ ಕಮಿಡಿಯನ್‌ ವೀರ್‌ ದಾಸ್‌ ಎಮ್ಮಿಯ ಯೂನಿಕ್ ಕಾಮಿಡಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಸದ್ಯ ನೆಟ್‌ ಫ್ಲಿಕ್ಸ್‌ ನಲ್ಲಿ ಸ್ಟ್ರೀಮ್‌ ಆಗುತ್ತಿರುವ ವೀರ್ ದಾಸ್​ರ ಕಾಮಿಡಿ ಸ್ಪೆಷಲ್ ‘ವೀರ್ ದಾಸ್; ಲ್ಯಾಂಡಿಂಗ್ʼ ಶೋಗಾಗಿ ವೀರ್‌ ದಾಸ್‌ ʼಎಮ್ಮಿʼ ಪ್ರಶಸ್ತಿಯನ್ನು ಗೆದ್ದಿದ್ದಾರೆ.

‘ವೀರ್ ದಾಸ್; ಲ್ಯಾಂಡಿಂಗ್ʼಹಾಗೂ ‘ಡೆರ್ರಿ ಗರ್ಲ್ಸ್​-ಸೀಸನ್ 3’ ಜಂಟಿಯಾಗಿ ಈ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಭಾರತೀಯ ಟಿವಿಲೋಕದ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್‌ ಅವರಿಗೆ ಭಾರತೀಯ ಟಿವಿ ಜಗತ್ತಿನಲ್ಲಿ ತಂದ ಬದಲಾವಣೆ ಹಾಗೂ ವೃತ್ತಿ ಜೀವನದ ಸಾಧನೆಗಾಗಿ ಎಮ್ಮಿ ಡೈರೆಕ್ಟೊರೇಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಭಾರತದ ಶೆಫಾಲಿ ಶಾ( ಕ್ರೈಂ ಡೈಲಿ ಸರಣಿ) ಮತ್ತು ಜಿಮ್ ಸರ್ಬ್‌ (ಅತ್ಯುತ್ತಮ ನಟ ವಿಭಾಗ) ಸಹ ನಾಮಿನೇಟ್‌ ಆಗಿದ್ದರು. ಆದರೆ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.

ಅಮೆರಿಕ ಸೇರಿದಂತೆ ಜಗತ್ತಿನ ನಾನಾ ದೇಶಗಳಲ್ಲಿ ಹಾಸ್ಯ‌ ಕಾರ್ಯಕ್ರಮಗಳನ್ನು ನೀಡಿರುವ ವೀರ್‌ ದಾಸ್‌ ಅನೇಕ ಸಲಿ ವಿವಾದಕ್ಕೂ ಗುರಿಯಾಗಿದ್ದಾರೆ. ಭಾರತದ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾನೆ ಎನ್ನುವ ಕಾರಣಕ್ಕೆ ಆತನನ್ನು ಭಯೋತ್ಪಾದಕ ಎಂದು ಕರೆಯಲಾಗಿತ್ತು. ಇದಲ್ಲದೆ ಅವರ ವಿರುದ್ಧ ದೂರು ಸಹ ದಾಖಲಾಗಿತ್ತು.

‘ವೀರ್ ದಾಸ್; ಲ್ಯಾಂಡಿಂಗ್ʼನಲ್ಲಿ ಭಾರತ ಹಾಗೂ ಅಮೆರಿಕದ ಆಚಾರ – ವಿಚಾರಗಳನ್ನು ರಾಜಕೀಯವಾಗಿ ದೃಷ್ಟಿಕೋನವಿನ್ನಿಟ್ಟುಕೊಂಡು ಹಾಸ್ಯವಾಗಿ ಮಾತನಾಡಿದ್ದಾರೆ.

Latest Indian news

Popular Stories