ನರಸಿಂಹ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್’ನಿಂದ ಸ್ಪರ್ಧಿಸುದಿಲ್ಲ ಎಂದ ಅಬ್ದುಲ್ ಅಝೀಜ್; ಬಿಜೆಪಿಗೆ, ಎಸ್.ಡಿ.ಪಿ.ಗೆ ಹಿನ್ನಡೆ!

ಮೈಸೂರು,ಎ.3: ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ
ಮಾಜಿ ಅಧ್ಯಕ್ಷ ಹಾಗೂ ಮೈಸೂರು ನರಸಿಂಹರಾಜ ಕ್ಷೇತ್ರದ
ಜೆಡಿಎಸ್ ಟಿಕೆಟ್ ಆಕಾಂಕ್ಷಿ ಅಬ್ದುಲ್ ಅಝೀಝ್ (ಮೈಸೂರು‌ ಬಾವಾ), ‘ಈ ಬಾರಿ ಜೆಡಿಎಸ್‌ನಿಂದ
ಸ್ಪರ್ಧಿಸುವುದಿಲ್ಲ’ ಎಂದು ಹೇಳುವ ಮೂಲಕ ಟಿಕೆಟ್
ಘೋಷಣೆಗೂ ಮುನ್ನ ಜೆಡಿಎಸ್ ತೊರೆಯುವ ಸುಳಿವು
ನೀಡಿದರೊಂದಿಗೆ ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದಾರೆ.

ಅಬ್ದುಲ್ ಅಝೀಝ್ ಕಾಂಗ್ರೆಸ್ ಸೇರ್ಪಡೆಯಿಂದ ಜೆಡಿಎಸ್ ನರಸಿಂಹ ರಾಜ ಕ್ಷೇತ್ರದಲ್ಲಿ ದುರ್ಬಲವಾಗುವುದರೊಂದಿಗೆ ಎಸ್.ಡಿ.ಪಿ.ಐ ಅಭ್ಯರ್ಥಿಯ ಮೇಲೂ ಪರಿಣಾಮ ಬೀರಲಿದೆ. ಕಾಂಗ್ರೆಸ್ ಈ ಬಾರಿ ಅಬ್ದುಲ್ ಅಝೀಝ್ ಬೆಂಬಲಿತ ಮತ ಕೂಡ ಕ್ರೋಡಿಕರಿಸುವುದರಿಂದ ಅದರ ಬಲ ಹೆಚ್ಚಾಗಲಿದೆ. ಇದರಿಂದ ಬಿಜೆಪಿ ಮತ್ತು ಎಸ್.ಡಿ.ಪಿ.ಐಗೆ ಭಾರೀ‌ ಹಿನ್ನಡೆಯಾಗಿದೆ. ಜೆಡಿಎಸ್ ಮತ ಕಾಂಗ್ರೆಸ್ ಪಾಲಾಗುವ ಸಾಧ್ಯತೆ ಹೆಚ್ಚಿದೆ.

ರಾಜೀವ್ ನಗರದ ನಿವಾಸದಲ್ಲಿ ಸೋಮವಾರ ತಮ್ಮ
ಬೆಂಬಲಿಗರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು. ಈ ವೇಳೆ ಅಬ್ದುಲ್ಲಾ ಅವರ ಬಹುತೇಕ ಬೆಂಬಲಿಗರು ಅಬ್ದುಲ್
ಅಝೀಝ್ ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಸ್ವಾಗತಿಸುವುದಾಗಿ ಭರವಸೆ ನೀಡಿದ್ದು, ಕಾಂಗ್ರೆಸ್ ಸೇರ್ಪಡೆಗೂ ಮುನ್ನ ಅಬ್ದುಲ್ಲಾ ಮಾಜಿ ಸಚಿವರೂ‌ ಹಾಗೂ ತಮ್ಮ ಆಪ್ತರಾದ ಯು.ಟಿ.ಖಾದರ್ ಜತೆ ಮಾತುಕತೆ ನಡೆಸಿದ್ದಾರೆ ಎಂದು ವಾರ್ತಾಭಾರತಿ ವರದಿ ಮಾಡಿದೆ.

ಬಳಿಕ ಯು.ಟಿ.ಖಾದರ್ ಶಾಸಕ ತನ್ನೀರ್ ಸೇರ್
ಜತೆ ಚರ್ಚಿಸಿ ಅಬ್ದುಲ್ ಅಝೀಝ್ ಕಾಂಗ್ರೆಸ್ ಸೇರ್ಪಡೆ ಕುರಿತು ಹಸಿರು ನಿಶಾನೆ ತೋರಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಟಿಕೆಟ್ ಘೋಷಣೆಯಲ್ಲಿ ಜೆಡಿಎಸ್ ಪಕ್ಷದ ವಿಳಂಬ ನೀತಿಯೇ ನಮಗೆ ಬೇಸರ ತರಿಸಿದೆ. ಈ ಹಿಂದೆ ಪಕ್ಷದ ವರಿಷ್ಠರು ಎನ್.ಆರ್.ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸಂಘಟಿಸುವಂತೆ ಸೂಚಿಸಿದ್ದರು. ಅದರಂತೆ ನಾನು ಕೆಲಸ ಮಾಡಿದ್ದರೂ ವರಿಷ್ಠರು ನನ್ನನ್ನು ನಿರ್ಲಕ್ಷ್ಯ ಮಾಡಿದರು. ಅದಕ್ಕಾಗಿಯೇ ನಾನು ಪಂಚರತ್ನಯಾತ್ರೆಗೆ ಹೋಗಲಿಲ್ಲ ಎಂದು ಮಾಧ್ಯಮದರವರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Latest Indian news

Popular Stories