ರಾಯಚೂರು: ಮತದಾನ ಕೇಂದ್ರಕ್ಕೆ ಕೇಸರಿ ಶಾಲು ಧರಿಸಿ ಬಂದ ಕೆಲವರು – ಮಾತಿನ ಚಕಮಕಿಯ ನಂತರ ಅನುಮತಿ

ಮಾನ್ವಿ: ಮತದಾನ ಕೇಂದ್ರದಲ್ಲಿ ಪೊಲೀಸರು ಹಾಗೂ ಕೇಸರಿ ಶಾಲು ಹಾಕಿದ ಯುವಕರ ನಡುವೆ ಮಾತಿನ ಚಕಮಕಿ ನಡೆದ ಘಟನೆ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನಲ್ಲಿ ನಡೆದಿದೆ.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬ್ರಾಹ್ಮಣ ವಾಡಿ ಬೂತ್ ಸಂಖ್ಯೆ 185ರಲ್ಲಿ ಈ ಘಟನೆ ನಡೆದಿದೆ.

ಕೆಲವು ಯುವಕರು ಕೇಸರಿ ಶಾಲು ಧರಿಸಿ ಮತದಾನ ಮಾಡಲು ಬಂದಿದ್ದಾರೆ. ಶಾಲು ಧರಿಸಿ ಹೋಗಲು ನಿರಾಕರಿಸಿದಾಗ ಮಾತಿನ ಚಕಮಕಿ ನಡೆದಿದೆ. ಬಳಿಕ ಆರ್ ಓ ಮತಗಟ್ಟೆ ಚುನಾವಣೆ ಅಧಿಕಾರಿ, ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಕೇಸರಿ ಶಾಲು ಧರಿಸಿ ಮತದಾನ ನಡೆಸಬಹುದು ಎಂದು ತಿಳಿಸಿದ್ದಾರೆ.ಕೇಸರಿ ಶಾಲು ಮೇಲೆ ಯಾವುದೇ ತರಹದ ಚಿಹ್ನೆ ಕಂಡುಬಂದಲ್ಲಿ ಮತ ಚಲಾವಣೆ ಅವಕಾಶ ನೀಡುವುದಿಲ್ಲ ಎಂದು ಆರ್ ಓ ತಿಳಿಸಿದರು.

Latest Indian news

Popular Stories