ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣ: ಸಿದ್ದರಾಮಯ್ಯ ಸರ್ಕಾರವೇ ನೇರ ಹೊಣೆ ಎಂದ ಬಿಜೆಪಿ ಶಾಸಕ

ಹುಬ್ಬಳ್ಳಿ, ಏಪ್ರಿಲ್‌ 19: ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಪುತ್ರಿ ನೇಹಾ ಕೊಲೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಪ್ರಕರಣದ ಬಗ್ಗೆ ಬಿಜೆಪಿ ಶಾಸಕ ಹುಬ್ಬಳ್ಳಿ ವಿ.ಸುನೀಲ್‌ ಕುಮಾರ್‌ ಪ್ರತಿಕ್ರಿಯಿಸಿದ್ದು, ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಹುಬ್ಬಳ್ಳಿಯಲ್ಲಿ ನಡೆದ ಯುವತಿಯ ಕೊಲೆ ಪ್ರಕರಣ ಇಡಿ ರಾಜ್ಯವೇ ಬೆಚ್ಚಿ ಬೀಳಿಸಿದೆ.ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣ, ತುಷ್ಠೀಕರಣ ನೀತಿಯಿಂದಾಗಿ ಮುಸ್ಲಿಂ ಸಮುದಾಯದ ಮದೋನ್ಮತ್ತರು ಕಾಯಿದೆಯ ಭಯವಿಲ್ಲದೇ ಕೊಲೆ, ದೊಂಬಿ, ನೈತಿಕ ಪೊಲೀಸ್ ಗಿರಿ, ದೇಶ ವಿರೋಧಿ ಘೋಷಣೆ, ಅಲ್ಲಾಹು ಅಕ್ಬರ್ ಎಂದು ಮಾತ್ರ ಹೇಳಬೇಕೆಂಬ ಸಾರ್ವಜನಿಕ ಆಗ್ರಹ ನಡೆಸುತ್ತಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಸರ್ಕಾರವೇ ನೇರ ಹೊಣೆ.

ಹುಬ್ಬಳಿಯಲ್ಲಿ ನಡೆದ ಈ ಬರ್ಭರ ಹತ್ಯೆಯನ್ನು ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ನಡೆದ ಕೊಲೆ ಎಂದು ಸಾಮಾನ್ಯೀಕರಿಸುವುದು ಸರಿಯಲ್ಲ. ಇದರ ಹಿಂದೆ ಇರುವುದು ಈ ದೇಶದ ಕಾನೂನನ್ನು ಧಿಕ್ಕರಿಸುವ ಮಾನಸಿಕತೆ ಅಡಗಿದೆ. ಹಾವೇರಿಯಲ್ಲಿ ಹಿಂದೂ ಯುವಕನ ಜೊತೆ ಬಂದ ಮುಸ್ಲಿಂ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ತಾಲೀಬಾನಿ ಮನಃಸ್ಥಿತಿ.

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಮಾಡಿದವರನ್ನು ಸಮರ್ಥಿಸುವ ಮನಃಸ್ಥಿತಿ, ಸಹೋದ್ಯೋಗಿಗೆ ಮನೆಗೆ ಡ್ರಾಪ್ ಕೊಟ್ಟ ಹಿಂದು ಯುವಕನ ಮೇಲೆ ಹಲ್ಲೆ ನಡೆಸಿದ ನೈತಿಕ ಪೊಲೀಸ್ ಗಿರಿಯ ಮನಃಸ್ಥಿತಿ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಡುವ ವಿಧ್ವಂಸಕ ಮನಃಸ್ಥಿತಿ, ರಾಮನವಮಿಯ ದಿನ ಜೈ ಶ್ರೀರಾಮ್ ಎಂದವರ ಮೇಲೆ ಹಲ್ಲೆ ಮಾಡುವ ಮನಃಸ್ಥಿತಿ.

ಈಗ ಹುಬ್ಬಳ್ಳಿಯಲ್ಲಿ ಹಾಡಹಗಲೇ ಹಿಂದೂ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡುವ ಮನಃಸ್ಥಿತಿ ಎಲ್ಲವೂ ಒಂದೆ. ಇದರ ಹಿಂದಿರುವ ಧೈರ್ಯ ಯಾವುದು ಗೊತ್ತೇ? ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಸಿದ್ದರಾಮಯ್ಯನವರೇ ಇದೇನಾ ನೀವು ಕಂಡ ಕನಸಿನ ಸರ್ವಜನಾಂಗದ ಶಾಂತಿಯ ತೋಟ? ಎಂದು ಪ್ರಶ್ನಿಸಿದ್ದಾರೆ

Latest Indian news

Popular Stories