ಪರ್ಯಾಯ ನಾಯಕತ್ವ ಬೆಳೆಸಲು ಬಿಎಸ್‌ವೈ ರಾಜೀನಾಮೆ ಪಡೆದ ಹೈಕಮಾಂಡ್

ಬೆAಗಳೂರು: ಪರ್ಯಾಯ ನಾಯಕತ್ವ ಬೆಳೆಸುವುದೂ ಸೇರಿದಂತೆ ಹಲವು ಕಾರಣಗಳಿಂದಾಗಿ ಬಿಜೆಪಿ ವರಿಷ್ಠರು ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಗೆ ಮುಂದಾಗಿದ್ದಾರೆ. ಯಡಿಯೂರಪ್ಪ ಅವರ ನಂತರ ಯಾರು ಎಂಬ ಪ್ರಶ್ನೆಯನ್ನು ಇತರೆ ಪಕ್ಷಗಳು ಮುಂದಿಡುತ್ತಿದ್ದವು. ಯಡಿಯೂರಪ್ಪ ಅವರಿಗೆ ವಯಸ್ಸಾಗಿದ್ದರಿಂದ ಮತ್ತೊಬ್ಬ ನಾಯಕರ ಅಗತ್ಯವೂ ಬಿಜೆಪಿಗಿತ್ತು. ಯಡಿಯೂರಪ್ಪ ಅಧಿಕಾರದಲ್ಲಿರುವವರೆಗೆ ಪರ್ಯಾಯ ನಾಯಕತ್ವ ಬೆಳೆಸುವುದು ಸಾಧ್ಯವಿರಲಿಲ್ಲ. ಈ ಕಾರಣದಿಂದಾಗಿಯೇ ಯಡಿಯೂರಪ್ಪ ಅವರಿಂದ ರಾಜೀನಾಮೆ ಪಡೆದಿರಬಹುದು ಎಂಬ ಚರ್ಚೆ ನಡೆಯುತ್ತಿದೆ.
ಒಂದು ಅಥವಾ ಎರಡು ವರ್ಷದ ಅವಧಿಗೆ ಮಾತ್ರ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿರಿಸಿ ನಂತರ ಪರ್ಯಾಯ ನಾಯಕರನ್ನು ಬೆಳಸುವ ಉದ್ದೇಶವನ್ನು ಹೈಕಮಾಂಡ್ ಹೊಂದಿತ್ತು. ಈಗದು ಕಾರ್ಯರೂಪಕ್ಕೆ ಬರುತ್ತಿದೆ. ಇವೆಲ್ಲದರ ಮಧ್ಯೆ ಯಡಿಯೂರಪ್ಪ ರಾಜೀನಾಮೆಗೆ ಐದು ಪ್ರಮುಖ ಕಾರಣಗಳನ್ನು ನೀಡಲಾಗುತ್ತಿದೆ.
2014ರಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಬಿಜೆಪಿಯಲ್ಲಿ ಮುನ್ನಲೆಗೆ ಬಂದ ಮೇಲೆ, 75 ವರ್ಷ ಮೀರಿದವರಿಗೆ ಪಕ್ಷ ಮತ್ತು ಸರಕಾರದಲ್ಲಿ ಸ್ಥಾನ ನೀಡಬಾರದು ಎಂಬ ತೀರ್ಮಾನಕ್ಕೆ ಬರಲಾಗಿತ್ತು.
ಈ ಸೂತ್ರದ ಪ್ರಕಾರವೇ ಯಡಿಯೂರಪ್ಪ ಅವರ ರಾಜೀನಾಮೆ ಪಡೆಯಲಾಗಿದೆ. ಕರ್ನಾಟಕದಲ್ಲಿ ಜಾತಿ ರಾಜಕಾರಣ ದೊಡ್ಡ ಪ್ರಾಮುಖ್ಯತೆಯನ್ನು ಹೊಂದಿದೆ, ಬಿಜೆಪಿಯು ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಜಾತಿ ರಾಜಕೀಯದ ಹೊರತು ಕೇಡರ್ ವ್ಯವಸ್ಥೆಯನ್ನು ಹೊಂದಿದೆ. ಜಾತಿಯ ಹೊರತಾಗಿಯೂ ಸಣ್ಣ ಪುಟ್ಟ ಸಮುದಾಯದ ನಾಯಕರನ್ನು ಮುಖ್ಯಮಂತ್ರಿಯನ್ನಾಗಿಸಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಯಶಸ್ವಿಯಾಗಿದೆ. ಇದಕ್ಕೆ ಹರ್ಯಾಣ ಒಂದು ಪ್ರಮುಖ ಉದಾಹರಣೆ ಎನ್ನಬಹುದು. ಆದರೆ ಕರ್ನಾಟಕದಲ್ಲಿ ಬಿಜೆಪಿ ಸ್ಥಿತಿ ಭಿನ್ನವಾಗಿದೆ. ಕರ್ನಾಟಕ ಬಿಜೆಪಿ ಎಂದರೆ ಲಿಂಗಾಯತ ಎನ್ನುವ ಇಮೇಜ್ ಅನ್ನು ಯಡಿಯೂರಪ್ಪ ಮಾಡಿಟ್ಟಿದ್ದಾರೆ. ಇದರಿಂದ ಹೊರಬರಲು ಬಿಜೆಪಿ ಪ್ರಯತ್ನಿಸುತ್ತಿದೆ. ಕರ್ನಾಟಕದಲ್ಲಿಯೂ ಜಾತಿ ಆಧಾರಿತ ರಾಜಕೀಯವನ್ನು ಹೋಗಲಾಡಿಸಿ ಪಕ್ಷ ಆಧಾರಿತ ಪಕ್ಷದ ಕೇಡರ್ ವ್ಯವಸ್ಥೆಯನ್ನು ತರಲು ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ ಎನ್ನಲಾಗಿದೆ.
ಪಕ್ಷಕ್ಕಾಗಿ ಸೈಕಲ್ ತುಳಿದು ನೂರಾರು ಕಿ.ಮೀ ಪಾದಯಾತ್ರೆ ಮಾಡಿ ಹೋರಾಟಗಳ ಮೂಲಕ ಬಿಜೆಪಿಯನ್ನು ಯಡಿಯೂರಪ್ಪ ಕಟ್ಟಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗೆಯೇ ಬಿಜೆಪಿಗೆ ಶಾಸಕರಿಲ್ಲದ ಸಂದರ್ಭದಲ್ಲಿ ಒಬ್ಬರೇ ಪಕ್ಷದಲ್ಲಿ ನಿಂತು ವಿಧಾನಸಭೆಯಲ್ಲಿ ಹೋರಾಡಿದವರು ಯಡಿಯೂರಪ್ಪ, ಆದರೆ 2012-13ರ ಸಮಯದಲ್ಲಿ ಯಡಿಯೂರಪ್ಪ ತೆಗೆದುಕೊಂಡ ಒಂದು ತೀರ್ಮಾನವು ಪಕ್ಷದಲ್ಲಿನ ಅವರ ಇಮೇಜ್ನ್ನು ಕುಗ್ಗಿಸಿದೆ. ಅಂದು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಿದ್ದಾರೆ ಎನ್ನುವ ಕೋಪದಿಂದ ಕರ್ನಾಟಕ ಜನತಾ ಪಕ್ಷ ಕೆಜೆಪಿಯನ್ನು ಯಡಿಯೂರಪ್ಪ ಸ್ಥಾಪಿಸಿದ್ದರು. 2013ರಲ್ಲಿ ಬಿಜೆಪಿ ಶೋಚನೀಯವಾಗಿ ಸೋತಿತ್ತು. ಈ ಹಿನ್ನೆಲೆಯಲ್ಲಿಯೂ ಯಡಿಯೂರಪ್ಪ ಅವರ ಬಗ್ಗೆ ಪಕ್ಷದ ಕೆಲ ಮುಖಂಡರಲ್ಲಿ ಅಸಮಾಧಾನ ಇತ್ತು.
ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರು ಪ್ರಶ್ನಾತೀತ ನಾಯಕರಾಗಿ ಬೆಳೆದಿದ್ದರು. ಬಿಜೆಪಿಯ ಹಾಲಿ ಹೈಕಮಾಂಡ್ ವ್ಯವಸ್ಥೆಗೂ , ವರಿಷ್ಠರಲ್ಲಿನ ವ್ಯವಸ್ಥೆಗೂ ಹಾಗೂ ರಾಜ್ಯಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದವು. ದೇಶದ ಉಳಿದೆಲ್ಲಾ ಸಿಎಂಗಳು ಬಿಜೆಪಿ ವರಿಷ್ಠರ ಹಿಡಿತದಲ್ಲಿದ್ದಾರೆ. ಆದರೆ, ಕರ್ನಾಟಕದಲ್ಲಿ ತನ್ನದೇ ಒಂದು ವ್ಯವಸ್ಥೆಯನ್ನು ಯಡಿಯೂರಪ್ಪ ಹೊಂದಿದ್ದರು. ಹೈಕಮಾಂಡ್ ನಿರ್ಧಾರ ಎಂದರೂ ಕೂಡ ಯಡಿಯೂರಪ್ಪ ಪ್ರತಿ ವಿಚಾರದಲ್ಲೂ ಮುನ್ನಲೆಗೆ ತೆಗೆದುಕೊಂಡು ಪ್ರಚಾರವನ್ನು ಪಡೆಯುತ್ತಿದ್ದರು.
ಹೀಗಾಗಿ ರಾಜ್ಯ ಬಿಜೆಪಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದಲೂ ಬಿಎಸ್‌ವೈ ಅವರ ರಾಜೀನಾಮೆ ಪಡೆಯಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಯಡಿಯೂರಪ್ಪ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರದಿಂದ ಕೆಳಗಿಳಿಯಲು ಕಾರಣವಾಗಿದ್ದು ಭ್ರಷ್ಟಾಚಾರ ಆರೋಪ. ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ವರದಿಯು ಯಡಿಯೂರಪ್ಪಗೆ ಕಂಟಕವಾಗಿ ಪರಿಣಮಿಸಿತ್ತು.
ಈಗಲೂ ಅಂತಹದೇ ಆರೋಪಗÀಳಿವೆ. ಆಡಳಿತದಲ್ಲಿ ಕುಟುಂಬದ ಸದಸ್ಯರ ಹಸ್ತಕ್ಷೇಪದ ಆರೋಪವೂ ಇದೆ. ಇದು ಸಹ ಬಿಎಸ್‌ವೈ ರಾಜೀನಾಮೆಗೆ ಕಾರಣವಾಗಿರಬಹುದು ಎಂಬ ಚರ್ಚೆ ನಡೆಯುತ್ತಿದೆ.

Latest Indian news

Popular Stories

error: Content is protected !!