ಅನುಮಾನಾಸ್ಪದ ಬಿತ್ತನೆ ಬೀಜದ ಪೊಟ್ಟಣಗಳನ್ನು ರೈತರು ಸ್ವಿಕರಿಸದಿರುವ ಕುರಿತು

ಕಲಬುರಗಿ ಜಿಲ್ಲೆಯ ರೈತ ಬಾಂದವರಲ್ಲಿ ವಿನಂತಿಸುವುದೆನೆಂದರೆ ಚೈನಾ ದೇಶದಿಂದ ಅನೇಕ ದೇಶಗಳಿಗೆ ನಿಗೂಡ/ರಹಶ್ಯಮಯ ಬೀತ್ತನೆ ಬೀಜಗಳು ರಪ್ತು ಮಾಡುತ್ತಿದ್ದು. ಈಗಾಗಲೆ ಇಂಗ್ಲೇಡ್, ಕೆನಡಾದಲ್ಲಿ ಅನೇಕ ರೈತರಿಗೆ ಇಂತಹ ಬೀಜಗಳು ಸರಬರಾಜು ಆಗಿರುತ್ತವೆ ಮತ್ತು ಅಮೇರಿಕಾದ ೨೮ ರಾಜ್ಯಗಳಲ್ಲಿ ೧೪ ಜಾತಿಯ ಹೂವಿನ ತಳಿಗಳು ಪತ್ತೆ ಮಾಡಲಾಗಿದೆ. ಈ ಬೀಜಗಳು ಕೀಟಗಳು ಮತ್ತು ರೋಗಾಣುಗಳಿಂದ ಕೂಡಿದ್ದು ಅವುಗಳು ಬಿತ್ತನೆ ಮಾಡಿದರೆ ಬೆಳೆಯು ಬೆಳೆದ ಒಂದು ತಿಂಗಳಲ್ಲಿ ಕೀಟ ಮತ್ತು ರೋಗದ ಬಾದೆಯಿಂದ ಬೆಳೆ ಸಂಪರ‍್ಣ ನಾಶವಾಗುತ್ತದೆ. ಇಂತಹ ಅನಾಮಧೇಯ ಬಿತ್ತನೆ ಬೀಜದ ಪೊಟ್ಟಣಗಳನ್ನು ರೈತರ ಮನೆ ಬಾಗಿಲಿಗೆ ಬಂದಲ್ಲಿ ಸ್ವಿಕರಿಸಿ ಬೀಜಗಳನ್ನು ಬಿತ್ತನೆ ಮಾಡಿದರೆ ಕೃಷಿ ಸಂಪರ‍್ಣ ನಾಶವಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿವಿಧ ತಳಿಗಳ ಬಿತ್ತನೆ ಬೀಜದ ಈ ಪೊಟ್ಟಣಗಳನ್ನು ಯಾರು ಕಳುಹಿಸುತ್ತಾರೆ, ಇವು ಎಲ್ಲಿಂದ ಬರುತ್ತವೆ ಎಂಬ ವಿವರಗಳೆ ಇರುವುದಿಲ್ಲ ಅದು ತಿವ್ರ ಆಚ್ಚರಿಗೂ ಕಾರಣವಾಗಿದೆ. ಈ ಬೀಜಗಳ ಬಳಕೆಯಿಂದ ಕೃಷಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಕ್ರಮೇಣ ಭೂಮಿಯೇ ಬಂಜರಾಗುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ಬಿತ್ತನೆ ಬೀಜದ ಪೊಟ್ಟಣಗಳು ರೈತರು ಸ್ವಿಕರಿಸದೆ ವಾಪಸ್ಸು ಕಳುಹಿಸಬೇಕು, ಒಂದು ವೇಳೆ ಸ್ವಿಕರಿಸಿದರೆ ಅದನ್ನು ಪೊಟ್ಟಣ ಸಮೇತ ಸುಟ್ಟು ಹಾಕಬೇಕು ಇಲ್ಲವೆ ಸಮೀಪದ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಅಥವಾ ಹತ್ತಿರದ ಪೋಲಿಸ್ ಠಾಣೆಗೆ ಮಾಹಿತಿ ನೀಡಬೇಕು ಮತ್ತು ಪ್ರಮಾಣಿಕೃತ, ನಂಬಿಕೆಯ ಮಾರಾಟಗಾರರಿಂದ ಮಾತ್ರ ಬಿತ್ತನೆ ಬೀಜ ಖರಿದಿ ಮಾಡಿ ಅದರ ರಶೀದಿ ಪಡೆದು ಬೀಜಗಳು ಬಿತ್ತನೆ ಮಾಡಬೇಕೆಂದು ಈ ಪತ್ರಿಕೆ ಪ್ರಕಟಣೆ ಮೂಲಕ ರೈತರಲ್ಲಿ ಮನವಿ ಮಾಡಲಾಗಿದೆ.

Latest Indian news

Popular Stories