ಮಂಗಳೂರು: ವೃದ್ಧ ಸೋದರಿಯರಿಬ್ಬರು ನೇಣು ಬಿಗಿದು ಆತ್ಮಹತ್ಯೆ

ಮಂಗಳೂರು: ನಗರದ ಕದ್ರಿ ಕಂಬಳದ ಮನೆಯೊಂದರಲ್ಲಿ ಅಕ್ಕ- ತಂಗಿ ಇಬ್ಬರು ಫ್ಯಾನಿಗೆ ನೇಣು ಬಿಗಿದುಕೊಂಡು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಸುಂದರಿ ಶೆಟ್ಟಿ (80) ಮತ್ತು ಅವರ ತಂಗಿ ಲತಾ ಭಂಡಾರಿ (70)ಎಂದು ಗುರುತಿಸಲಾಗಿದೆ.

‘ನಗರದ ಯಶರಾಜ್ ಅವರು ಬಾರಿನಲ್ಲಿ ಕೆಲಸ ಮಾಡುತ್ತಿದ್ದರು. ಅವರೊಂದಿಗೆ ಪತ್ನಿ ಲತಾ ಭಂಡಾರಿ ಹಾಗೂ ಪತ್ನಿಯ ಅಕ್ಕ ಸುಂದರಿ ಶೆಟ್ಟಿ ಮಂಗಳೂರಿನ ಚಂದ್ರಿಕಾ ಬಡಾವಣೆಯ ಮನೆಯಲ್ಲಿ ವಾಸವಾಗಿದ್ದರು. ಜಗನ್ನಾಥ ಅವರು ಎಂದಿನಂತೆ ಬೆಳಿಗ್ಗೆ ಬಾರಿಗೆ ಕೆಲಸಕ್ಕೆ ಹೋಗಿದ್ದರು. ಸಂಜೆ 4.30ರ ಸುಮಾರಿಗೆ ಮನೆಗೆ ಬಂದು ಸೋದರಿಯರು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿತ್ತು’ ಎಂದು ಗೊತ್ತಾಗಿದೆ.

‘ಜಗನ್ನಾಥ ಭಂಡಾರಿ ಅವರು ದೂರು ನೀಡಿದ್ದು, ಕದ್ರಿಯ ನಗರ ಪೂರ್ವ ಠಾಣೆಯಲ್ಲಿ ಅಸಹಜ ಸಾವಿನ ಕುರಿತು ಎಫ್‌ಐಆರ್‌ ದಾಖಲಾಗಿದೆ.

Latest Indian news

Popular Stories