ಪ್ರಚೋದನಕಾರಿಯಾಗಿ ನೃತ್ಯ ಮಾಡುವುದು ಅಥವಾ ಸನ್ನೆ ಮಾಡುವುದು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 294 ರ ಅಡಿಯಲ್ಲಿ ಅಶ್ಲೀಲ ಕೃತ್ಯಗಳು ಎಂದು ಪರಿಗಣಿಸಲಾಗುವುದಿಲ್ಲ : ಹೈಕೋರ್ಟ್

ಮುಂಬೈ: ಶಾರ್ಟ್ ಸ್ಕರ್ಟ್ ಧರಿಸುವುದು, ಪ್ರಚೋದನಕಾರಿಯಾಗಿ ನೃತ್ಯ ಮಾಡುವುದು ಅಥವಾ ಸನ್ನೆ ಮಾಡುವುದು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 294 ರ ಅಡಿಯಲ್ಲಿ ಅಶ್ಲೀಲ ಕೃತ್ಯಗಳು ಎಂದು ಪರಿಗಣಿಸಲಾಗುವುದಿಲ್ಲ ಎಂದು ಬೊಂಬೈ ಹೈಕೋರ್ಟ್ ಹೇಳಿದೆ.

ಸಣ್ಣ ಬಟ್ಟೆಯಲ್ಲಿ ಮಹಿಳೆಯರ ನೃತ್ಯ ಪ್ರದರ್ಶನವನ್ನು ವೀಕ್ಷಿಸಿದ ಮತ್ತು ನೃತ್ಯ ಮಾಡುವಾಗ ಅವರ ಮೇಲೆ ನಕಲಿ ಕರೆನ್ಸಿ ನೋಟುಗಳನ್ನು ಸುರಿದ ಆರೋಪದ ಮೇಲೆ ಮುಂಬೈ ಹೈ ಕೋರ್ಟ್ ಈ ತೀರ್ಮಾನ ನೀಡಿದೆ.ಈ ವಿಷಯದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿನಯ್ ಜೋಶಿ ಮತ್ತು ವಾಲ್ಮೀಕಿ ಸಾ ಮೆನೆಜಸ್ ಅವರ ವಿಭಾಗೀಯ ಪೀಠವು ಪ್ರಸ್ತುತ ಭಾರತೀಯ ಸಮಾಜದಲ್ಲಿ ಚಾಲ್ತಿಯಲ್ಲಿರುವ ನೈತಿಕತೆಯ ಸಾಮಾನ್ಯ ಮಾನದಂಡಗಳನ್ನ ಗಮನದಲ್ಲಿಟ್ಟುಕೊಂಡಿದೆ.

Latest Indian news

Popular Stories