ಮೈಸೂರು ದಸರಾ ಮಹೋತ್ಸವ – ಮಧುವಣಗಿತ್ತಿಯಂತೆ ಶೃಂಗಾರಗೊಂಡ ಮೈಸೂರು ನಗರ

ಮೈಸೂರು: ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.ವಿಶ್ವಪ್ರಸಿದ್ಧ ದಸರಾ ಹಬ್ಬಕ್ಕೆ ಇಡೀ ಮೈಸೂರು ನಗರ ಮಧುವಣಗಿತ್ತಿಯಂತೆ ರೆಡಿಯಾಗಿದೆ.

ಬೆಳಗ್ಗೆ 10.15 ರಿಂದ 10.36 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನ ದಲ್ಲಿ ಚಾಮುಂಡಿ ದೇವಿಯ ಅಗ್ರ ಪೂಜೆ ನೆರವೇರಿಸುವ ಮೂಲಕ ದಸರಾಗೆ ಚಾಲನೆ ಸಿಗಲಿದೆ. ಸಂಜೆ 6:30 ರಿಂದ 7:15ರ ಶುಭಮೇಷ ಲಗ್ನದಲ್ಲಿ ಅರಮನೆಯಲ್ಲಿ ಪೂಜೆಗಳು ನೆರವೇರಲಿದೆ.
ಚಾಮುಂಡಿ ಬೆಟ್ಟ, ಅರಮನೆ ಅಂಗಳದಲ್ಲಿ ಬೃಹತ್ ವೇದಿಕೆಗಳು ನಿರ್ಮಾಣವಾಗಿವೆ. ದಸರಾಗಾಗಿ ಸಿಎಂ ಸಿದ್ದರಾಮಯ್ಯ 3 ದಿನಗಳ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಇದಕ್ಕೂ ಮೊದಲು ನಾದಬ್ರಹ್ಮ ಹಂಸಲೇಖ ಶಕ್ತಿ ದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದು ಅಗ್ರಪೂಜೆ ಸಲ್ಲಿಸುವರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಾಗಿರ್ತಾರೆ.

Latest Indian news

Popular Stories