ಮೈಸೂರು: ಎಲೆಕ್ಟ್ರಿಕ್ ಸ್ಕೂಟರ್ ಒಂದನ್ನು ಚಾರ್ಜ್ ಇಟ್ಟ ವೇಳೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಎರಡು ಬೈಕ್ ಸೇರಿದಂತೆ ಒಂದು ಕಾರು ಸುಟ್ಟು ಕರಕಲಾದ ಘಟನೆ ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ಮಂಗಳವಾರ ತಡ ರಾತ್ರಿ ಸಂಭವಿಸಿದೆ.
ಕುಂಬಾರಕೊಪ್ಪಲಿನ ಗುಂಡಪ್ಪ ಎಂಬುವವರಿಗೆ ಸೇರಿದ ಎಲೆಕ್ಟ್ರಿಕ್ ಸ್ಕೂಟರನ್ನು ಮನೆಯ ಅಂಗಳದಲ್ಲಿ ನಿಲ್ಲಿಸಿ ಚಾರ್ಜ್ ಮಾಡಲಾಗುತ್ತಿತ್ತು ಈ ವೇಳೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಸ್ಕೂಟರ್ ಗೆ ಬೆಂಕಿ ಹೊತ್ತಿಕೊಂಡಿದೆ ಪರಿಣಾಮ ಅಲ್ಲೇ ಇದ್ದ ಇನ್ನೊಂದು ಸ್ಕೂಟರ್ ಗೆ ಬೆಂಕಿ ಆವರಿಸಿದೆ ಇದೆ ವೇಳೆ ಸ್ಕೂಟರ್ ಪಕ್ಕದಲ್ಲೇ ನಿಲ್ಲಿಸಿದ್ದ ಕಾರಿಗೂ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ ಅಲ್ಲದೆ ಮನೆಗೂ ಹಾನಿಯಾಗಿದೆ.
ಬೆಂಕಿ ಹೊತ್ತಿಕೊಂಡ ವಿಚಾರ ಗೊತ್ತಾಗುವ ವೇಳೆ ಮೂರೂ ವಾಹನಗಳು ಸಂಪೂರ್ಣ ಸುಟ್ಟು ಕಾರಕಲಾಗಿತ್ತು ಅಲ್ಲದೆ ಮನೆಯ ಕಿಟಕಿ ಬಾಗಿಲುಗಳಿಗೆ ಹಾನಿಯಾಗಿದೆ.
ಮೇಟಗಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ