ಭಾಗವತ ಸುಬ್ರಹ್ಮಣ್ಯಧಾರೇಶ್ವರ ನಿಧನ

ಬಡಗುತಿಟ್ಟಿನ ಪ್ರಸಿದ್ಧ ಭಾಗವತ, ರಾಜ್ಯ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯಧಾರೇಶ್ವರ (68) ಇಂದು ಮುಂಜಾನೆ ಬೆಂಗಳೂರಿನಲ್ಲಿ ನಿಧನರಾದರು.
ಹಂಗಾರಕಟ್ಟೆಯಕ್ಷಗಾನಕೇಂದ್ರದಲ್ಲಿ ಎಂ.ನಾರ್ಣಪ್ಪಉಪ್ಪೂರರ ಶಿಷ್ಯರಾದಇವರು,ಕಾಳಿಂಗನಾವಡರಒಡನಾಡಿಯಾಗಿರಂಗಪ್ರವೇಶಿಸಿ, “”ಧಮೇಳಗಳಲ್ಲಿ ಮುಖ್ಯವಾಗಿ ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿಒಟ್ಟೂ ಸುಮಾರು ನಾಲ್ಕುವರೆ ದಶಕಗಳ ಕಲಾ ಸೇವೆ ಗೈದಿದ್ದರು.ತಮ್ಮ ಸುಮಧುರಕಂಠ,ಪರಂಪರೆಯ ಶೈಲಿ,ರಂಗತಂತ್ರದಿಂದ ಹಲವು ಪೌರಾಣಿಕ ಮತ್ತು ಹೊಸ ಪ್ರಸಂಗಗಳಿಗೆ ಜೀವತುಂಬಿದ್ದರು.ಯಕ್ಷಗಾನಕಲಾರಂಗಅವರಿಗೆ ನಾರ್ಣಪ್ಪಉಪ್ಪೂರರ ಪ್ರಶಸ್ತಿ ನೀಡಿ ಗೌರ”ಸಿತ್ತು. ಚಿಟ್ಟಾಣಿರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು. ಅವರು ಪತ್ನಿ, ಪುತ್ರ, ಪುತ್ರಿ ಹಾಗು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.ಅವರ ನಿಧನಕ್ಕೆಯಕ್ಷಗಾನಕಲಾರಂಗದಅಧ್ಯಕ್ಷ ಎಂ.ಗಂಗಾಧರರಾವ್,ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ

Latest Indian news

Popular Stories