ಬಿ.ವೈ.ವಿಜಯೇಂದ್ರ ಬೆಂಗಾವಲು ವಾಹನದ ಟೈರ್ ಸ್ಫೋಟ; ಅಪಾಯದಿಂದ ಪಾರು

ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳುತ್ತಿದ್ದ ವೇಳೆ ಅವರ ಬೆಂಗಾವಲು ವಾಹನದ ಟೈರ್ ಬ್ಲಾಸ್ಟ್ ಆದ ಘಟನೆ ನಡೆದಿದೆ

ಆಂಧ್ರಪ್ರದೇಶದ ಅದೋನಿ ಬಳಿ ಹೆದ್ದಾರಿಯಲ್ಲಿ ಬಿ.ವೈ.ವಿಜಯೇಂದ್ರ ಅವರ ಬೆಂಗಾವಲು ವಾಹನದ ಎರಡೂ ಟೈರ್ ಗಳು ಏಕಾಏಕಿ ಸ್ಫೋಟಗೊಂಡಿವೆ.ಅದೃಷ್ಟವಶಾತ್ ಯಾವುದೇ ಸಮಸ್ಯೆಯಾಗಿಲ್ಲ. ನಿನ್ನೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಾವಲು ವಾಹನದ ಟೈರ್ ಸ್ಫೋಟಗೊಂಡ ಪರಿಣಾಮ ಬಿ.ವೈ.ವಿಜಯೇಂದ್ರ ಅವರು 3 ಗಂಟೆ ತಡವಾಗಿ ಮಂತ್ರಾಲಯದ ರಾಯರ ಮಠಕ್ಕೆ ತಲುಪಿದ್ದಾರೆ ಎಂದು ತಿಳಿದುಬಂದಿದೆ.

Latest Indian news

Popular Stories