ಎಸ್ಆರ್ ಹೆಚ್ ವಿರುದ್ಧ 21 ರನ್ ಗಳ ಗೆಲುವು ಸಾಧಿಸಿದ ದೆಹಲಿ ಕ್ಯಾಪಿಟಲ್ಸ್

ನವದೆಹಲಿ: ಡೇವಿಡ್ ವಾರ್ನರ್ ಹಾಗೂ ರೋವ್ಮನ್ ಪೊವೆಲ್ ಭರ್ಜರಿ ಆಟದ ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 21 ರನ್ ಗಳ ಅಂತರದಿಂದ ಮಣಿಸಿದೆ.

ಐಪಿಎಲ್-2022 ಸೀಸನ್ ನಲ್ಲಿ ವಾರ್ನರ್ ಗರಿಷ್ಠ ಸ್ಕೋರ್ (58 ಎಸೆತಗಳಲ್ಲಿ 92 ರನ್) ಗಳಿಸಿದ್ದಾರೆ. ರೋವ್ಮನ್ ಪೊವೆಲ್ (35 ಎಸೆತಗಳಲ್ಲಿ 67 ರನ್ ಗಳಿಸಿದ್ದು, ವಾರ್ನರ್-ಪೋವೆಲ್ 122 ರನ್ ಗಳ ಜೊತೆಯಾಟವನ್ನು ತಂಡಕ್ಕೆ ನೀಡಿದ್ದರು.

ಭರ್ಜರಿ ಜೊತೆಯಾಟದ ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡ 3 ವಿಕೆಟ್ ಗಳ ನಷ್ಟಕ್ಕೆ 207 ರನ್ ಗಳಿಸಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡ ಸನ್ ರೈಸರ್ಸ್ ನ್ನು 8 ವಿಕೆಟ್ ಗಳ ನಷ್ಟಕ್ಕೆ 186 ರನ್ ಗೆ ಕಟ್ಟಿ ಹಾಕಿತು. ದೆಹಲಿ ಕ್ಯಾಪಿಟಲ್ಸ್ ತಂಡ ಈ ಗೆಲುವಿನ ಮೂಲಕ ಅಂಕ ಪಟ್ಟಿಯಲ್ಲಿ 2 ಸ್ಥಾನಗಳ ಏರಿಕೆ ಕಂಡಿದ್ದು ಟಾಪ್ 5 ನೇ ತಂಡದಲ್ಲಿದೆ.

10 ಪಂದ್ಯಗಳಿಂದ ಡೆಲ್ಲಿ ಕ್ಯಾಪಿಟಲ್ಸ್ 10 ಪಾಯಿಂಟ್ ಗಳನ್ನು ಗಳಿಸಿದೆ. 208 ರನ್ ಗಳ ಕಠಿಣ ಸನ್ ರೈಸರ್ಸ್ ಆರಂಭದಲ್ಲೇ, ಅಭಿಷೇಕ್ ಶರ್ಮಾ (6 ಎಸೆತಗಳಲ್ಲಿ 7 ರನ್), ಕೇನ್ ವಿಲಿಯಮ್ಸ್ (11 ಎಸೆತಗಳಲ್ಲಿ 4 ರನ್) ವಿಕೆಟ್ ಕಳೆದುಕೊಳ್ಳುವ ಮೂಲಕ ಆಘಾತ ಎದುರಿಸಿತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಡೆಲ್ಲಿ ತಂಡದ ಬೌಲರ್ ಗಳ ಎದುರು ಮಂಕಾದರು, ಪರಿಣಾಮ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟ ಎದುರಿಸಿ 186 ರನ್ ಗಳಿಸಲಷ್ಟೇ ಸಾಧ್ಯವಾಯಿತು.

Latest Indian news

Popular Stories