Featured StorySports

ಟಿ-20 ವಿಶ್ಬಕಪ್: ಪಾಕಿಸ್ತಾನವನ್ನು ಮತ್ತೆ ಮಣ್ಣು ಮುಕ್ಕಿಸಿದ ಭಾರತ

ಶ್ರೀಲಂಕಾದಲ್ಲಿ ನಡೆದ ಇಂಡಿಯಾ-ಪಾಕಿಸ್ತಾನ ಪಂದ್ಯಾವಳಿಯಲ್ಲಿ ಭಾರತ ಪಾಕಿಸ್ತಾನವನ್ನು ಮತ್ತೆ ಮಣ್ಣು ಮುಕ್ಕಿಸಿದೆ. ಈ ಮೂಲಕ ವಿಶ್ವಕಪ್ ನಲ್ಲಿ ತನ್ನ ಗೆಲುವಿನ ನಾಗಾಲೋಟವನ್ನು ಭಾರತ ಮುಂದುವರಿಸಿದೆ. 61 ರನ್ ಗಳ ಅಂತರದಿಂದ ಪಂದ್ಯ ಗೆದ್ದುಕೊಂಡಿದೆ.

ಮೊದಲು ಬ್ಯಾಟ್ ಮಾಡಿದ ಭಾರತ ಇಶಾನ್ ಕಿಶನ್ ಅವರ 77 ರನ್ ಗಳ ಹೊಡಿ ಬಡಿ ಆಟದ ಸಹಾಯದಿಂದ 175 ರನ್ ಗುರಿಯನ್ನು ಪಾಕಿಸ್ತಾನಕ್ಕೆ ನೀಡಿತ್ತು. ಆದರೆ ಭಾರತೀಯ ಬೌಲರ್ ಗಳ ದಾಳಿಯ ಮುಂದೆ ಪಾಕ್ ಬ್ಯಾಟ್ಸ್ ಮೆನ್ ಗಳು ತರಗೆಲೆಗಳಂತೆ ಉದುರಿ ಭಾರತದ ಎದುರು ಸೋಲೊಪ್ಪಿಕೊಂಡರು.

Back to top button