ಟೀಕಾಕಾರರ ಬಾಯಿ ಮುಚ್ಚಿಸಿದ ಕ್ರಿಕೆಟ್ ಕಿಂಗ್ | ಸಚಿನ್ ತೆಂಡೂಲ್ಕರ್ ದಾಖಲೆ ಉಡಾಯಿಸಿದ ವಿರಾಟ್ ಕೊಹ್ಲಿ, ಏಕದಿನದಲ್ಲಿ ಬೃಹತ್ ವಿಶ್ವ ದಾಖಲೆ

ಕೊಲಂಬೋ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿದ ಭಾರತ ರನ್ ಮೆಷಿನ್ ವಿರಾಟ್ ಕೊಹ್ಲಿ ಕೊನೆಗೂ ಭಾರತ ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದು ಮಾತ್ರವಲ್ಲದೇ ಏಕದಿನದಲ್ಲಿ ಬೃಹತ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಹೌದು.. ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತದ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಮೀರಿಸಿ ಏಕದಿನದಲ್ಲಿ ಬೃಹತ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಪಾಕಿಸ್ತಾನ ಬೌಲರ್ ಗಳನ್ನು ಇನ್ನಿಲ್ಲದಂತೆ ಕಾಡಿದ ವಿರಾಟ್ ಕೊಹ್ಲಿ ಕೇವಲ 94 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ ಬರೊಬ್ಬರಿ ಅಜೆಯೇ 122ರನ್ ಗಳನ್ನು ಪೇರಿಸಿದರು.

ಅಂತೆಯೇ ಏಕದಿನ ಕ್ರಿಕೆಟ್ ವೃತ್ತಿ ಜೀವನದ ತಮ್ಮ 47ನೇ ಶತಕವನ್ನೂ ಪೂರೈಸಿಕೊಂಡರು. ಅಲ್ಲದೆ ಏಕದಿನ ಕ್ರಿಕೆಟ್ ವೃತ್ತಿ ಜೀವನದಲ್ಲಿ 13000 ರನ್ ಪೂರೈಸಿದರು. ಆ ಮೂಲಕ ಕೊಹ್ಲಿ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದಿದ್ದಾರೆ.

34 ವರ್ಷ ವಯಸ್ಸಿನ ಕೊಹ್ಲಿ ತಮ್ಮ 267ನೇ ಇನ್ನಿಂಗ್ಸ್‌ನಲ್ಲಿ 13000 ರನ್ ಗಳನ್ನು ಪೂರೈಸಿದ್ದು, ಆ ಮೂಲಕ ವೇಗವಾಗಿ 13000 ರನ್ ಪೂರೈಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ ಈ ಸಾಧನೆ ಸಚಿನ್ ತೆಂಡೂಲ್ಕರ್ ಹೆಸರಲ್ಲಿತ್ತು. ಸಚಿನ್ ಒಟ್ಟು 321 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು. ಆದರೆ ಕೊಹ್ಲಿ ಕೇವಲ 266 ಇನ್ನಿಂಗ್ಸ್ ಗಳಲ್ಲಿಯೇ 13 ಸಾವಿರ ರನ್ ಪೂರೈಸಿ ಸಚಿನ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಉಳಿದಂತೆ ಆಸ್ಟ್ರೇಲಿಯಾದ ಶ್ರೇಷ್ಠ ಆಟಗಾರ ರಿಕಿ ಪಾಂಟಿಂಗ್ ಅವರು 341 ಇನ್ನಿಂಗ್ಸ್‌ಗಳಲ್ಲಿ 13,000 ODI ರನ್ ಗಳಿಸುವ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

Latest Indian news

Popular Stories