ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಪಾಕ್‌ ವೇಗಿ ವಹಾಬ್

ಕರಾಚಿ: ಪಾಕಿಸ್ತಾನದ ಹಿರಿಯ ವೇಗಿ ವಹಾಬ್ ರಿಯಾಜ್ ಬುಧವಾರ (ಆ.16 ರಂದು) ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ್ದಾರೆ.

38ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ಅವರು ನಿವೃತ್ತಿ ಘೋಷಿಸಿದ್ದಾರೆ. ಜಗತ್ತಿನಾದ್ಯಂತದ ಫ್ರಾಂಚೈಸ್ ಆಧಾರಿತ ಕ್ರಿಕೆಟ್ ನಲ್ಲಿ ತನ್ನ ಆಟವನ್ನು ಮುಂದುವರೆಸುವುದಾಗಿ ಅವರು ಹೇಳಿದ್ದಾರೆ.

ನಿವೃತ್ತಿ ಬಗ್ಗೆ ಟ್ವೀಟ್‌ ಮಾಡಿರುವ ಅವರು “ಕಳೆದ ಎರಡು ವರ್ಷಗಳಿಂದ ನಾನು ನಿವೃತ್ತಿಯ ಬಗ್ಗೆ ಅಲೋಚನೆ ಮಾಡುತ್ತಿದ್ದೆ. 2023 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸುವುದು ನನ್ನ ಗುರಿಯಾಗಿತ್ತು. ವೃತ್ತಿ ಜೀವನದಲ್ಲಿ ನನ್ನ ದೇಶ ಮತ್ತು ರಾಷ್ಟ್ರೀಯ ತಂಡಕ್ಕೆ ನನ್ನಿಂದ ಸಾಧ್ಯವಿರುವಷ್ಟು ಉತ್ತಮವಾಗಿ ಸೇವೆ ಸಲ್ಲಿಸಿದ್ದೇನೆ. ಅಂತರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸುವುದು ಒಂದು ಗೌರವ ಮತ್ತು ಸವಲತ್ತು. ನಾನು ಈ ಅಧ್ಯಾಯಕ್ಕೆ ವಿದಾಯ ಹೇಳುತ್ತಿದ್ದೇನೆ. ಫ್ರಾಂಚೈಸ್ ಕ್ರಿಕೆಟ್‌ನಲ್ಲಿ ಹೊಸ ಸಾಹಸವನ್ನು ಪ್ರಾರಂಭಿಸಲು ನಾನು ಉತ್ಸುಹನಾಗಿದ್ದೇನೆ. ಅಲ್ಲಿ ನಾನು ವಿಶ್ವದ ಕೆಲವು ಅತ್ಯುತ್ತಮ ಪ್ರತಿಭೆಗಳ ವಿರುದ್ಧ ಸ್ಪರ್ಧಿಸುವಾಗ ಪ್ರೇಕ್ಷಕರನ್ನು ರಂಜಿಸುವ ವಿಶ್ವಾಸವಿದೆ” ಎಂದಿದ್ದಾರೆ.

27 ಟೆಸ್ಟ್, 91 ಏಕದಿನ ಮತ್ತು 36 T20I ಪಂದ್ಯಗಳನ್ನು ಆಡಿರುವ ವಹಾಬ್ ರಿಯಾಜ್ 237 ಅಂತರಾಷ್ಟ್ರೀಯ ವಿಕೆಟ್ ಗಳನ್ನು ಪಡೆದಿದ್ದಾರೆ. 2020 ರಲ್ಲಿ ಕೊನೆಯ ಬಾರಿ ಪಾಕ್‌ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೇ ಈ ವರ್ಷದ ಪಾಕಿಸ್ತಾನ್‌ ಸೂಪರ್‌ ಲೀಗ್‌ನಲ್ಲೂ ಅವರು ಆಡಿದ್ದರು.

ಪಾಕ್‌ ಪರ ಹಲವು ಸ್ಮರಣೀಯ ಪ್ರದರ್ಶನವನ್ನು ನೀಡಿದ್ದಾರೆ. 2015 ರಲ್ಲಿ ವಿಶ್ವಕಪ್‌ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಅಮೋಘ ಪ್ರದರ್ಶನವನ್ನು ನೀಡಿದ್ದರು. ಆ ಪಂದ್ಯದಲ್ಲಿ ವಹಾಬ್‌ ಅವರು ಅದ್ಭುತ ಬೌಲಿಂಗ್‌ ಸ್ಪೆಲ್‌ ಮಾಡಿದ್ದರೂ ಪಾಕ್‌ ಪಂದ್ಯವನ್ನು ಸೋತಿತ್ತು.

Latest Indian news

Popular Stories