ಉಡುಪಿ: ಅಂತಿಮ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ವಿವರ

ಉಡುಪಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂದಿಸಿದಂತೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾದ ಇಂದು ಅಂತಿಮವಾಗಿ, ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮವಾಗಿ, ಬಿ.ಜೆ.ಪಿ ಪಕ್ಷದ ಗುರುರಾಜ ಶೆಟ್ಟಿ ಗಂಟಿಹೊಳೆ , ಕಾಂಗ್ರೆಸ್ ಪಕ್ಷದ ಕೆ,ಗೋಪಾಲ ಪೂಜಾರಿ, ಜನತಾದಳ (ಜಾತ್ಯಾತೀತ)ದ ಮನ್ಸೂರ್ ಇಬ್ರಾಹಿಂ, ಆಮ್ ಆದ್ಮಿ ಪಾರ್ಟಿಯ ಸಿ.ಎ.ರಮಾನಂದ ಪ್ರಭು, ಉತ್ತಮ ಪ್ರಜಾಕೀಯ ಪಕ್ಷದ ಪ್ರಸಾದ್, ರಾಷ್ಟ್ರೀಯ ಸಮಾಜದಳ (ಆರ್) ನ ಕೊಲ್ಲೂರು ಮಂಜುನಾಥ ನಾಯ್ಕ, ಪಕ್ಷೇತರ ಅಭ್ಯರ್ಥಿಗಳಾದ ಚಂದ್ರಶೇಖರ ಜಿ, ಶ್ಯಾಮ ಬಿ, ಎಚ್.ಸುರೇಶ್ ಪೂಜಾರಿ ಚುನಾವಣಾ ಕಣದಲ್ಲಿದ್ದಾರೆ.

ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮವಾಗಿ, ಬಿ.ಜೆ.ಪಿ ಪಕ್ಷದ ಎ.ಕಿರಣ್ ಕುಮಾರ್ ಕೊಡ್ಗಿ, ಕಾಂಗ್ರೆಸ್ ಪಕ್ಷದ ದಿನೇಶ್ ಹೆಗ್ಡೆ ಮೊಳಹಳ್ಳಿ, ಜನತಾದಳ (ಜಾತ್ಯಾತೀತ)ದ ರಮೇಶ, ಉತ್ತಮ ಪ್ರಜಾಕೀಯ ಪಕ್ಷದ ಅರುಣ್ ದೀಪಕ್ ಮೆಂಡೋನ್ಸಾ ಮತ್ತು ಪಕ್ಷೇತರ ಅಭ್ಯರ್ಥಿ ಚಂದ್ರಶೇಖರ್ ಜಿ ಚುನಾವಣಾ ಕಣದಲ್ಲಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮವಾಗಿ ಜನತಾದಳ (ಜಾತ್ಯಾತೀತ)ದ ದಕ್ಷತ್ ಆರ್ ಶೆಟ್ಟಿ, ಆಮ್ ಆದ್ಮಿ ಪಾರ್ಟಿಯ ಪ್ರಭಾಕರ ಪೂಜಾರಿ, ಕಾಂಗ್ರೆಸ್ ಪಕ್ಷದ ಪ್ರಸಾದ್ ರಾಜ್ ಕಾಂಚನ್, ಬಿ.ಜೆ.ಪಿ ಪಕ್ಷದ ಯಶ್ ಪಾಲ್ ಸುವರ್ಣ, ಉತ್ತಮ ಪ್ರಜಾಕೀಯ ಪಕ್ಷದ ನಿತಿನ್ ವಿ ಪೂಜಾರಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಮದಾಸ ಭಟ್, ರಿಪಬ್ಲಿಕನ್ ಪಾರ್ಟಿ ಆರ್ಫ ಇಂಡಿಯಾ (ಕರ್ನಾಟಕ)ದ ಶೇಖರ್ ಹಾವಂಜೆ ಚುನಾವಣಾ ಕಣದಲ್ಲಿದ್ದಾರೆ.

ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮವಾಗಿ, ಬಿ.ಜೆ.ಪಿ ಪಕ್ಷದ ಗುರ್ಮೆ ಸುರೇಶ್ ಶೆಟ್ಟಿ, ಕಾಂಗ್ರೆಸ್ ಪಕ್ಷದ ವಿನಯ್ ಕುಮಾರ್ ಸೊರಕೆ, ಜನತಾದಳ (ಜಾತ್ಯಾತೀತ)ದ ಸಬಿನಾ ಸಮದ್, ಆಮ್ ಆದ್ಮಿ ಪಾರ್ಟಿಯ ಎಸ್.ಆರ್.ಲೋಬೋ, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಮಹಮದ್ ಹನೀಫ್ ಚುನಾವಣಾ ಕಣದಲ್ಲಿದ್ದಾರೆ.

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮವಾಗಿ, ಕಾಂಗ್ರೆಸ್ ಪಕ್ಷದ ಉದಯ ಶೆಟ್ಟಿ , ಆಮ್ ಆದ್ಮಿ ಪಾರ್ಟಿ ಯ ಡೇನಿಯಲ್ ಫೆಡ್ರಿಕ್ ರೇಂಜರ್ , ಜಾತ್ಯಾತೀತ ಜನತಾದಳದ ಶ್ರೀಕಾಂತ್ ಪೂಜಾರಿ , ಬಿ.ಜೆ.ಪಿ ಪಕ್ಷದ ವಿ.ಸುನೀಲ್ ಕುಮಾರ್, ಉತ್ತಮ ಪ್ರಜಾಕೀಯ ಪಕ್ಷದ ಅರುಣ್ ದೀಪಕ್ ಮೆಂಡೋನ್ಸಾ , ಪಕ್ಷೇತರ ಅಭ್ಯರ್ಥಿಗಳಾದ ಪ್ರಮೋದ್ ಮುತಾಲಿಕ್, ಡಾ.ಮಮತಾ ಹೆಗ್ಡೆ, ವಿದ್ಯಾಲಕ್ಷ್ಮಿ, ಸುಧಾಕರ ಆಚಾರ್ಯ ಚುನಾವಣಾ ಕಣದಲ್ಲಿದ್ದಾರೆ.

Latest Indian news

Popular Stories