ನೀತಿ ಸಂಹಿತೆ ಉಲ್ಲಂಘನೆ ಆರೋಪ ಮಣಿಪಾಲದ ಮುದ್ರಕ ಸಂಸ್ಥೆಯ ಮೇಲೆ ಎಫ್.ಐ.ಆರ್

ಉಡುಪಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಮಣಿಪಾಲದ ಮುದ್ರಕ ಸಂಸ್ಥೆಯ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ.

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ. ಇವರ ಪರಿಷ್ಕೃತ ನಡಾವಳಿ ನಂ.ಇ ಎಲ್ ಎನ್ (1) ಸಿ ಆರ್: 27 / 2023 / E-127455 ದಿನಾಂಕ: 22.02.2024.ರ ನೇಮಕಾತಿ ಆದೇಶದಂತೆ ಕಿರಣ ರಾಜಾರಾಮ್‌ ವಝೆ, ಫ್ಲೈಯಿಂಗ್‌ ಸ್ಕ್ವಾಡ್‌ ಟೀಮ್‌ -02. 120 ಉಡುಪಿ ವಿಧಾನಸಭಾ ಕ್ಷೇತ್ರ. ಇವರು 120 ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಫ್ಲೈಯಿಂಗ್‌ ಸ್ಕ್ವಾಡ್‌ ಟೀಮ್‌ -02 ರಲ್ಲಿ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ರವರು “ಕರಾವಳಿಗರ :ಬಯಲು ಸೀಮೆ – ಮಲೆನಾಡ ಗಟ್ಟಿ ಧ್ವನಿ” ಎಂಬ ಶೀರ್ಷಿಕೆಯೊಂದಿಗೆ ನಾಲ್ಕು ಪುಟಗಳ ಕರಪತ್ರಗಳನ್ನು ಮುದ್ರಿಸಿ ನೀಡಿದ್ದು ಅದನ್ನು ಸಾರ್ವಜನಿಕವಾಗಿ ಎಪ್ರಿಲ್ 16 ರಿಂದ ಉಡುಪಿಯಲ್ಲಿ ಹಂಚಿಕೆ ಮಾಡಿರುತ್ತಾರೆ.

ಈ ಸಂಬಂಧ ಮನೋಹರ್‌ ಕಲ್ಮಾಡಿ ಎಂಬವರು ಕರಪತ್ರದಲ್ಲಿ ಪ್ರಕಾಶಕರ ಹೆಸರು, ಮುದ್ರಕರ ಹೆಸರು, ಮುದ್ರಣದ ವಿಳಾಸ ಹಾಗೂ ಮುದ್ರಿತ ಪ್ರತಿಗಳ ಸಂಖ್ಯೆ ಇತ್ಯಾದಿ ವಿವರಗಳನ್ನು ನಮೂದಿಸದೇ ಇರುವ ಕಾಂಗ್ರೆಸ್‌ ಅಭ್ಯರ್ಥಿಯು ಕರಪತ್ರಗಳನ್ನು ವಿತರಣೆ ಮಾಡುತ್ತಿದ್ದರು. ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿರುತ್ತಾರೆ. ಈ ಕುರಿತು ಜಿಲ್ಲಾ ಚುನಾವಣಾಧಿಕಾರಿಗಳು ಅಭ್ಯರ್ಥಿಗೆ ನೋಟೀಸ್‌ ನೀಡಿದ್ದು ನೋಟೀಸ್‌ ಗೆ ಉತ್ತರವಾಗಿ ಕಾಂಗ್ರೆಸ್‌ ಅಭ್ಯರ್ಥಿಯಾದ ಕೆ. ಜಯಪ್ರಕಾಶ್‌ ಹೆಗ್ಡೆರವರು  ಕರಪತ್ರಗಳನ್ನು ಮುದ್ರಿಸಿ ಕೊಡಲು ಮಣಿಪಾಲ ಟೆಕ್ನಾಲಜಿ ಲಿಮಿಟೆಡ್‌ ಮಣಿಪಾಲ. ಎಂಬ ಸಂಸ್ಥೆಗೆ 2,20,000-00 ರೂ ಗಳು ಮುಂಗಡವಾಗಿ ಹಣವನ್ನು ನೀಡಿರುವುದಾಗಿ ತಿಳಿಸಿರುತ್ತಾರೆ.

ಈ ಸಂಬಂಧ ಜಿಲ್ಲಾ ಚುನಾವಣಾಧಿಕಾರಿಗಳು ಕಾಂಗ್ರೆಸ್‌ ಅಭ್ಯರ್ಥಿಯ ಕರಪತ್ರಗಳನ್ನು ಮುದ್ರಿಸಿದ ಮಣಿಪಾಲ ಟೆಕ್ನಾಲಜಿ ಸಂಸ್ಥೆಗೆ  ನೋಟೀಸ್‌ ನೀಡಿದ್ದು ಅವರು ನೋಟೀಸ್‌ ಗೆ ಯಾವುದೇ ಉತ್ತರವನ್ನು ನೀಡಿರುವುದಿಲ್ಲ.  ಮುದ್ರಿಸಿದ ಮೂರು ದಿನಗಳೊಳಗಾಗಿ  ಚುನಾವಣಾಧಿಕಾರಿಗಳ ಕಛೇರಿಗೆ ಅಪೆಡಿಕ್ಸ್‌ ಬಿ (ಡಿಕ್ಲರೇಷನ್‌) ಮುದ್ರಿತ  ಕರಪತ್ರಗಳೊಂದಿಗೆ ನಿಯಮಾನುಸಾರ ನೀಡಿರುವುದಿಲ್ಲ. ಇದು ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಆದ್ದರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆಪಾದಿತರಾದ ಪ್ರಕಾಶಕರು, ಮಣಿಪಾಲ ಟೆಕ್ನಾಲಜಿ ಲಿಮಿಟೆಡ್‌ ಮಣಿಪಾಲ ಇವರ ಮೇಲೆ ಕ್ರಮ ಕೈಗೊಳ್ಳುವಂತೆ ವರದಿ ನೀಡಿದ್ದು ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 85/2024 ಕಲಂ:127(A)(1),127 (A)(2)(a)(b) R P Act R/W 188 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories