Featured StoryUdupi

ಮಲ್ಪೆ: ಗಡೀಪಾರು ಆದೇಶ ಕೊಡಲು ಹೋದಾಗ ಪರಾರಿ – ಪ್ರಕರಣ ದಾಖಲು

ಮಲ್ಪೆ: ದೂರುದಾರ ಶಿವಕುಮಾರ್ ಎಸ್ ಆರ್, PSI ಕಾರ್ಕಳ ನಗರ ಠಾಣೆ ಕಾರ್ಕಳ ಇವರು ಮಾನ್ಯ ಪೊಲೀಸ್ ಅಧೀಕ್ಷಕರ ಆದೇಶ ಸಂಖ್ಯೆ MAG SR-04/2026 ಅನ್ವಯ ಮಹಮ್ಮದ್ ಫೈಜಲ್ ಎಂಬುವವರಿಗೆ ಹೊರ ಜಿಲ್ಲೆಗೆ ಗಡಿ ಪಾರು ಆದೇಶದ ಪ್ರತಿಯನ್ನು ಜಾರಿ ಮಾಡಲು ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಹೂಡೆ ನಾಗಬ್ರಹ್ಮ ಬಬ್ಬುಸ್ವಾಮಿ ದೈವಸ್ಥಾನದ ಹತ್ತಿರ ಇರುವಿಕೆಯನ್ನು ಖಚಿತಪಡಿಸಿಕೊಂಡು
ಆದೇಶದ ಪ್ರತಿಯನ್ನು ಜಾರಿ ಮಾಡಲು ಹೋಗಿದ್ದರು.

ಈ ಸಂದರ್ಭದಲ್ಲಿ ಮಹಮ್ಮದ್ ಫೈಜಲ್ ನು ತಾನು ಕುಳಿತುಕೊಂಡಿದ್ದ KA-20 MB-7666 ನಂಬರ ಬಿಳಿ ಬಣ್ಣದ ಕಾರನ್ನು ಒಮ್ಮಲೇ ಹಿಮ್ಮುಖವಾಗಿ ಚಲಿಸಿದಾಗ ರಸ್ತೆಯ ಪಕ್ಕದಲ್ಲಿ ಇದ್ದ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು, ಓಡಿ ಹೋಗಿರುತ್ತಾನೆ, ಸದರಿ ಸಮಯ ಆತನ ಕಾರು ಜಖಂಗೊಡಿರುತ್ತದೆ, ಈ ಅಪಘಾತಕ್ಕೆ ಮಹಮ್ಮದ್ ಫೈಜಲ್ ಇವರ ಅಜಾರತೂಕತೆ ಹಾಗೂ ನಿರ್ಲಕ್ಷತನದ ಚಾಲನೆಯೇ ಕಾರಣವಾಗಿರುವುದಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 37/2026 ಕಲಂ: 281 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Back to top button