Featured StoryUdupi

ಮಣಿಪಾಲ | ಧರ್ಮಗಳ ನಡುವೆ ವೈಮನಸ್ಸು ಉಂಟುಮಾಡುವ ಪೋಸ್ಟ್ – ಇಬ್ಬರ ಬಂಧನ

ಮಣಿಪಾಲ, ಜ. 2:ಕಾರ್ಕಳದ ವಿವಾಹಿತ ಹಿಂದೂ ಮಹಿಳೆ ಹಾಗೂ ಮುಸ್ಲಿಂ ಯುವಕನ ಕುರಿತು ವ್ಯಂಗ್ಯವಾಗಿ ಧರ್ಮಗಳ ನಡುವೆ ವೈಮನಸ್ಸು ಉಂಟುಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ ಆರೋಪದಲ್ಲಿ ಇಬ್ಬರು ಯುವಕರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ನಿತೇಶ್ ಕೆ (20), ತಂದೆ: ಬೆಳ್ಳಿಯಪ್ಪ ಗೌಡ, ಪುತ್ತೂರು ರಸ್ತೆ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಹಿತೇಶ್ ಎ (19), ತಂದೆ: ಜಯಂತ ಗೌಡ, ಸಿರಿಬಾಗಿಲು ಗ್ರಾಮ, ಗುಂಡ್ಯ ಅಂಚೆ, ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ಎಂದು ಗುರುತಿಸಲಾಗಿದೆ.

ದಿನಾಂಕ 16/05/2025 ರಂದು ಅಂರ್ತಜಾಲ ಮಾಧ್ಯಮದಲ್ಲಿ ಈ ವಿವಾದಾತ್ಮಕ ಪೋಸ್ಟ್‌ ಹರಿದಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ ಮಣಿಪಾಲ ಪೊಲೀಸರು ಸ್ವಪಿರ್ಯಾದಿ ದಾಖಲಿಸಿಕೊಂಡು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 105/2025 ಕಲಂ 353(2), 56 BNS ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ತನಿಖೆ ವೇಳೆ ಮೆಟಾಡಾಟಾ ಆಧಾರದ ಮೇಲೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಅಪ್ಲೋಡ್ ಮಾಡಿದ ಆರೋಪಿತರನ್ನು ಪತ್ತೆ ಹಚ್ಚಲಾಗಿದ್ದು, ನಿತೇಶ್ ಕೆ ಅವರನ್ನು ದಿನಾಂಕ 30/01/2026 ರಂದು ಪುತ್ತೂರು ತಾಲೂಕಿನ ಕಲ್ಲಬ ಜಂಕ್ಷನ್ ಬಳಿ ಹಾಗೂ ಹಿತೇಶ್ ಎ ಅವರನ್ನು ದಿನಾಂಕ 01/02/2026 ರಂದು ಮಂಗಳೂರು ಲಾಲ್‌ಬಾಗ್ ಪ್ರದೇಶದಲ್ಲಿ ಬಂಧಿಸಲಾಗಿದೆ.

ಬಂಧಿತರಿಂದ ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆದು, ಆರೋಪಿತರನ್ನು ಮುಂದಿನ ಕ್ರಮಕ್ಕಾಗಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Back to top button