Udupi

ಮಣಿಪಾಲ: ಸಹಪಾಠಿಗೆ ಹಲ್ಲೆ – ಮೂವರು ವಿದ್ಯಾರ್ಥಿಗಳ ಬಂಧನ

ಮಣಿಪಾಲ: ಮಣಿಪಾಲ ಕಾಲೇಜಿನ ತರಗತಿಯಲ್ಲಿ ಸಹಪಾಠಿಗೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಮೂವರು ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.


ಬಂಧಿತರನ್ನು ವಿದ್ಯಾರ್ಥಿಗಳಾದ ವಿಕ್ರಂ ವೀರ್ ಸಿಂಗ್ ರಾಜವೀರ್ ಸಿಂಗ್ ಹಾಗು ಶಾಹ್ ಕ್ರಿಶ್ ಮಾಲಾವ್ ಎಂದು ಗುರುತಿಸಲಾಗಿದೆ.


ರಾಜ್ ಗಿರೀಶ್ ಸುವರ್ಣ ಹಾಗೂ ಅವರ ಸ್ನೇಹಿತ ಸಾತ್ವಿಕ್ ಬಂಢಾರಿ ಮಣಿಪಾಲದ ಪ್ರತಿಷ್ಠಿತ ಕಾಲೇಜಿನಲ್ಲಿ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ವಿಧ್ಯಾಬ್ಯಾಸ ಮಾಡಿಕೊಂಡಿದ್ದು ಸೆ.೧೮.ರಂದು ಬೆಳಗ್ಗೆ ತರಗತಿಯಲ್ಲಿದ್ದ ಇವರಿಗೆ ಆರೋಪಿಗಳಾದ ರಾಜ್ ವೀರ್ ಸಿಂಗ್, ವಿಕ್ರಮ್ ಸಿಂಗ್ ಹಾಗೂ ಕ್ರಿಶ್ ಎಂಬವರು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಮಾರಾಣಾಂತಿಕ ಹಲ್ಲೆ ಮಾಡಿರುವುದಾಗಿ ದೂರಲಾಗಿತ್ತು. ಈ ಬಗ್ಗೆ ಆರೋಪಿಗಳ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣ ತನಿಖೆಯಲ್ಲಿ ಮಣಿಪಾಲದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳಾಗಿರುವ ಆರೋಪಿಗಳು, ಮಾದಕ ಪದಾರ್ಥವನ್ನು ಸೇವನೆ ಮಾಡಿರುವುದು ಪತ್ತೆ ಯಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Back to top button