ಹೂಡೆಯ ಹೊಟೇಲ್ ವೈಟರ್’ಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಾಲ್ಕು ಲಕ್ಷ ಆನ್ಲೈನ್ ವಂಚನೆ

ಮಲ್ಪೆ: ಹೂಡೆಯ ಪ್ಯಾರಡೈಸ್ ಹೋಟೆಲ್ನಲ್ಲಿ ವೈಟರ್ ಕೆಲಸ ಮಾಡಿಕೊಂಡಿರುವ ಕ್ರಿಸ್ಟನ್ ಡಿಸೋಜಾ ಅವರಿಗೆ ಕಂಪೆನಿಯೊಂದರಲ್ಲಿ ಕೆಲಸ ಕೊಡಿಸುವುದಾಗಿ ಆನ್ಲೈನ್ ವಂಚನೆ ನಡೆಸಿದ್ದಾರೆ.

ಕ್ರಿಸ್ಟನ್ ಡಿಸೋಜ ಎಂಬುವರು ಉಡುಪಿಯ ಹೂಡೆಯಲ್ಲಿರುವ ಪ್ಯಾರಡೈಸ್ ಹೋಟೆಲ್ನಲ್ಲಿ ವೈಟರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಇವರು 07/10/2023 ರಂದು ಸುಮಾರು 12:30 ಗಂಟೆಗೆ ಮೊಬೈಲ್ ನಂಬರಿಗೆ 7259432738 ರಿಂದ 07.10.2023 ರಂದು 12:30 ಗಂಟೆಯಿಂದ 08.02.2024 ರವರೆಗೆ ಬೇರೆ ಬೇರೆ ದಿನಗಳಲ್ಲಿ ಗ್ಲೋಬಲ್ ಕೆರಿಯರ್ ಸೊಲ್ಯೂಶನ್ ಎಂಬ ಕಂಪೆನಿಯ ಹೆಸರಿನಲ್ಲಿ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ 07428582375 ನೇ ನಂಬ್ರದಿಂದ, ಸುಮಿತ್‌ ಮ್ಯಾನೇಜರ್‌ ಎಂಬುವರು 09717249719 ನಂಬ್ರದಿಂದ ಮತ್ತು ಸುಭಾಸ್‌ ಚೌಹಾನ್‌, ಮ್ಯಾನೇಜರ್‌ ಎಂಬುವರು 09871164759 ಹೀಗೆ ಒಟ್ಟು 3 ನಂಬ್ರಗಳಿಂದ ಪರಿಚಯಿಸಿ, ಕರೆ ಮಾಡಿ ಹಣವನ್ನು ಕೇಳಿ ಗೂಗಲ್‌ ಪೇ ಮೂಲಕ ಒಟ್ಟು ರೂ 4,42,645/- ಹಣವನ್ನು ಪಡೆದು, ಉದ್ಯೋಗ ದೊರಕಿಸದೇ ಮತ್ತು ಹಣವನ್ನು ವಾಪಾಸ್ಸು ನೀಡದೇ ಮೋಸ ಮಾಡಿರುತ್ತಾರೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 70/2024 ಕಲಂ: 406,  417,  420 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

Latest Indian news

Popular Stories