ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ | “ಸ್ಥಳೀಯ ಅಭ್ಯರ್ಥಿ ನೋಡಿ ಮತ ಚಲಾಯಿಸಿ ಎಂದ ನಟ”

ಉಡುಪಿ: ಕುಕ್ಕಿಕಟ್ಟೆ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಟ ರಕ್ಷಿತ್ ಶೆಟ್ಟಿ ಮತದಾನ ಮಾಡಿದರು.

ಬೆಂಗಳೂರಿನಲ್ಲಿದ್ದ ನಟ ರಕ್ಷಿತ್ ಶೆಟ್ಟಿ ಮತದಾನಕ್ಕಾಗಿ ಉಡುಪಿಯ ಕುಕ್ಕಿಕಟ್ಟೆಗೆ ಬಂದು ತಂದೆ ಶ್ರೀಧರ್ ಶೆಟ್ಟಿ, ತಾಯಿ ರಂಜನಿ ಶೆಟ್ಟಿ ಅವರೊಂದಿಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.

ಈ ವೇಳೆ ಮಾತನಾಡಿದ ಅವರು ಎಲ್ಲರೂ ತಪ್ಪದೆ ಮತದಾನ ಮಾಡಿ ಎಂದು ಅರಿವು ಮೂಡಿಸಿದರು. ಪ್ರತಿಬಾರಿ ಒಬ್ಬರನ್ನೇ ಆಯ್ಕೆ ಮಾಡಬಾರದು. ಬದಲಾವಣೆ ಬೇಕು. ಸ್ಥಳೀಯ ಅಭ್ಯರ್ಥಿ ನೋಡಿ‌ಮತ ಚಲಾಯಿಸಿ ಎಂದು ಕರೆ ನೀಡಿದರು.

Latest Indian news

Popular Stories