ಉಡುಪಿ: ಬಿಜೆಪಿ, ಮೋದಿ ಅಧಿಕಾರಕ್ಕಾಗಿ ಸುಳ್ಳು ಹೇಳಿ ಎತ್ತಿ ಕಟ್ಟುವ ಕೆಲಸ ಮಾಡುತ್ತಾರೆ – ಇಂಧನ ಸಚಿವ ಕೆ.ಜೆ.ಜಾರ್ಜ್

ಬಿಜೆಪಿ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಕೇವಲ ಅಧಿಕಾರಕ್ಕಾಗಿ ಕೇವಲ ಸುಳ್ಳು ಭರವಸೆ, ಧರ್ಮ ಜಾತಿಗಳನ್ನು ಎತ್ತಿ ಕಟ್ಟುತ್ತಿದೆ. ಇದೇ ವಿಚಾರ ಮುಂದಿಟ್ಟುಕೊಂಡು ಮತ ಕೇಳುತ್ತಾರೆಯೇ ಹೊರತು ಇವರಲ್ಲಿ ಕಳೆದ 10ವರ್ಷಗಳ ಅಧಿಕಾರದಲ್ಲಿ ಮಾಡಿದ ಸಾಧನೆ ಏನು ಇಲ್ಲ. ಇವರು ತಮ್ಮ ಪ್ರಣಾಳಿಕೆಯಲ್ಲಿದ್ದ 600 ಭರವಸೆಯಲ್ಲಿ ಕೇವಲ 50-60 ಮಾತ್ರ ಅನುಷ್ಠಾನ ಮಾಡಿದ್ದಾರೆ ಎಂದು ಇಂಧನ ಸಚಿವ ಕೆ.ಜೆ.ಜಾಜ್೯ ಆರೋಪಿದ್ದಾರೆ

ಇತ್ತೀಚೆಗೆ ಮೈಸೂರಿನಲ್ಲಿ ಮೋದಿ ತನ್ನ ಪಕ್ಕದಲ್ಲೇ ಯಡಿಯೂರಪ್ಪ ಅವರವ್ವ ಕುಳ್ಳಿರಿಸಿಕೊಂಡು ನೆಹರು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಇವರೊಂದಿಗೆ ಮೈತ್ರಿ ಮಾಡಿರುವ ದೇವೇಗೌಡರ ಇಡೀ ಕುಟುಂಬವೇ ಅವರ ಪಕ್ಷದಲ್ಲಿ ತುಂಬಿದೆ. ಬ್ರೀಟಿಷರ ವಿರುದ್ಧ ಹೋರಾಟ ಮಾಡಿದ ಒಬ್ಬ ಒಬ್ಬನೇ ವ್ಯಕ್ತಿ ಬಿಜೆಪಿಯಲ್ಲಿ ಇಲ್ಲ. ಯಾರು ಹುಡುಕಿದರೂ ಸಿಗಲ್ಲ. ಬಿಜೆಪಿಯವರು ವಲ್ಲಭಬಾಯಿ ಪಾಟೇಲ್ ಅವರನ್ನು ರಾಜಕೀಯ ಸ್ವಾರ್ಥಕ್ಕಾಗಿ ಬಳಸಿ ಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು.

ಇಂದು ಕರ್ನಾಟಕ ತೀವ್ರ ಬರಗಾಲದಿಂದ ತತ್ತರಿಸಿ ಹೋಗಿದೆ. ಬರಗಾಲ ದಿಂದ ಆಗಿರುವ ನಷ್ಟದ ವಿವರವನ್ನು ರಾಜ್ಯ ಸರಕಾರವು ಕಳೆದ ಆಗಸ್ಟ್ ತಿಂಗಳಲ್ಲಿಯೇ ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ ಡಿಸೆಂಬರ್‌ನಲ್ಲಿ ಕೇಂದ್ರ ತಂಡ ರಾಜ್ಯಕ್ಕೆ ಬಂದು ಪರ ಪರಿಶೀಲನೆ ನಡೆಸಿದೆ. ಆದರೆ ಕೇಂದ್ರ ಈವರೆಗೆ ರಾಜ್ಯಕ್ಕೆ ಬರ ಸಂಬಂಧ ಒಂದು ರೂಪಾಯಿ ಕೂಡ ಪರಿಹಾರ ಕೊಡಲಿಲ್ಲ. ಇದು ಕೇಂದ್ರ ಸರಕಾರ ರಾಜ್ಯಕ್ಕೆ ಮಾಡಿರುವ ದೊಡ್ಡ ಅನ್ಯಾಯವಾಗಿದೆ. ಇವರು ಯಾವ ಮುಖ ಇಟ್ಟುಕೊಂಡು ಕರ್ನಾಟಕಕ್ಕೆ ಬಂದು ಮತ ಕೇಳುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಕೇಂದ್ರಕ್ಕೆ ತೆರಿಗೆ ಪಾವತಿಯಲ್ಲಿ ಇಡೀ ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನ ದಲ್ಲಿ ಇದೆ. ಈ ವಿಚಾರದಲ್ಲೂ ಕೇಂದ್ರ ಸರಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಈ ರೀತಿ ಅನ್ಯಾಯ ಮಾಡಿಯೂ ಕೂಡ ಇಲ್ಲಿ ಬಂದು ಧೈರ್ಯ ದಿಂದ ಮತ ಕೇಳುತ್ತಿದ್ದಾರೆ. ಇವರ ದಪ್ಪ ಚರ್ಮದವರು. ಇವರಿಗೆ ಯಾವುದೇ ಸೂಕ್ಷ್ಮತೆ ಇಲ್ಲವಾಗಿದೆ ಎಂದು ಅವರು ಟೀಕಿಸಿದರು.

ರಾಜೀವ ಗಾಂಧಿ ಕಾಲದಲ್ಲಿ ನಾವು ಕೂಡ ರಾಜ್ಯದಲ್ಲಿ 28ಕ್ಕೆ 28 ಸ್ಥಾನವನ್ನು ಗೆದ್ದಿದ್ದೇವೆ. ಈಗ ಅವರು ಒಂದು ಸಂದರ್ಭದಲ್ಲಿ ಗೆದ್ದಿದ್ದಾರೆ ಅಷ್ಟೆ. ನಾವು ಈ ಬಾರಿ 28ರಲ್ಲಿ 28 ಗೆಲ್ಲ ಬೇಕೆಂದೇ ಚುನಾವಣೆ ಎದುರಿಸುತ್ತಿದ್ದೇವೆ ಎಂದರು.

ಸಿದ್ಧರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಒಳ್ಳೆಯ ಕೆಲಸ ಮಾಡುತ್ತಿ ದ್ದಾರೆ. ಇವರಿಬ್ಬರು ಜೊತೆಯಲ್ಲಿಯೇ ಇದ್ದು ಪ್ರಚಾರ ಮಾಡುತ್ತಿದ್ದಾರೆ. ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕೆ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್, ಶಾಸಕರು ತೀರ್ಮಾನ ಮಾಡುತ್ತಾರೆಯೇ ಹೊರತು ಯಾರೋ ಒಬ್ಬರೇ ಹೇಳಿದಾಗೆ ಆಗಲ್ಲ. ಕೆಲವರು ಮುಖಪುಟದಲ್ಲಿ ಸುದ್ದಿ ಬರಲು ಈ ರೀತಿಯ ಹೇಳಿಕೆ ಕೊಡುತ್ತಾರೆ. ಹುಬ್ಬಳ್ಳಿ ವಿದ್ಯಾರ್ಥಿನಿ ಕೊಲೆ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ನಾವು ಪೊಲೀಸ್ ಇಲಾಖೆಗೆ ಮುಕ್ತ ಅವಕಾಶ ಮಾಡಿಕೊಟ್ಟಿದ್ದೇವೆ. ಇದರಲ್ಲಿ ಯಾವುದೇ ಹಸ್ತಕೆ್ಷೀಪ ಇಲ್ಲ ಎಂದು ಅವರು ಹೇಳಿದರು

Latest Indian news

Popular Stories