
ನಟ ಬಾವತೀಸ್ ಅಪಘಾತದಲ್ಲಿ ಮೃತ್ಯು
ಕಾರವಾರ : ಬಸ್ ಹಾಗೂ ದ್ವಿ ಚಕ್ರವಾಹನದ ನಡುವೆ ನಡೆದ ಅಪಘಾತದಲ್ಲಿ ನಟ ಬಾವತೀಸ್ ಮೃತಪಟ್ಟಿದ್ದಾರೆ.
ಯಲ್ಲಾಪುರ ಬಳಿ ಕೋಳಿಕೆರೆ ಸಮೀಪ ನಿಂತಿದ್ದ ಬಸ್ಸಿಗೆ ಅತೀ ವೇಗದಲ್ಲಿ ಬಂದ ಟಿವಿಎಸ್ ಮೊಪೆಡೆ ದ್ವಿಚಕ್ರ ವಾಹನ ಸವಾರ ಡಿಕ್ಕಿ ಹೊಡೆದಿದ್ದಾನೆ . ಅಪಘಾತದ ರಭಸಕ್ಕೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಬಾವತೀಸ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಡಿಕ್ಕಿ ಹೊಡೆದ ರಭಸಕ್ಕೆ ಟಿವಿಎಸ್ ಮೊಫೆಡ್ ಗೆ ಬೆಂಕಿ ತಗಲಿದೆ. ತಕ್ಷಣ ಬಸ್ ಚಾಲಕ ,ನಿರ್ವಾಹಕರೇ ವಾಹನಕ್ಕೆ ಬಿದ್ದ ಬೆಂಕಿ ಆರಿಸಿದ್ದಾರೆ ಎನ್ನಲಾಗಿದೆ.
ಅಪಘಾತದ ಸ್ಥಳದಲ್ಲೇ ಕುಸಿದು ಬಿದ್ದಿದ್ದ ಬಾವತೀಸ್
ಮೃತಪಟ್ಟಿದ್ದ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹಳ್ಳಿ ಹೈದ ಪ್ಯಾಟೆಗೆ ಬಂದ ಸೀಸನ್ -3 ರಿಯಾಲಿಟಿ ಶೋನಲ್ಲಿ ಹಳಿಯಾಳ ತಾಲೂಕಿನ ವಾಡಗರಡೊಳ್ಳಿ ನಿವಾಸಿ ಬಾವತೀಸ್ ಭಾಗವಹಿಸಿದ್ದ ಮೂಲತಃ ಸಿದ್ದಿ ಜನಾಂಗದ ಈ ಪ್ರತಿಭೆ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಮೂಲಕ ಪ್ರಸಿದ್ದಿ ಪಡೆದಿದ್ದ.
ಮೂರು ವರ್ಷಗಳ ಹಿಂದೆ ಈತನ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಎರಡು ವರ್ಷಗಳ ಹಿಂದೆಯಷ್ಟೇ ಇವರ ಮಗ ಬಾವಿಗೆ ಬಿದ್ದು ಸಾವನ್ನಪ್ಪಿದ್ದ.




