
ಕಾರವಾರ | ಹಸೆ ಮಣೆ ಏರಲಿದ್ದ ವೈದ್ಯನ ಕೊಲೆ : ತನಿಖೆ ಆರಂಭ
ಕಾರವಾರ : ಹಸೆ ಮಣೆ ಏರಲಿದ್ದ ವೈದ್ಯನ ಕೊಲೆ ಶಿರಸಿಯ ಕೆ ಎಚ್ ಬಿ ಕಾಲೋನಿಯಲ್ಲಿ ನಡೆದಿದ್ದು ರವಿವಾರ ಸಂಜೆ ಬೆಳಕಿಗೆ ಬಂದಿದೆ.
ಡಾ. ರಮೇಶ್ ಕಲಗುಟಕರ್ (51) ಹತ್ಯೆಯಾದ ವೈದ್ಯರಾಗಿದ್ದಾರೆ.
ಕೊಲೆಯಾದ ವೈದ್ಯನ ಪತ್ನಿ ಈಚೆಗೆ ಕೆಲ ತಿಂಗಳುಗಳ ಹಿಂದೆ ಮೃತಪಟ್ಟಿದ್ದು, ಆಕೆಯ ಸಹೋದರಿಯನ್ನು ಮದುವೆಯಾಗಲು ವೈದ್ಯ ಸಿದ್ಧತೆ ಮಾಡಿಕೊಂಡಿದ್ದರು.
ಡಾ. ರಮೇಶ್ ಕಲಗುಟಕರ್ ಅವರ ಪತ್ನಿ ಕಳೆದ ಎಂಟು ತಿಂಗಳ ಹಿಂದೆ ಹೃದಯಾಘಾತವಾಗಿ ಮೃತಪಟ್ಟಿದ್ದರು ಎನ್ನಲಾಗಿದೆ. ಈ ದಂಪತಿಗಳಿಗೆ ಇಬ್ಬರು ಮಕ್ಕಳು ಇದ್ದು, ಒಬ್ಬ ವೈದ್ಯ ವೃತ್ತಿ ಮಾಡುತ್ತಿದ್ದಾರೆ. ಇನ್ನೊಬ್ಬ ಮಗ ಯುಪಿಯಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾನೆ ಎನ್ನಲಾಗಿದೆ.
ಪತ್ನಿಯ ಸಹೋದರಿಯನ್ನೇ ವಿವಾಹವಾಗಲು ಸಿದ್ದತೆ ನಡೆದಿತ್ತು. ವೈದ್ಯ ರಮೇಶ್ ಅಕ್ಷಯ ತೃತೀಯ ದಂದು (ಸೋಮವಾರ) ವಿವಾಹ ಮಹೋರ್ತವಿತ್ತು.
ಮದುವೆಗಾಗಿ ಖರಿದೀಸಿದ್ದ ಒಡವೆಗಳನ್ನ ಬ್ಯಾಂಕ್ ನಿಂದ
ತಂದು ಮನೆಯಲ್ಲಿ ಇಟ್ಟಿದ್ದರು ಎನ್ನಲಾಗಿದೆ. ಯಾರೋ ಆಗುಂತಕರು ಒಡವೆಗಾಗಿ ಹತ್ಯೆ ಮಾಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ದೊರತಿದೆ. ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಶಿರಸಿ ಡಿವೈಎಸ್ಪಿ , ಗೀತಾ ಪಾಟೀಲ ಸಿಪಿಐ ಶಶಿಕಾಂತ ವರ್ಮಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ,ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




