Featured StoryUttara Kannada

ಕಾರವಾರ :ವಿವಾಹಿತ ಮಹಿಳೆ ಕಾಣೆ

ಗಂಡನ ಮನೆಗೆ ಹೋಗುವುದಾಗಿ ಹೇಳಿ ತೆರಳಿದ್ದ 27 ವರ್ಷದ ಮಹಿಳೆಯೊಬ್ಬರು ದಿಢೀರ್ ಕಾಣೆಯಾಗಿರುವ ಘಟನೆ ಮರಾಠಿ ಕೊಪ್ಪ ದಿಂದ ವರದಿಯಾಗಿದೆ.ಶಿರಸಿಯ ಮರಾಠಿ ಕೊಪ್ಪ ನಿವಾಸಿ ಐಶ್ವರ್ಯ ಕಾಣೆಯಾದ ವಿವಾಹಿತ ಮಹಿಳೆಯಾಗಿದ್ದಾರೆ

ಕಾರವಾರ : ಗಂಡನ ಮನೆಗೆ ಹೋಗುವುದಾಗಿ ಹೇಳಿ ತೆರಳಿದ್ದ 27 ವರ್ಷದ ಮಹಿಳೆಯೊಬ್ಬರು ದಿಢೀರ್ ಕಾಣೆಯಾಗಿರುವ ಘಟನೆ ಮರಾಠಿ ಕೊಪ್ಪ ದಿಂದ ವರದಿಯಾಗಿದೆ.ಶಿರಸಿಯ ಮರಾಠಿ ಕೊಪ್ಪ ನಿವಾಸಿ ಐಶ್ವರ್ಯ ಕಾಣೆಯಾದ ವಿವಾಹಿತ ಮಹಿಳೆಯಾಗಿದ್ದಾರೆ.ಸನ್ನಿಕುಮಾರ ನಾಯ್ಕ ಇವರ ಪತಿ ಯಾಗಿದ್ದಾರೆ.

ಗೋಧಿ ಮೈ ಬಣ್ಣ, ದುಂಡನೆಯ ಮುಖ ಹಾಗೂ ಸುಮಾರು 5.4 ಅಡಿ ಎತ್ತರವಿರುವ ಈಕೆ, ಮನೆಯಿಂದ ತೆರಳುವಾಗ ಹಸಿರು ಬಣ್ಣದ ಚೂಡಿದಾರ, ಹಸಿರು ಪ್ಯಾಂಟ್ ಹಾಗೂ ಕೆಂಪು ಬಣ್ಣದ ವೇಲ್ ಧರಿಸಿದ್ದರು. ಐಶ್ವರ್ಯ ಅವರು
ಕನ್ನಡ, ಹಿಂದಿ ಮತ್ತು ಕೊಂಕಣಿ ಭಾಷೆಗಳನ್ನು ಸುಲಲಿತವಾಗಿ ಮಾತನಾಡುವ ಇವರು,ಗಂಡನ ಮನೆಗೆ ತೆರಳುವುದಾಗಿ ಹೇಳಿ ಹೋದವರು,ಇದುವರೆಗೆ ಮನೆಗೆ ಮರಳದೆ ನಾಪತ್ತೆಯಾಗಿದ್ದಾಳೆ.

ಈ ಚಹರೆಯ ಮಹಿಳೆಯ ಬಗ್ಗೆ ಯಾವುದೇ ರೀತಿಯ ಮಾಹಿತಿ ಅಥವಾ ಸುಳಿವು ದೊರೆತಲ್ಲಿ ಸಾರ್ವಜನಿಕರು ತಕ್ಷಣವೇ ಕಾರವಾರ ಪೊಲೀಸ್ ಕಂಟ್ರೋಲ್ ರೂಮ್ (08382-226550), ಮುಂಡಗೋಡ ಪೊಲೀಸ್ ಠಾಣೆ (08301-222211) ಅಥವಾ ಮುಂಡಗೋಡ ಪಿ.ಎಸ್.ಐ. (9480805275), ಪಿ.ಐ. (9480805258) ಅವರ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಮುಂಡಗೋಡ ಪೊಲೀಸ್ ತನಿಖಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Back to top button